ಮುಖದ ಮೇಲಿನ ಮೊಡವೆಗೆ ವಿಕ್ಸ್ (Vicks) ಹಚ್ಚಬಹುದಾ? ಚರ್ಮರೋಗ ತಜ್ಞರ ಸಲಹೆ ನೀವೂ ತಿಳಿದುಕೊಳ್ಳಿ!

Published : Aug 14, 2026, 12:13 PM IST
Vicks Used for Pimples

ಸಾರಾಂಶ

ಮೊಡವೆ ನಿವಾರಣೆಗೆ 'ವಿಕ್ಸ್' ಬಳಸುವವರ ಸಂಖ್ಯೆ ಹೆಚ್ಚಾಗಿದೆ. ನೀವೂ ಕೂಡ ವಿಕ್ಸ್ ಬಳಕೆ ಮಾಡಿದ ತಕ್ಷಣ ನೋವು ಕಡಿಮೆಯಾಗಿ ಸಂತಸಪಡುವವರಾಗಿದ್ದರೆ, ಮುಂದಾಗುವ ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಮೊಡವೆಗೆ ವಿಕ್ಸ್ ಬಳಕೆ ಮಾಡುವುದರ ಹಿಂದಿರುವ ಅಪಾಯಗಳು ಇಲ್ಲಿವೆ ನೋಡಿ.

ಮುಖದ ಮೇಲೆ ಒಂದು ಸಣ್ಣ ಮೊಡವೆ (Pimple) ಕಾಣಿಸಿಕೊಂಡರೂ ಸಾಕು, ಅದನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಲು ಪ್ರತಿಯೊಬ್ಬರೂ ನಾನಾ ಸಾಹಸಗಳನ್ನು ಮಾಡುತ್ತಾರೆ. ಕೆಲವರು ದುಬಾರಿ ಸೌಂದರ್ಯ ವರ್ಧಕಗಳನ್ನು (Skin Care Products) ಬಳಸಿದರೆ, ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುವ ಮನೆಮದ್ದುಗಳನ್ನು ಯಥಾವತ್ತಾಗಿ ಪಾಲಿಸುತ್ತಾರೆ. ಅಂತಹ ಮನೆಮದ್ದುಗಳಲ್ಲಿ 'ವಿಕ್ಸ್ ವೇಪೊರಬ್' (Vicks Vaporub) ಹಚ್ಚುವುದೂ ಒಂದಾಗಿದೆ.

ವಿಕ್ಸ್ ಹಚ್ಚಿದರೆ ಮೊಡವೆಗಳು ಒಂದೇ ರಾತ್ರಿಯಲ್ಲಿ ಮಾಯವಾಗುತ್ತವೆ ಎಂಬ ನಂಬಿಕೆ ಅನೇಕರಲ್ಲಿದೆ. ಆದರೆ, ಇದು ನಿಜವೇ? ವಿಕ್ಸ್ ಹಚ್ಚುವುದು ಚರ್ಮಕ್ಕೆ ಸುರಕ್ಷಿತವೇ? ಈ ಬಗ್ಗೆ ಪ್ರಸಿದ್ಧ ಚರ್ಮರೋಗ ತಜ್ಞೆ (Dermatologist) ಡಾ. ಪ್ರಿಯಾಂಕಾ ರೆಡ್ಡಿ ನೀಡಿರುವ ಪ್ರಮುಖ ಮಾಹಿತಿಗಳು ಇಲ್ಲಿದೆ.

ತಜ್ಞರು ಏನು ಹೇಳುತ್ತಾರೆ?

ವಿಕ್ಸ್‌ನಂತಹ ಉತ್ಪನ್ನಗಳನ್ನು ಮುಖದ ಮೇಲಿನ ಮೊಡವೆಗಳನ್ನು ಶಮನಗೊಳಿಸಲು ಅಥವಾ ಬಂದ್ ಆಗಿರುವ ಚರ್ಮದ ರಂಧ್ರಗಳನ್ನು (Pores) ತೆರೆಯಲು ತಯಾರಿಸಲಾಗಿಲ್ಲ. ವಿಕ್ಸ್ ಮೂಲತಃ ಶೀತ, ಕೆಮ್ಮು ಮತ್ತು ಮೂಗು ಕಟ್ಟುವಿಕೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡಲು ಬಳಕೆಯಾಗುತ್ತದೆ. ವಿಕ್ಸ್‌ನಲ್ಲಿ ಕರ್ಪೂರ (Camphor), ಮೆಂಥಾಲ್ (Menthol), ಯೂಕಲಿಪ್ಟಸ್ ಎಣ್ಣೆ (Eucalyptus oil) ಹಾಗೂ ಗಟ್ಟಿಯಾದ ಪೆಟ್ರೋಲಿಯಂ ಬೇಸ್ (Petroleum Base) ಇರುತ್ತದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲೆ ದಪ್ಪನೆಯ ಪದರ ಉಂಟಾಗಿ, ರಂಧ್ರಗಳು ಮತ್ತಷ್ಟು ಮುಚ್ಚಿಹೋಗುತ್ತವೆ. ಇದರಿಂದ ಮೊಡವೆ ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು.

ತಂಪಾದ ಅನುಭವದ ಹಿಂದಿರುವ ನಿಜಾಂಶವೇನು?

ವಿಕ್ಸ್ ಹಚ್ಚಿದ ತಕ್ಷಣ ಮುಖದ ಮೇಲೆ ತಂಪಾದ ಅಥವಾ ಹಗುರವಾದ ಉರಿಯುವ ಅನುಭವವಾಗುತ್ತದೆ. ಇದನ್ನು ಕಂಡ ತಕ್ಷಣವೇ ಔಷಧಿ ಕೆಲಸ ಮಾಡುತ್ತಿದೆ, ಮೊಡವೆ ಒಣಗುತ್ತಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಈ ತಂಪಾದ ಅನುಭವ ಮೊಡವೆ ವಾಸಿಯಾಗುತ್ತಿರುವುದರ ಸಂಕೇತವಲ್ಲ. ಬದಲಿಗೆ, ವಿಕ್ಸ್‌ನಲ್ಲಿರುವ ಗ hisಸಾದ ಅಂಶಗಳಿಂದ ಚರ್ಮ ಕಿರಿಕಿರಿಯೊಳ್ಳುತ್ತಿರುವುದರ (Skin Irritation) ಸಂಕೇತವಾಗಿದೆ.

ರಾತ್ರಿಯಿಡೀ ವಿಕ್ಸ್ ಹಚ್ಚಿ ಮಲಗಿದರೆ ಏನಾಗುತ್ತದೆ?

ರಾತ್ರಿಯಿಡೀ ಮೊಡವೆ ಮೇಲೆ ವಿಕ್ಸ್ ಹಚ್ಚಿ ಬಿಡುವುದರಿಂದ ಚರ್ಮ ತೀವ್ರವಾಗಿ ಹಾನಿಗೊಳಗಾಗುತ್ತದೆ. ಇದರಿಂದ ಮುಖದ ಮೇಲೆ ಕೆಂಪು ಅಥವಾ ಕಪ್ಪು ಕಲೆಗಳು (Post-Inflammatory Hyperpigmentation - PIH) ಮೂಡಬಹುದು. 'ಮೊಡವೆ ಕೆಲವೇ ದಿನಗಳಲ್ಲಿ ತಾನಾಗಿಯೇ ಮಾಯವಾಗಬಹುದು, ಆದರೆ ವಿಕ್ಸ್‌ನಂತಹ ಪ್ರಯೋಗಗಳಿಂದ ಉಂಟಾಗುವ ಕಪ್ಪು ಕಲೆಗಳು ಮುಖದ ಮೇಲೆ ಹಲವು ತಿಂಗಳುಗಳ ಕಾಲ ಹಾಗೆಯೇ ಉಳಿದುಬಿಡುತ್ತವೆ' ಎಂದು ಡಾ. ಪ್ರಿಯಾಂಕಾ ಎಚ್ಚರಿಸುತ್ತಾರೆ.

ನಿಂಬೆ, ಬೆಳ್ಳುಳ್ಳಿ ಹಾಗೂ ಟೂತ್‌ಪೇಸ್ಟ್ ಸಹ ಅಪಾಯಕಾರಿ!

ಕೇವಲ ವಿಕ್ಸ್ ಮಾತ್ರವಲ್ಲದೆ, ಮೊಡವೆಗಳ ಮೇಲೆ ಟೂತ್‌ಪೇಸ್ಟ್ (Toothpaste), ನಿಂಬೆ ರಸ (Lemon) ಹಾಗೂ ಬೆಳ್ಳುಳ್ಳಿ ಹಚ್ಚುವ ಮನೆಮದ್ದುಗಳಿಂದಲೂ ದೂರವಿರಲು ತಜ್ಞರು ಸಲಹೆ ನೀಡುತ್ತಾರೆ. ಇವುಗಳಲ್ಲಿರುವ ಅತಿಯಾದ ಆಮ್ಲೀಯತೆ ಮತ್ತು ರಾಸಾಯನಿಕಗಳು ಚರ್ಮಕ್ಕೆ ಸುಟ್ಟ ಗಾಯದಂತಹ ಹಾನಿಯನ್ನು ಉಂಟುಮಾಡಬಲ್ಲವು.

ಮೊಡವೆ ಬಂದಾಗ ಏನು ಮಾಡಬೇಕು?

  • ಕೈಯಿಂದ ಮುಟ್ಟಬೇಡಿ: ಮೊಡವೆಗಳನ್ನು ಚಿವುಟುವುದು ಅಥವಾ ಪದೇ ಪದೇ ಮುಟ್ಟುವುದು ಮಾಡಬೇಡಿ.
  • ಸಾಮಾಜಿಕ ಜಾಲತಾಣದ ಹ್ಯಾಕ್ಸ್ ತಪ್ಪಿಸಿ: ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುವ ಪ್ರತಿಯೊಂದು DIY ವಿಡಿಯೋಗಳನ್ನು ಕಣ್ಣು ಮುಚ್ಚಿ ಅನುಕರಿಸಬೇಡಿ.
  • ತಜ್ಞರ ಸಲಹೆ ಪಡೆಯಿರಿ: ಮೊಡವೆಗಳ ಸಮಸ್ಯೆ ಹೆಚ್ಚಾಗಿದ್ದರೆ ನಿಮ್ಮ ಚರ್ಮದ ಸ್ವಭಾವಕ್ಕೆ (Skin Type) ಅನುಗುಣವಾಗಿ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಸೂಕ್ತ.

ಸ್ವಲ್ಪ ದಿನಗಳ ಮೊಡವೆ ನಿವಾರಣೆಗೆ ಹೋಗಿ ಮುಖದ ಮೇಲೆ ದೀರ್ಘಕಾಲದ ಕಲೆಗಳನ್ನು ತಂದುಕೊಳ್ಳಬೇಡಿ. ಸೌಂದರ್ಯ ಪ್ರಯೋಗಗಳನ್ನು ಮಾಡುವ ಮುನ್ನ ಜಾಗರೂಕರಾಗಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IVF ಪ್ರಕ್ರಿಯೆಗೆ ಇನ್ನೊಬ್ಬ ವ್ಯಕ್ತಿಯ ವೀರ್ಯ ಪತ್ನಿ ಪಡೆದುಕೊಳ್ಳಬಹುದೇ? ಹೈಕೋರ್ಟ್‌ಗೆ ನಿಯಮ ತಿಳಿಸಿದ ಕೇಂದ್ರ ಸರ್ಕಾರ
ಬ್ಯಾಗ್, ಪ್ಯಾಂಟ್, ಸ್ವೆಟರ್ 'ಜಿಪ್' ಕಿತ್ತು ಹೋಯ್ತಾ? ಈ ಟಿಪ್ಸ್ ಬಳಸಿ ಚಿಟಿಕೆ ಹೊಡೆಯುವಷ್ಟರಲ್ಲಿ ಸರಿ ಮಾಡಿ!