ಹಸ್ತಮೈಥುನ ಬಗ್ಗೆ ಮಾತಾಡಲು ಹಿಂಜರಿಯುವ ಮಂದಿಯೇ ಹೆಚ್ಚು. ಆದರಿದು ಪಾಪದ ಕೆಲಸವಲ್ಲ. ಯುವಕರಲ್ಲಿ ಎಷ್ಟೇ ಇದರ ಬಗ್ಗೆ ಅರಿವು ಮೂಡಿಸಿದರೂ ತಪ್ಪು ಮಾಡಿದ್ದೇವೆಂಬ ಪಾಪ ಪ್ರಜ್ಞೆ ಬೆಳೆಯಿಸಿಕೊಳ್ಳುತ್ತಾರೆ. ಈ ಸಹಜ ಕ್ರಿಯೆ ಬಗ್ಗೆ ಇರೋ ಸತ್ಯ, ಮಿಥ್ಯವೇನು?
ಹಸ್ತಮೈಥುನದ ಬಗ್ಗೆ ಹತ್ತು ಹಲವು ತಪ್ಪು ಕಲ್ಪನೆಗಳಿವೆ. ಅಲ್ಲದೇ ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಸಹಜವಾಗಿ ಹದಿ ವಯಸ್ಸಿನಲ್ಲಿ ಹಲವರು ಇಂಥದ್ದೊಂದು ಕೆಲಸಕ್ಕೆ ಕೈ ಹಾಕುತ್ತಾರೆ. ಆದ್ದರಿಂದ ಎಲ್ಲವೂ ಇತಿ ಮಿತಿಯಲ್ಲಿದ್ದರೆ ತಪ್ಪಲ್ಲ. ಮಿತಿ ಮೀರಿದರೆ ಮಾತ್ರ ಎಚ್ಚೆತ್ತುಕೊಳ್ಳಬೇಕೆನ್ನುತ್ತಾರೆ ತಜ್ಞರು. ಈ ಕ್ರಿಯೆ ಬಗ್ಗೆ ಇರುವ ಸತ್ಯ, ಮಿಥ್ಯಗಳೇನು?