ಹಲ್ಲು ಕೀಳ್ತಾರೆ, ದುಡ್ಡೂ ಕೀಳ್ತಾರೆ! ನಿಜನಾ? : ದಂತಚಿಕಿತ್ಸೆಯ ಒಳಗುಟ್ಟೇನು?

Published : Dec 26, 2016, 05:45 AM ISTUpdated : Apr 11, 2018, 12:39 PM IST
ಹಲ್ಲು ಕೀಳ್ತಾರೆ, ದುಡ್ಡೂ ಕೀಳ್ತಾರೆ! ನಿಜನಾ? : ದಂತಚಿಕಿತ್ಸೆಯ ಒಳಗುಟ್ಟೇನು?

ಸಾರಾಂಶ

ಮನುಷ್ಯರಲ್ಲಿ ಹಾಲು ಹಲ್ಲುಗಳು ಮತ್ತು ಶಾಶ್ವತ ಹಲ್ಲುಗಳೆಂದು, ಎರಡು ಬಗೆಯ ದಂತ ವಿನ್ಯಾಸ ಕಂಡುಬರುತ್ತದೆ. ಮಕ್ಕಳ ಹಾಲು ಹಲ್ಲುಗಳು ಹುಳುಕಿಗೆ ತುತ್ತಾಗುತ್ತವೆ. ‘ಮಕ್ಕಳ ಹಲ್ಲಿಗೂ ಅವ್ರು ಅಷ್ಟೊಂದು ಚಾಜ್‌ರ್‍ ಮಾಡಿದ್ರು' ಎಂಬ ದೂರು ಸಾಮಾನ್ಯವಾಗಿ ಕೇಳುತ್ತೇವೆ. ಹಾಲು ಹಲ್ಲುಗಳು ಬಿದ್ದು ಹೋಗಿ ಹೊಸ ಹಲ್ಲುಗಳು ಬರಲಿವೆ, ಆದರೂ ದಂತ ವೈದ್ಯರು ಅವುಗಳಿಗೆ ಅದುಇದು ಎಂದು ಕೊನೆಗೆ ದೊಡ್ಡ ಬಿಲ್‌ ಮಾಡಿದ್ರು ಎಂಬೆಲ್ಲ ಮಾತುಗಳೂ ಹರಿದಾಡುತ್ತವೆ.

(ಡಾಕ್ಟ್ರ ಮಾತು:ಡಾ. ಅಶ್ವನ್ ಪಿ.ಎಸ್)

ಮಾನವನ ದೇಹದಲ್ಲಿ ಹಲ್ಲಿಗೆ ಇರುವ ಸ್ಥಾನಮಾನ ನೋಡಿದರೆ, ಬಹಳಷ್ಟುಜನರಲ್ಲಿ ಅವುಗಳ ಬಗ್ಗೆ ತಾತ್ಸಾರ ಮನೋಭಾವ ಕಾಣಬಹುದು. ಮನಸ್ಸಿಗೆ ಇಷ್ಟವಾದ, ಬಾಯಿಗೆ ರುಚಿಯಾದ ತಿಂಡಿ ತಿನಿಸುಗಳನ್ನು ಸಾರಾಸಗಟಾಗಿ ತಿನ್ನಲು ಹಲ್ಲುಗಳು ಅತಿಮುಖ್ಯವಾದರೂ ಹಲ್ಲಿನ ಆರೋಗ್ಯದ ಕಡೆ ಕಾಳಜಿ ವಹಿಸುವವರು ಕಡಿಮೆ. ಅಲ್ಲದೆ, ದಂತ ವೈದ್ಯರು ಲೂಟಿಕೋರರೆಂಬ ಮನೋಭಾವವೂ ಸಹಜವಾಗಿ ಬೇರುಬಿಟ್ಟಿದೆ.
ಹಾಲು ಹಲ್ಲಿನಲ್ಲೂ ಹಣ ಮಾಡಿದರು!
ಮನುಷ್ಯರಲ್ಲಿ ಹಾಲು ಹಲ್ಲುಗಳು ಮತ್ತು ಶಾಶ್ವತ ಹಲ್ಲುಗಳೆಂದು, ಎರಡು ಬಗೆಯ ದಂತ ವಿನ್ಯಾಸ ಕಂಡುಬರುತ್ತದೆ. ಮಕ್ಕಳ ಹಾಲು ಹಲ್ಲುಗಳು ಹುಳುಕಿಗೆ ತುತ್ತಾಗುತ್ತವೆ. ‘ಮಕ್ಕಳ ಹಲ್ಲಿಗೂ ಅವ್ರು ಅಷ್ಟೊಂದು ಚಾಜ್‌ರ್‍ ಮಾಡಿದ್ರು' ಎಂಬ ದೂರು ಸಾಮಾನ್ಯವಾಗಿ ಕೇಳುತ್ತೇವೆ. ಹಾಲು ಹಲ್ಲುಗಳು ಬಿದ್ದು ಹೋಗಿ ಹೊಸ ಹಲ್ಲುಗಳು ಬರಲಿವೆ, ಆದರೂ ದಂತ ವೈದ್ಯರು ಅವುಗಳಿಗೆ ಅದುಇದು ಎಂದು ಕೊನೆಗೆ ದೊಡ್ಡ ಬಿಲ್‌ ಮಾಡಿದ್ರು ಎಂಬೆಲ್ಲ ಮಾತುಗಳೂ ಹರಿದಾಡುತ್ತವೆ.
ಹಾಲು ಹಲ್ಲುಗಳು ಬಿದ್ದುಹೋಗುವ ವಿಚಾರ ಸತ್ಯವೇ. ಆ ವಿನ್ಯಾಸದ ದವಡೆ ಹಲ್ಲುಗಳು ಮಗು ಹತ್ತರಿಂದ ಹನ್ನೆರೆಡು ವರ್ಷ ಪ್ರಾಯಕ್ಕೆ ಬರುವವರೆಗೆ ತಮ್ಮ ಕಾರ್ಯನಿರ್ವಹಿಸ ಬೇಕಾಗುತ್ತದೆ. ಆದ್ದರಿಂದ ಸಣ್ಣ ಪ್ರಾಯದಲ್ಲಿ ಹಲ್ಲಿನ ಹುಳುಕಾದಲ್ಲಿ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಬೇಕಾಗುತ್ತದೆ. ಹುಳುಕು ಪ್ರಾರಂಭವಾದ ಸಮಯವಾದರೆ ಸಣ್ಣ ಮಟ್ಟಿನ ಚಿಕಿತ್ಸೆ ಸಾಕಾಗುವುದು. ಆದರೆ ಹುಳುಕು ಹಲ್ಲಿನ ಒಳ ಪದರುಗಳಿಗೆ ಹರಡಿದರೆ ಚಿಕಿತ್ಸೆಯ ರೀತಿ ಬದಲಾಗುತ್ತದೆ. ಹಲ್ಲನ್ನು ಉಳಿಸಲು ಹೆಚ್ಚಿನ ಚಿಕಿತ್ಸೆ ಬೇಕಾಗುತ್ತದೆ. ಅದನ್ನು ಮಾಡಲು ಮಕ್ಕಳ ಹಲ್ಲಿನ ತಜ್ಞರ ಸಹಾಯ ಬೇಕಾಗಬಹುದು. ತಜ್ಞರ ವೇತನ, ಹೆಚ್ಚಿನ ಚಿಕಿತ್ಸೆಗೆ ಬಳಸಿದ ಸಾಮಾಗ್ರಿಗಳ ವೆಚ್ಚಗಳು ಎಲ್ಲಾ ಸೇರಿದಾಗ ದಂತ ವೈದ್ಯರು ತಮ್ಮ ಜೀವನ ನಡೆಸಬೇಕಾದರೆ ನಿಮ್ಮ ಬಳಿ ಚಾಜ್‌ರ್‍ ಮಾಡುವ ಹಣ ಸುಲಿಗೆ ಆಗುವುದಿಲ್ಲ.
ದಂತ ಚಿಕಿತ್ಸೆ ದುಬಾರಿ: ಬಾಯಿಯ ಸ್ವಚ್ಛತೆ ಸರಿಯಾಗಿ ಕಾಪಾಡದಿದ್ದಲ್ಲಿ ಹಲ್ಲಿನ ಹುಳುಕು, ಬಾಯಿಯ ದುರ್ವಾಸನೆ, ವಸಡಿನ ತೊಂದರೆಗಳು- ಹೀಗೆ ಹಲವು ತೊಂದರೆಗಳು ಹುಟ್ಟಿಕೊಳ್ಳುತ್ತವೆ.
ಇವುಗಳನ್ನು ನಿಯಂತ್ರಿಸಲು ವಿಫಲರಾದಲ್ಲಿ ಸಾಧಾರಣ ಚಿಕಿತ್ಸೆಗಳಿಗೆ ಅವು ಸ್ಪಂದಿಸಲಾರವು. ಹೆಚ್ಚಿನ ಜನರು ಹಲ್ಲಿನ ತೊಂದರೆಗಳನ್ನು ನಿರ್ಲಕ್ಷಿಸುವ ಕಾರಣ ದಂತ ವೈದ್ಯರನ್ನು ಭೇಟಿಯಾದಾಗ ಅವುಗಳನ್ನು ಸರಿಪಡಿಸಲು ಹೆಚ್ಚಿನ ಚಿಕಿತ್ಸೆ ಅಥವಾ ತಜ್ಞರ ಅಗತ್ಯ ಬೇಕಾಗುತ್ತದೆ. ಆ ಸಂದರ್ಭದಲ್ಲಿ ಚಿಕಿತ್ಸೆಯ ಶುಲ್ಕ ಕೊಂಚ ಮಟ್ಟಿಗೆ ಜಾಸ್ತಿಯಿರುತ್ತದೆ.

ದಂತಚಿಕಿತ್ಸೆಯ ಒಳಗುಟ್ಟೇನು?  

1 ದಂತ ವೈದ್ಯರ ಕ್ಲಿನಿಕ್‌ ಅನ್ನು ನೀವು ನೋಡಿರಬಹುದು. ಅಲ್ಲಿರುವುದು ದುಬಾರಿ ಉಪಕರಣಗಳೇ. ದಂತ​ಚಿಕಿತ್ಸೆಗೆ ಬಳಸುವ ಕುರ್ಚಿಯ ಬೆಲೆ ಲಕ್ಷದಲ್ಲಿದೆ. ಇನ್ನು ಅದರಲ್ಲಿ ಹಲವು ಥರದ ಕುರ್ಚಿಗಳಿವೆ. ಆಧುನಿಕ ಸೌಲಭ್ಯಗಳನ್ನು ಹೊಂದಿಕೊಂಡಿರುವ, ಹಲವು ಬಗೆಯ ಉಪಕರಣ ಒಳ​ಗೊಂಡ ಕುರ್ಚಿಗಳು ಬಹು ದುಬಾರಿ.
2 ಹಲ್ಲಿನ ಪದರಗಳನ್ನು ಅಥವಾ ಬೇರಿನ ಸುತ್ತಮುತ್ತದ ಭಾಗಗಳನ್ನು ವೀಕ್ಷಿಸಲು, ಬೆಳವಣಿಗೆಯ ಹಂತವನ್ನು, ದವಡೆ​ಗಳನ್ನು ಹೀಗೆ ಹಲವು ಬಾಯಿ ಮತ್ತು ಮುಖಾಂಗಗಳನ್ನು ಪರೀಕ್ಷಿಸಲು ಎಕ್ಸ್‌-ರೇ ಸೌಲಭ್ಯವನ್ನು ಬಳಸಬೇಕಾ​ಗುತ್ತದೆ. ಎಕ್ಸ್‌-ರೇ ಉಪಕರಣಗಳಲ್ಲಿ ಹಲವು ವಿಧಗಳಿವೆ. ಇವೂ ದುಬಾರಿ ಉಪಕರಣಗಳು.
3 ದಂತ ವೈದ್ಯರು ಬಳಸುವ ಹಲ್ಲಿನ ಸಿಮೆಂಟ್‌ಗಳೂ ವಿವಿಧ ಬಗೆಯಲ್ಲಿವೆ. ಹಲ್ಲಿನ ಬಣ್ಣದ ಸಿಮೆಂಟ್‌ಗಳು ನಿಮ್ಮ ಹಲ್ಲು ನ್ಯಾಚುರಲ್‌ ಆಗಿ ತೋರುವಂತಿರುತ್ತವೆ. ಇವುಗಳನ್ನು ಚಿಕಿತ್ಸೆಗೆ ಬಳಸಬೇಕಾದರೆ ಅದರದ್ದೇ ಆದ ಉಪಕರಣಗಳು ಬೇಕಾಗುತ್ತವೆ. ಆ ಉಪಕರಣಗಳನ್ನು ಕೆಲವು ಸಮಯದ ನಂತರ ಬದಲಿಸಬೇಕಾಗುತ್ತದೆ. ಹೀಗೆ ಹಲವು ರೀತಿಯಲ್ಲಿ ದಂತ ವೈದ್ಯರು ಖರ್ಚು ಭರಿಸಬೇಕಾಗುತ್ತದೆ.
4 ರೂಟ್‌ಕೆನಾಲ್‌ ಅಥವಾ ಬೇರು ನಾಳ ಚಿಕಿತ್ಸೆಯ ಬಗ್ಗೆ ತಿಳಿದಿರಬಹುದು. ಇದು ಬಹು ಸೂಕ್ಷ್ಮವಾದ ಚಿಕಿತ್ಸೆ. ಬಹಳ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆಂದೇ ತಜ್ಞರೂ ಇದ್ದಾರೆ. ಸಹಜವಾಗಿ ಈ ಚಿಕಿತ್ಸೆಯ ಬೆಲೆ ದುಬಾರಿಯೇ.
5 ಚಿಕಿತ್ಸೆಯಲ್ಲಿ ಬಳಸುವ ಹಲ್ಲಿನ ಕ್ಯಾಪ್‌, ಕೃತಕ ಹಲ್ಲು ಇವುಗಳನ್ನೆಲ್ಲ ತಯಾರಿಸಲು ಡೆಂಟಲ್‌ ಲ್ಯಾಬ್‌ನ ನೆರವು ಬೇಕು. ಅವುಗಳನ್ನು ತಯರಿ ಸಲು ಬಳಸುವ ಸಾಮಗ್ರಿಗಳ ವೆಚ್ಚ, ಟೆಕ್ನೀಶಿಯನ್ನರ ವೇತನ ಹೀಗೆ ಅವುಗಳ ನ್ನೆಲ್ಲ ಕೂಡಿಸಿ, ಲ್ಯಾಬ್‌ನವರು ಅವರ ಶುಲ್ಕವನ್ನು ತಿಳಿಸುತ್ತಾರೆ. ನಿಮ್ಮ ಬಳಿ ಪಡೆದ ಹಣದಿಂದ ದಂತ ವೈದ್ಯರು ಆ ಶುಲ್ಕವನ್ನೂ ಭರಿಸಬೇಕಾಗುತ್ತದೆ.

(ಕೃಪೆ: ಕನ್ನಡ ಪ್ರಭ)

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಲದ ಬಣ್ಣ, ವಾಸನೆಯಿಂದಲೇ ಯಾವ ಕಾಯಿಲೆಯಿದೆ ಅಥವಾ ಬರಲಿದೆಯೆಂದು ಹೇಳ್ಬೋದು!
ಧಾರಾವಾಹಿ ನಟಿಗೆ ಸ್ತನ ಕ್ಯಾನ್ಸರ್;‌ ಮಾರಕ ಕಾಯಿಲೆಯಿಂದ ಚೆಂದದ ಬೆಡಗಿ ಇಂದು ಹೀಗೆ ಆಗಿದ್ದಾರಾ?