ರೆಕ್ಕೆ ಇಲ್ದಿರೋ ಹಾವು ನಿಜವಾಗ್ಲೂ ಗಾಳಿಯಲ್ಲಿ ಹಾರುತ್ತಾ?

Published : Oct 25, 2025, 11:15 AM IST
Flying snakes

ಸಾರಾಂಶ

Flying snakes: ಗಾಳಿಯಲ್ಲಿ ಹಾರ್ಬೇಕು ಅಂದ್ರೆ ಹಕ್ಕಿಯಂತೆ ರೆಕ್ಕೆ ಬೇಕು. ಆದ್ರೆ ಹಾವುಗಳಿಗೆ ರೆಕ್ಕೆ ಇಲ್ಲ. ಅವು ಗಾಳಿಯಲ್ಲಿ ಹಾರುತ್ವೆ. ಎತ್ತರದಲ್ಲಿ ಹಾರುವ ಈ ಹಾವುಗಳ ಬಗ್ಗೆ ಇಲ್ಲಿದೆ.

ಹಾವಿನಲ್ಲಿ ಸಾಕಷ್ಟು ವೆರೈಟಿಗಳಿವೆ. ವಿಷಕಾರಿ ಹಾವು (snake), ವಿಷವಲ್ಲದ ಹಾವು, ನೀರಿನಲ್ಲಿರುವ ಹಾವು, ನೆಲದಡಿಯಲ್ಲಿ ಅಡಗಿರುವ ಹಾವು ಹೀಗೆ ನಾನಾ ಹಾವುಗಳಿವೆ. ಅವುಗಳಲ್ಲಿ ಹಾರುವ ಹಾವು (flying snake )ಗಳೂ ಒಂದು. ರೆಕ್ಕೆಯಿಲ್ಲದೆ ಹಾವುಗಳು ಹೇಗೆ ಹಾರುತ್ವೆ? ನಿಜವಾಗ್ಲೂ ಹಾವು ಹಾರುತ್ತ ಇಲ್ಲ ಬರೀ ಕಲ್ಪನೆಯಾ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.

ನಿಜವಾಗ್ಲೂ ಹಾವು ಗಾಳಿಯಲ್ಲಿ ಹಾರುತ್ತಾ? : 

ಕಾಡಿನಲ್ಲಿ, ಕೆಲವು ಜಾತಿಯ ಹಾವುಗಳು ಮರದಿಂದ ಮರಕ್ಕೆ ಹಾರುತ್ತವೆ. ಇದು ಬೇಟೆಯಾಡುವ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಒಂದು ಮಾರ್ಗವಾಗಿದೆ. ಇಂಥ ಹಾವುಗಳು ಮನುಷ್ಯನನ್ನು ಭಯಗೊಳಿಸುತ್ತವೆ. ಆದ್ರೆ ಅವು ಹೆಚ್ಚು ಅಪಾಯಕಾರಿಯಲ್ಲ. ನಿಜ ಹೇಳ್ಬೇಕೆಂದ್ರೆ ಈ ಹಾವುಗಳು ಗಾಳಿಯಲ್ಲಿ ಹಾರುವುದಿಲ್ಲ. ಬದಲಿಗೆ ಗಾಳಿಯಲ್ಲಿ ಜಾರುತ್ತವೆ. ಮರದಿಂದ ಹಾರುವಾಗ, ಈ ಹಾವುಗಳು ತಮ್ಮ ದೇಹವನ್ನು ಚಪ್ಪಟೆಗೊಳಿಸುತ್ತವೆ. ಪ್ಯಾರಾಚೂಟ್ನಂತೆ ಕಾರ್ಯನಿರ್ವಹಿಸುತ್ತವೆ. ಅವುಗಳ ದೇಹವು ಗಾಳಿಯಲ್ಲಿ S ಆಕಾರವನ್ನು ರೂಪಿಸುತ್ತವೆ. ಇದನ್ನು ವಿಜ್ಞಾನಿಗಳು Unadulation ಎಂದು ಕರೆಯುತ್ತಾರೆ. ಹಾವಿನ ಈ ದೀರ್ಘ ದೂರ ಹಾರುವಾಗ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಸತ್ತ ಬಳಿಕವೂ ಕಚ್ಚುತ್ತವೆ ವಿಷದ ಹಾವುಗಳು : ಎಚ್ಚರ !

ಯಾವ ಹಾವುಗಳು ಹಾರುತ್ವೆ? : 

ಹಾರುವ ಹಾವುಗಳು ಕ್ರೈಸೊಪೆಲಿಯಾ ಕುಲಕ್ಕೆ ಸೇರಿವೆ. ಅವು ತೆಳ್ಳಗಿನ ಮರಗಳ ಮೇಲೆ ವಾಸಿಸುತ್ತವೆ. ಪ್ರಾಥಮಿಕವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಕಂಡುಬರುತ್ತವೆ. ಅವು ಸಾಮಾನ್ಯವಾಗಿ ಭಾರತ, ಶ್ರೀಲಂಕಾ, ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಸಿಂಗಾಪುರದಲ್ಲಿಯೂ ಕಂಡುಬರುತ್ತವೆ. ಈ ಹಾವುಗಳು, 30 ಅಡಿ ಎತ್ತರದಿಂದ ಹಾರಿ 60 ಅಡಿ ದೂರಕ್ಕೆ ಹಾರಬಹುದು. • ಟ್ವಿನ್-ಬ್ಯಾರೆಡ್ ಟ್ರೀ ಸ್ನೇಕ್ : ಇದು ಪ್ರಾಥಮಿಕವಾಗಿ ಮಲೇಷ್ಯಾ ಮತ್ತು ಸುಮಾತ್ರಾದಲ್ಲಿ ಕಂಡುಬರುವ ಒಂದು ಸಣ್ಣ ಜಾತಿಯ ಹಾರುವ ಹಾವು. • ಗೋಲ್ಡನ್ ಟ್ರೀ ಸ್ನೇಕ್ : ಈ ಹಾವು ಸಾಮಾನ್ಯವಾಗಿ ಭಾರತ ಮತ್ತು ಶ್ರೀಲಂಕಾದಲ್ಲಿ ಕಂಡುಬರುತ್ತದೆ. ಗೋಲ್ಡನ್ ಕಲರ್ ನಲ್ಲಿ ಈ ಹಾವಿರುತ್ತದೆ. ಇದು ಸಾಮಾನ್ಯವಾಗಿ 100 ಸೆಂಟಿಮೀಟರ್ ಉದ್ದದವರೆಗೆ ಬೆಳೆಯುತ್ತದೆ. • ಪ್ಯಾರಡೈಸ್ ಟ್ರೀ ಸ್ನೇಕ್ : ಪ್ಯಾರಡೈಸ್ ಟ್ರೀ ಸ್ನೇಕ್ ಸಾಮಾನ್ಯವಾಗಿ ಮಲೇಷ್ಯಾ, ಸಿಂಗಾಪುರ ಮತ್ತು ಫಿಲಿಪೈನ್ಸ್ ಕಾಡುಗಳಲ್ಲಿ ಕಂಡುಬರುತ್ತದೆ.

ಹಾವು ಮನೆಗೆ ಸುಮ್ಮ ಸುಮ್ನೆ ಬರೋಲ್ಲ, ನೀವು ಮಾಡೋ ಈ ತಪ್ಪೇ ಅದಕ್ಕೆ ಕಾರಣ

ಈ ಹಾವುಗಳು ವಿಷಕಾರಿಯೇ? :

 ತಲೆ ಮೇಲೆ ಹಾವು ಹಾರಿದ್ರೆ ಭಯ ಆಗೋದು ಸಾಮಾನ್ಯ. ಎಲ್ಲಿ ನಮ್ಮ ಮೈಮೇಲೆ ಬೀಳುತ್ತೋ, ಕಚ್ಚುತ್ತೋ ಎನ್ನುವ ಭಯ ನಮ್ಮನ್ನು ಕಾಡುತ್ತದೆ. ಹಾರುವ ಬಹುತೇಕ ಹಾವುಗಳು ಸ್ವಲ್ಪ ವಿಷಕಾರಿಯಾಗಿದ್ರೂ ಮನುಷ್ಯರಿಗೆ ಅಪಾಯಕಾರಿಯಲ್ಲ. ಅವು ಪ್ರಾಥಮಿಕವಾಗಿ ಕೀಟಗಳು, ಸಣ್ಣ ಪಕ್ಷಿಗಳು, ಬಾವಲಿಗಳು ಮತ್ತು ಹಲ್ಲಿಗಳನ್ನು ಬೇಟೆಯಾಡುತ್ತವೆ. ನೀವು ಅವುಗಳನ್ನು ಕೆಣಕಿದ್ರೆ, ಅವುಗಳನ್ನು ಬೆದರಿಸಿದ್ರೆ, ಅವುಗಳನ್ನು ಹಿಡಿಯುವ ಪ್ರಯತ್ನ ಮಾಡಿದ್ರೆ ಅವು ನಿಮ್ಮನ್ನು ಕಚ್ಚಬಹುದು. ಒಂದ್ವೇಳೆ ಅವು ನಿಮ್ಮನ್ನು ಕಚ್ಚಿದ್ರೂ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಅವುಗಳ ವಿಷ ಮನುಷ್ಯರಿಗೆ ಅಷ್ಟೊಂದು ಅಪಾಯಕಾರಿಯಲ್ಲ. ಈ ಹಾವುಗಳು ದಿನಕ್ಕೆ ಎಷ್ಟು ಬಾರಿ ಹಾರುತ್ತವೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಂಬೆಯಿಂದ ಮೊಟ್ಟೆ ಸಿಪ್ಪೆ ತೆಗೆಯೋದು, ಎಣ್ಣೆ ರಹಿತ ಕ್ರಿಸ್ಪಿ ಪೂರಿ.. 2025ರಲ್ಲಿ ಜನ ಮೆಚ್ಚಿದ Food Hacks
ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?