
ಮೇಷ ರಾಶಿಯವರಿಗಿಂದು ಆರೋಗ್ಯದಲ್ಲಿ ಏರುಪೇರು ಸಾಧ್ಯತೆ : ಉಳಿದ ರಾಶಿ ಹೇಗಿದೆ..?
ಮೇಷ : ಸಹೋದರ ಭಾವಾಧಿಪತಿ ವ್ಯಯದಲ್ಲಿ ನೀಚನಾಗಿರುವುದರಿಂದ ಭ್ರಾತೃಗಳಲ್ಲಿ ಕಲಹ, ತಾಯಿ ಆರೋಗ್ಯದಲ್ಲೂ ಏರುಪೇರು, ಸುಬ್ರಹ್ಮಣ್ಯ ದರ್ಶನ ಮಾಡಿ
ವೃಷಭ : ರಾಶ್ಯಾಧಿಪತಿಯು ಲಾಭದಲ್ಲಿದ್ದರೂ ಕುಜ ದೃಷ್ಟಿ ಇರುವುದರಿಂದ ಅನಾರೋಗ್ಯ , ಕಷ್ಟದ ದಿವಾಗಿರಲಿದೆ, ಲಕ್ಷ್ಮೀ ನಾರಾಯಣ ದರ್ಶನ ಮಾಡಿ
ಮಿಥುನ : ಸ್ತ್ರೀಯರಿಂದ ಉದ್ಯೋಗದಲ್ಲಿ ಸಹಾಯ, ಆದರೆ ಮನೆ ಮಡಿದಿಯ ಬಳಿ ಜಗಳ, ಲಕ್ಷ್ಮೀವೆಂಕಟೇಶ್ವರರಿಗೆ ಪುರುಷಸೂಕ್ತ ಅಭಿಷೇಕ ಮಾಡಿಸಿ
ಕಟಕ : ರಾಶಿಯಲ್ಲಿರುವ ರಾಹು ಆರೋಗ್ಯ ಬಾಧೆ ಮಾಡುತ್ತಾನೆ, ಸುಖ ಸ್ಥಾನದಲ್ಲಿರುವ ಗುರು ಸೌಖ್ಯ ವೃದ್ಧಿಯನ್ನೂ ಮಾಡಿತ್ತಾನೆ, ರಾಹು ಅನುಗ್ರಹ ಮಾಡಿಕೊಳ್ಳಿ
ಸಿಂಹ : ಸಹೋದರರ ಸಹಾಯ, ಮಕ್ಕಳಿಂದ ಕಿರಿಕಿರಿ, ಸಾಮಾನ್ಯದಿನವಾಗಿರಲಿದೆ, ಶಿವನಿಗೆ ಗೋಧಿಯಿಂದ ಅಭಿಷೇಕ ಮಾಡಿಸಿ
ಕನ್ಯಾ : ಕುಟುಂಬ ಸೌಖ್ಯ, ಮಡದಿಯಿಂದ ಧನ ಪ್ರಾಪ್ತಿ, ಜೊತೆಗೆ ಸುಖ ಹಾನಿಯೂ ಇದೆ, ಮಹಾನಾರಾಯಣೋಪನಿಷತ್ತನ್ನು ಪಠಿಸಿ
ತುಲಾ : ಧನಾಧಿಪತಿ ಶನಿಯುತನಾಗಿರುವುದರಿಂದ ಹಣ ಕಳೆದುಕೊಳ್ಳುವ ಸಾಧ್ಯತೆ, ಹಿರಿಯರಿಂದ ಸಲಹೆ, ಅನ್ನಪೂರ್ಣೆಯ ದರ್ಶನ ಮಾಡಿ
ವೃಶ್ಚಿಕ : ವಸ್ತು ಕಳವು, ತೃತೀಯದ ಚಂದ್ರ ಕೇತುಗಳಿಂದ ಹೃದಯ ಭಾಗದಲ್ಲಿ ನೋವು, ಪರಿವಾರ ಸಹಿತ ಸುಬ್ರಹ್ಮಣ್ಯ ದರ್ಶನ ಮಾಡಿ
ಧನಸ್ಸು : ಚತುರ್ಥದಲ್ಲಿ ಶುಕ್ರನಿದ್ದು, ಅಧಿಪತಿ ಲಾಭದಲ್ಲಿದ್ದಾನೆ ಹಾಗಾಗಿ ಮನೆ, ವಾಹನ ಖರೀದಿ ಮಾಡುವ ಮನಸ್ಸು, ಗಾಣಗಾಪುರ ದರ್ಶನ ಮಾಡಿ
ಮಕರ : ರಾಶ್ಯಾಧಿಪತಿಯು ವ್ಯಯದಲ್ಲಿದ್ದಾನೆ, ಅನಾನುಕೂಲದ ದಿನ, ಶಿವನಿಗೆ ಎಳ್ಳಿನ ಅಭಿಷೇಕ ಮಾಡಿಸಿ
ಕುಂಭ : ಅಂದುಕೊಂಡ ಕಾರ್ಯಗಳು ಈಡೇರುತ್ತವೆ, ಆದರೆ ಸ್ವಲ್ಪ ದಿನ ಹಣ ಹೂಡುವ ಕಾರ್ಯ ಬೇಡ, ಶಿವಾನಂದ ಲಹರಿ ಸ್ತೋತ್ರ ಪಠಣ ಮಾಡಿ
ಮೀನ : ಸಪ್ತಮಾಧಿಪತಿ ನೀಚನಾಗಿದ್ದಾನೆ ದಾಂಪತ್ಯ ವಿರಸ, ಆದರೆ ಬಲಯುತ ಶುಕ್ರ ದೃಷ್ಟಿಯಿಂದ ಕಲಹ ಪರಿಹಾರವೂ ಆಗಲಿದೆ ಹಿರಿಯರ ಆಶೀರ್ವಾದ ಪಡೆಯಿರಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.