ಸಂತೃಪ್ತಿ, ಮೋಕ್ಷ ಗಳನ್ನು ಗಳಿಸುವುದು ಹೇಗೆ?

By Suvarna Web DeskFirst Published Oct 5, 2017, 10:19 PM IST
Highlights

ನಾವು ಸ್ವತಃ ಗೈದ ಕರ್ಮಗಳಿಗೆ ಅನುಸಾರವಾಗಿ ಅದರ ಲಗಳನ್ನು ನಾವೇ ಅನುವಿಸುತ್ತೇವೆ. ಈ ಪರಿಯ ಸಂಸಾರದ ಘಟನಾವಳಿಗಳಿಗೆ ನಾವೇ ಕಾರಣರು, ಮೋಕ್ಷ ಸಾನೆಯೂ ಕೂಡ ನಮ್ಮಿಂದಲೇ ಆಗುತ್ತದೆ ಎನ್ನುವುದು ಈ ಸಂಸ್ಕೃತ ಹಿತನುಡಿಯ ತಾತ್ಪರ್ಯ. ನಮ್ಮ ಜೀವನದಲ್ಲಿ ನಡೆಯತಕ್ಕ ಪ್ರತಿಯೊಂದು ಕಾರ್ಯಗಳಿಗೂ ನಾವೇ ಕಾರಣ ಕರ್ತರಾಗಿದ್ದೇವೆ ಅಥವಾ ನಮ್ಮ ನಿತ್ಯ ಕರ್ಮಗಳೇ ಕಾರಣವಾಗಿವೆ.

ಸಾಮಾನ್ಯ ಮನುಷ್ಯರಾದ ನಾವು ನಮ್ಮ ಜೀವಿತಾವಧಿಯಲ್ಲಿ ನಡೆಯಬಹುದಾದ ಅನೇಕ ಘಟನೆಗಳಿಗೆ ಇತರರು ಕಾರಣರು ಎಂಬಂತೆ ಬಿಂಬಿಸುತ್ತೇವೆ. ಸಾಮಾನ್ಯ ದೃಷ್ಟಿಯಲ್ಲಿ ಅದು ಸರಿ ಎನಿಸಿದರೂ ಕೂಡ ಕೂಲಂಕುಷ ವಿಚಾರ ಮಾಡಿದಾಗ ಆ ಎಲ್ಲಾ ಘಟನೆಗಳಿಗೆ ನಮ್ಮ ಆಚರಣೆಯ ಕರ್ಮಗಳೇ ಕಾರಣವೆಂಬುದು ಗೊತ್ತಾಗುತ್ತದೆ. ಹೀಗಾಗಿಯೇ ನಮ್ಮ ಹಿರಿಯರು ‘ಸ್ವಯಂ ಕರ್ಮ ಕರೋತಿ ಆತ್ಮಾ ಸ್ವಯಂ ತತ್ಪಲಂ ಅಶ್ನುತೇ| ಸ್ವಯಂ ‘ಕರ್ಮಕರೋತಿ ಸಂಸಾರೆ ಸ್ವಯಂ ತಸ್ಮಾತ್ ವಿಮುಚ್ಯತೇ॥’ ಎಂದಿದ್ದಾರೆ. ನಾವು ಸ್ವತಃ ಗೈದ ಕರ್ಮಗಳಿಗೆ ಅನುಸಾರವಾಗಿ ಅದರ ಲಗಳನ್ನು ನಾವೇ ಅನು‘ವಿಸುತ್ತೇವೆ. ಈ ಪರಿಯ ಸಂಸಾರದ ಘಟನಾವಳಿಗಳಿಗೆ ನಾವೇ ಕಾರಣರು, ಮೋಕ್ಷ ಸಾಧನೆಯೂ ಕೂಡ ನಮ್ಮಿಂದಲೇ ಆಗುತ್ತದೆ ಎನ್ನುವುದು ಈ ಸಂಸ್ಕೃತ ಹಿತನುಡಿಯ ತಾತ್ಪರ್ಯ.

ನಮ್ಮ ಜೀವನದಲ್ಲಿ ನಡೆಯತಕ್ಕ ಪ್ರತಿಯೊಂದು ಕಾರ್ಯಗಳಿಗೂ ನಾವೇ ಕಾರಣ ಕರ್ತರಾಗಿದ್ದೇವೆ ಅಥವಾ ನಮ್ಮ ನಿತ್ಯ ಕರ್ಮಗಳೇ ಕಾರಣವಾಗಿವೆ. ‘ಮಾಡಿದುಣ್ಣೋ ಮಹರಾಯ’ ಎಂಬಂತೆ ನಾವು ಮಾಡಿದ ಕರ್ಮಲಗಳನ್ನು ನಾವೇ ಅನುಭವಿಸಬೇಕಾಗುತ್ತದೆ. ಈ ಸಂಸಾರವು ಕೂಡ ನಮ್ಮ ಚಿಂತನೆಯ ಜಾಲವನ್ನು ಒಳಗೊಂಡಿದೆ. ನಾವು ಆಚರಿಸುವ ಕರ್ಮಗಳು ನಿಷ್ಕಾಮವಾಗಿ, ಸೇವಾ ಮನೋಭಾವದಿಂದ ಒಳಗೂಡಿದ್ದರೆ, ಬದುಕಿನ ಪರಮೋಚ್ಛ ಗುರಿಯಾದ ಮೋಕ್ಷ ಕೂಡ ಸನ್ನಿಹಿತವಾಗುತ್ತದೆ. ಆದ್ದರಿಂದ ದೈನಂದಿನ ಜೀವನ ಯಾತ್ರೆಯಲ್ಲಿ ನಡೆಯ ತಕ್ಕ ಬಹುತೇಕ ಎಲ್ಲಾ ಘಟನಾವಳಿಗಳಿಗೂ ನಾವೇ ಕಾರಣರು ಹೊರತು, ಅನ್ಯರಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳ ಬೇಕು. ಬದುಕಿನುದ್ದಕ್ಕೂ ಒಳಿತನ್ನೇ ಕಾಣಬೇಕಾದಲ್ಲಿ ಕಾಯೇನ ವಾಚಾ ಮನಸಾ ಒಳ್ಳೆಯ ಕಾರ್ಯಗಳನ್ನೇ ಮಾಡುವ ಪರಿಪಾಠ ವನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಕ್ಷಣಿಕವಾದ ಈ ‘ವಸಾಗರವನ್ನು ಸುಖ ಸಂತೋಷದಲ್ಲಿ ಕಳೆದು, ಸಂತೃಪ್ತಿ ಮತ್ತು ಮೋಕ್ಷವನ್ನು ಅನು‘ವಿಸಲು ಸಾಧ್ಯವಾಗುತ್ತದೆ.

- ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ‘ಭಾರತಿ ಸ್ವಾಮೀಜಿ, ದೈವಜ್ಞ ಬ್ರಾಹ್ಮಣ ಮಠ, ಕರ್ಕಿ (ಕನ್ನಡಪ್ರಭ)

click me!