ಪುಟಕ್ಕಿಟ್ಟ ಚಿನ್ನದಂತೆ ಈ ಆಪ್ತ ಮಿತ್ರ ಡೈರಿ...

First Published Jul 8, 2018, 10:46 AM IST
Highlights

ಬಹಳಷ್ಟು ಮಂದಿ ತಮ್ಮ ದಿನ ನಿತ್ಯದ ಚಟುವಟಿಕೆಗಳನ್ನು ಬರೆಯುವುದನ್ನು ರೂಢಿಸಿಕೊಂಡಿರುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಶುರು ಮಾಡಿಕೊಳ್ಳುವ ಈ ಅಭ್ಯಾಸ ದೊಡ್ಡವರಾದ ಮೇಲೂ ಮುಂದುವರಿಯುತ್ತದೆ. ಬದಲಾದ ಬದುಕಿನ ದಿನಚರಿಯಲ್ಲಿ ಬರೆಯೋ ಪುಟಗಳು ಕಡಿಮೆಯಾಗುತ್ತಾ ಹೋಗುತ್ತವೆ. ಕೆಲವರಿಗೆ ಇದು ಖರ್ಚು ವೆಚ್ಚದ ಲೆಕ್ಕದ ಪುಸ್ತಕವಾಗಿದ್ದರೆ, ಮತ್ತೆ ಹಲವರಿಗೆ ತಮ್ಮ ಜೀವನದ ಏಳು ಬೀಳುಗಳನ್ನು ಹಂಚಿಕೊಳ್ಳಬಹುದಾದ ಒಳ್ಳೆಯ ಸ್ನೇಹಿತ. 

ನಮ್ಮ ತೊಳಲಾಟ, ದ್ವಂದ್ವ, ನೋವು, ಸಂಕಟಗಳನ್ನು ಕೆಲವೊಮ್ಮೆ ಯಾರೊಂದಿಗೂ ಹೇಳಿ ಕೊಳ್ಳಲು ಸಾಧ್ಯವಿಲ್ಲ. ಅಂಥವುಗಳನ್ನು ಈ ಡೈರಿಯಲ್ಲಿ ಬರೆದುಕೊಳ್ಳಬಹುದು. ತಂದೆ-ತಾಯಿ ನೋಡುತ್ತಾರೋ ಎಂಬ ಭಯ ಬೇರೆ. ಆದರೂ ಕದ್ದು ಮುಚ್ಚಿ ಬರೆಯೋ ಡೈರಿಯಲ್ಲಿ, ಯಾರೊಂದಿಗೊ ಹೇಳಿ ಕೊಳ್ಳಲು ಸಾಧ್ಯವಾಗದ ವಿಷಯವನ್ನು ಬರೆದಿಡುತ್ತಾರೆ. ಯಾರು ನೋಡುತ್ತಾರೋ ಎಂಬ ಭಯದಲ್ಲಿ ಕದ್ದು ಮುಚ್ಚಿ ಬರೆಯೋ ಮನದಾಳದ ಮಾತುಗಳಿವು.

ಮನಸಿಗೆ ಹತ್ತಿರವಾದವರು ನಮಗೆ ಕೊಟ್ಟಿರುವ ವಸ್ತುಗಳು, ವಿಶೇಷ ದಿನ, ವಿಷಯಗಳಿಲ್ಲಿ ದಾಖಲಾಗುತ್ತವೆ. ಟ್ರೇಂಡ್ ಬದಲಾದರೂ, ತಂತ್ರಜ್ಞಾನ ಮುಂದುವರೆದರೂ ಪೆನ್ನಲ್ಲಿ ದಾಖಲಿಸುವ ಅಂತರಾಳದ ಮಾತುಗಳಿಗೆ ಯಾವುದೂ ಸರಿಸಾಟಿಯಲ್ಲ. ಅದರ ಖುಷಿ ವರ್ಣಿಲಸದಳ. ಡೈರಿಯೊಂದಿಗೆ ಹಂಚಿಕೊಂಡ ಪಿಸುಮಾತುಗಳು ಮಧುರ. ನೆನಪುಗಳು ಅಮರ.

ಅಷ್ಟಕ್ಕೂ ಏಕೆ ಡೈರಿ ಬರೆಯಬೇಕು?

  • ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ನೀವು ಭಾವನೆಗಳನ್ನು ವ್ಯಕ್ತ ಪಡಿಸುವ ರೀತಿ ಬದಲಾಗುತ್ತದೆ.
  • ಮಾನಸಿಕವಾಗಿ ಸ್ಟ್ರಾಂಗ್ ಆಗುವಿರಿ.
  • ಭಾವನೆಗಳಿಗೆ ಸಂತೈಸುವ ಮನಸ್ಸಿನವರು ನೀವಾಗುವಿರಿ. 
  • ನೆನಪುಗಳ ಸಾಗರವನ್ನೇ ಹೊತ್ತು ತಿರುಗಬಹುದು.
  • ನೆನಪಿನ ಶಕ್ತಿ ಹೆಚ್ಚುತ್ತದೆ.
  • ಖರ್ಚು ವೆಚ್ಚದ ಕಡೆಗೆ ಗಮನವಿರುತ್ತದೆ.
  • ಮೊದಲ ಪುಟದಿಂದ, ಕಡೇ ಪುಟದವರೆಗೂ ಜೀವನ ಬದಲಾಗುವ ರೀತಿ ಬದಲಾಗುತ್ತದೆ
click me!