ಕಾಯಿ ಹಾಲು ಅಥವಾ ಕಾಯಿ ನೀರು? ಯಾವುದು ಆರೋಗ್ಯಕರ?

Published : Jul 05, 2018, 05:00 PM IST
ಕಾಯಿ ಹಾಲು ಅಥವಾ ಕಾಯಿ ನೀರು? ಯಾವುದು ಆರೋಗ್ಯಕರ?

ಸಾರಾಂಶ

'ತೆಂಗು-ಇಂಗು ಎರಡಿದ್ದರೆ ಮಂಗ ಕೂಡ ಅಡುಗೆ ಮಾಡುತ್ತಂತೆ...' ಎನ್ನುವ ಗಾದೆಯಿದೆ. ಅದರಲ್ಲಿಯೂ ದಕ್ಷಿಣ ಭಾರತದ ಅಡುಗೆಗಳಿಗಿಂತೂ ತೆಂಗಿನ ತುರಿ ಇಲ್ಲದಿದ್ದರೆ, ರುಚಿಯೇ ಆಗುವುದಿಲ್ಲ. ನಮ್ಮ ಅಡುಗೆಯೊಂದಿಗೆ ಮಾತ್ರವಲ್ಲ, ಅಧ್ಯಾತ್ಮವಾಗಿಯೂ ತೆಂಗಿನೊಂದಿಗೆ ಭಾರತೀಯರಿಗೆ ನಂಟಿದ್ದು, ಇದು ಆರೋಗ್ಯಕ್ಕೂ ಒಳ್ಳೆಯದು. ಅದೇ ಕಾರಣಕ್ಕೆ ತೆಂಗಿಗೆ ಕಲ್ಪವೃಕ್ಷ ಎಂಬ ಮತ್ತೊಂದು ಹೆಸರು.

ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ಕಾಯಿ ಹಾಲು ಹಾಗೂ ನೀರನ್ನು ನಮ್ಮ ಅಡುಗೆಯಲ್ಲಿ ವಿಧವಿಧವಾಗಿ ಬಳಸಲಾಗುತ್ತದೆ. ಇದರ ಉಪಯೋಗಗಳೇನು?

  • ನಿರ್ಜಲೀಕರಣವಾದರೆ ಎಳನೀರು ರಾಮಬಾಣ. ಶೇ.4.5ರಷ್ಟು ಕಾರ್ಬೋಹೈಡ್ರೇಟ್ ಹೊಂದಿದ್ದು, ಬೇಸಿಗೆಯಲ್ಲಿ ಆಗಾಗ ಸೇವಿಸುತ್ತಿದ್ದರೆ, ದೇಹಕ್ಕೆ ಒಳಿತು. 
  • ದೇಹದ ಅಧಿಕ ಉಷ್ಣಾಂಶವನ್ನು ಹೀರಿಕೊಂಡು, ತಂಪಾಗಿಡುತ್ತದೆ. ಬಾಯಿ ಹುಣ್ಣಿನಂಥ ಸಮಸ್ಯೆಯನ್ನು ದೂರ ಮಾಡುತ್ತದೆ.
  • ಕಾಯಿ ಬೆಳೆದ 5-6 ತಿಂಗಳಲ್ಲಿ ನೀರನ್ನು ಸೇವಿಸಿದರೆ ಆರೋಗ್ಯಕಾರಿ.
  • ಪೊಟ್ಯಾಷಿಯಮ್ ಪ್ರಮಾಣ ಅಧಿಕವಾಗಿದ್ದು, ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ಕಡಿಮೆ ಮಾಡುತ್ತದೆ. 
  • ಕಾಯಿಯನ್ನು ರುಬ್ಬಿದರೆ ಹಾಲು ತಯಾರಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
  • ಹಾಲಿನಲ್ಲಿ  ಆರೋಗ್ಯಕರ ಕೊಬ್ಬು ಹೊಂದಿದ್ದು, ದೇಹದ ತೂಕ ಕಡಿಮೆ ಮಾಡಿ, ಆಯಾಸವನ್ನು ದೂರ ಮಾಡುತ್ತದೆ. 
  • ಚರ್ಮದ ಕಾಂತಿ ಹೆಚ್ಚಿಸಿ, ನೆರಿಗೆಗಳನ್ನು ನಿವಾರಿಸುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Air fryerನಲ್ಲಿ ಕರಿದ ಬೋಂಡಾ, ಬಜ್ಜಿ ಗರಿ ಗರಿ ಆಗ್ಬೇಕು ಅಂದ್ರೆ ಹೀಗ್ ಮಾಡಿ
Natural Hair Dye: ದಾಳಿಂಬೆ ಸಿಪ್ಪೆ ಜೊತೆ ಇದನ್ನು ಬೆರೆಸಿದರೆ ನೈಸರ್ಗಿಕವಾಗಿ ಶಾಶ್ವತ ಕಪ್ಪಾಗುವುದು ನಿಮ್ಮ ಕೂದಲು!