ಫಟಾಫಟ್ ಕರಿಬೇವಿನ ತಂಬುಳಿ ಮಾಡುವುದು ಸುಲಭ; ಆರೋಗ್ಯಕ್ಕೂ ಒಳ್ಳೆಯದು: ಇಲ್ಲಿದೆ ನೋಡಿ ರೆಸಿಪಿ

By Suvarna Web DeskFirst Published Jan 20, 2018, 3:30 PM IST
Highlights

ಸಾಧಾರಣವಾಗಿ ಮನೆಯಂಗಳದಲ್ಲಿ ಕರಿಬೇವು ಇದ್ದೇ ಇರುತ್ತದೆ. ಕರಿಬೇವು ಒಗ್ಗರಣೆ ಇಲ್ಲದಿದ್ದರೆ ಅಡುಗೆ ಪೂರ್ಣವಾಗುವುದೇ ಇಲ್ಲ. ಇದನ್ನು ಕೇವಲ ಒಗ್ಗರಣೆಗೆ ಮಾತ್ರವಲ್ಲ, ಚಟ್ನಿ, ತಂಬುಳಿಯನ್ನೂ ಮಾಡಬಹುದು. ಫಟಾಫಟ್ ತಂಬುಳಿಯನ್ನು ಮಾಡುವ ವಿಧಾನ ಇಲ್ಲಿದೆ

ಕರಿಬೇವಿನ ತಂಬುಳಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಮೊಸರು,  ಒಂದು ಕಪ್ ಕರಿಬೇವಿನ ಎಲೆ,  ಅರ್ಧ ಕಪ್ ಕಾಯಿ ತುರಿ ಎರಡು ಹಸಿಮೆಣಸಿನಕಾಯಿ 8 ಕಾಳು ಮೆಣಸು,  ಅರ್ಧ ಚಮಚ ಜೀರಿಗೆ ಎಣ್ಣೆ ಅಥವಾ ತುಪ್ಪ, ಒಣ ಮೆಣಸಿನಕಾಯಿ, ಸಾಸಿವೆ,

ಜೀರಿಗೆ ಮಾಡುವ ವಿಧಾನ:  ಒಗ್ಗರಣೆಗೆ ಮೊದಲು ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಮೆಣಸು,ಜೀರಿಗೆ,ಹಸಿ ಮೆಣಸಿನಕಾಯಿ ಹಾಕಿ. ನಂತರ ಕರಿಬೇವು ಹಾಕಿ ತಾಳಿಸಿ. ಇದನ್ನು ಕೊಬ್ಬರಿ ತುರಿಗೆ ಸೇರಿಸಿ ಕೊಬ್ಬರಿ ಮಿಕ್ಸಿಗೆ ಹಾಕಿ.  ನಂತರ ಮೊಸರಿನಲ್ಲಿ ಕಲಿಸಿ ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕಂತೆ ಉಪ್ಪು ಹಾಕಿ. ಆಮೇಲೆ ಸಾಸಿವೆ ಜೀರಿಗೆ ಒಣ ಮೆಣಸಿನಕಾಯಿ ಕರಿಬೇವು ಹಾಕಿ ಒಗ್ಗರಣೆ ಮಾಡಿದರೆ ರುಚಿ ರುಚಿಯಾದ ಕರಿಬೇವಿನ ತಂಬುಳಿ ಊಟಕ್ಕೆ ಸಿದ್ಧ.  

click me!