
ಬೆಂಗಳೂರು(ಜ.19): ಭಾರತದ ಅತಿದೊಡ್ಡ ದ್ವಿಚಕ್ರ ತಯಾರಿಕ ಕಂಪನಿ ಹೀರೋ ಮೋಟೊಕಾರ್ಪ್ ಸದ್ದಿಲ್ಲದೇ 2018ನೇ ಆವೃತ್ತಿಯ HF Dawn ಬೈಕ್ 37,400 ರುಪಾಯಿಗೆ(ಎಕ್ಸ್ ಶೋ ರೂಂ ಬೆಲೆ) ಓಡಿಸ್ಸಾದಲ್ಲಿ ಅನಾವರಣ ಮಾಡಲಾಗಿದೆ. ಅಲ್ಲದೇ ಶೀಘ್ರದಲ್ಲಿಯೇ ದೇಶದ ಬೇರೆ ಬೇರೆ ನಗರಗಳಲ್ಲೂ ಶೀಘ್ರದಲ್ಲಿಯೇ ಅನಾವರಣ ಮಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.
ಈ ಮೊದಲಿನ ಆವೃತ್ತಿಯು BSIV ಎಂಜಿನ್ ಹೊಂದಿರದ ಕಾರಣ, ಮಾರುಕಟ್ಟೆಯಲ್ಲಿ ಹಿಂದೆಸರಿದಿತ್ತು. ಇದೀಗ ಪರಿಷ್ಕೃತ ಮಾದರಿಯ 2018ನೇ ಆವೃತ್ತಿಯ HF Dawn ಸಂಚಲನ ಮೂಡಿಸಲು ಸಜ್ಜಾಗಿದೆ. ಹೊಸ HF Dawn ಬೈಕ್ BSIV ಮಾಡೆಲ್ ಆಗಿದ್ದು, ಕೆಂಪು ಹಾಗೂ ಕಪ್ಪು ಬಣ್ಣದ ಆವೃತ್ತಿಯಲ್ಲೂ ಲಭ್ಯವಿದೆ.
HF Dawn ಬೈಕ್ 97.2cc ಇಂಜಿನ್ ಹೊಂದಿದ್ದು, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇನ್ನು HF Dawn ಬೈಕ್ 4 ಗೇರ್ ಹೊಂದಿದ್ದು, 9.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿದೆ. ಇದರ ತೂಕ 105 ಕಿಲೋ ಗ್ರಾಂ. ಇದರ ಕೊರತೆಯೆಂದರೆ HF Dawn ಬೈಕ್'ನಲ್ಲಿ ಎಲೆಕ್ಟ್ರಾನಿಕ್ ಸ್ಟಾರ್ಟರ್ ಹಾಗೂ ಇಂಧನ ಮಾಪಕವನ್ನು ಹೊಂದಿಲ್ಲ.
ಹೀರೋ HF Dawn ಇಂಧನ ಸಾಮರ್ಥ್ಯ ಹಾಗೂ ಬಾಳಿಕೆಯನ್ನು ಗಮನದಲ್ಲಿಟ್ಟುಕೊಂಡು ಬಜಾಜ್ CT100 ಹಾಗೂ TVS Sport ಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.