ಹೊಟೇಲ್'ನ ಸ್ವಿಮ್ಮಿಂಗ್ ಪೂಲ್'ನಲ್ಲಿ ಈಜುತ್ತಿದ್ದ ಯುವಜೋಡಿ ಮೇಲೆ ದಾಳಿ ನಡೆಸಿದ 6 ಅಡಿ ಉದ್ದದ ಮೊಸಳೆ!

Published : Nov 02, 2016, 06:42 AM ISTUpdated : Apr 11, 2018, 12:51 PM IST
ಹೊಟೇಲ್'ನ ಸ್ವಿಮ್ಮಿಂಗ್ ಪೂಲ್'ನಲ್ಲಿ ಈಜುತ್ತಿದ್ದ ಯುವಜೋಡಿ ಮೇಲೆ ದಾಳಿ ನಡೆಸಿದ 6 ಅಡಿ ಉದ್ದದ ಮೊಸಳೆ!

ಸಾರಾಂಶ

ಶುಕ್ರವಾರದಂದು ಜಿಂಬಾಬ್ವೆಯ ಕರೀಬದ ಹೊಟೇಲ್'ನಲ್ಲಿ ಈ ಘಟನೆ ಸಂಭವಿಸಿದೆ. ತಡರಾತ್ರಿ ಹೊಟೇಲ್'ನ ಸ್ವಿಮ್ಮಿಂಗ್ ಪೂಲ್'ನಲ್ಲಿ ಈಜುತ್ತಿದ್ದ ಯುವ ಜೋಡಿಯ ಮೇಲೆ 6 ಅಡಿ ಉದ್ದದ ಮೊಸಳೆಯೊಂದು ಇದ್ದಕ್ಕಿದ್ದಂತೆ ಈಜುಕೊಳಕ್ಕೆ ನುಗ್ಗಿ ದಾಳಿ ಮಾಡಿದೆ. ಆದರೆ ಇದನ್ನು ಕಂಡ ಪುರುಷ ಮಾತ್ರ ಸ್ವಿಮ್ಮಿಂಗ್ ಪೂಲ್'ನಿಂದ ಮೇಲೆ ಬಂದಿದ್ದಾನೆ. ಹೀಗಾಗಿ ಮಹಿಳೆ ಮೇಲೆ ಮೊಸಳೆ ದಾಳಿ ನಡೆಸಲು ಮುಂದಾಗಿದೆ. ಮೊಸಳೆ ವಿರುದ್ಧ ಹೋರಾಡಿ ಪೂಲ್'ನಿಂದ ಮೇಲೆ ಬಂದ ಮಹಿಳೆ ಜೀವ ಉಳಿಸಿಕೊಂಡಿದ್ದಾಳೆ ಹೀಗಾಗಿ ಭೀಕರ ರಕ್ತಪಾತವೊಂದು ತಪ್ಪಿದಂತಾಗಿದೆ.

ಹರಾರೆ(ಅ.02): ಯಾವುದೇ ಪರಿವೆ ಇಲ್ಲದೇ ಹೊಟೇಲ್ ಒಂದರ ಈಜುಕೊಳದಲ್ಲಿ ಯುವ ಜೋಡಿಯೊಂದು ಈಜಾಡುತ್ತಿದ್ದ ಸಂದರ್ಭದಲ್ಲಿ ಮೊಸಳೆಯೊಂದು ದಾಳಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಶುಕ್ರವಾರದಂದು ಜಿಂಬಾಬ್ವೆಯ ಕರೀಬದ ಹೊಟೇಲ್'ನಲ್ಲಿ ಈ ಘಟನೆ ಸಂಭವಿಸಿದೆ. ತಡರಾತ್ರಿ ಹೊಟೇಲ್'ನ ಸ್ವಿಮ್ಮಿಂಗ್ ಪೂಲ್'ನಲ್ಲಿ ಈಜುತ್ತಿದ್ದ ಯುವ ಜೋಡಿಯ ಮೇಲೆ 6 ಅಡಿ ಉದ್ದದ ಮೊಸಳೆಯೊಂದು ಇದ್ದಕ್ಕಿದ್ದಂತೆ ಈಜುಕೊಳಕ್ಕೆ ನುಗ್ಗಿ ದಾಳಿ ಮಾಡಿದೆ.

ಆದರೆ ಇದನ್ನು ಕಂಡ ಪುರುಷ ಮಾತ್ರ ಸ್ವಿಮ್ಮಿಂಗ್ ಪೂಲ್'ನಿಂದ ಮೇಲೆ ಬಂದಿದ್ದಾನೆ. ಹೀಗಾಗಿ ಮಹಿಳೆ ಮೇಲೆ ಮೊಸಳೆ ದಾಳಿ ನಡೆಸಲು ಮುಂದಾಗಿದೆ. ಮೊಸಳೆ ವಿರುದ್ಧ ಹೋರಾಡಿ ಪೂಲ್'ನಿಂದ ಮೇಲೆ ಬಂದ ಮಹಿಳೆ ಜೀವ ಉಳಿಸಿಕೊಂಡಿದ್ದಾಳೆ ಹೀಗಾಗಿ ಭೀಕರ ರಕ್ತಪಾತವೊಂದು ತಪ್ಪಿದಂತಾಗಿದೆ.

ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಯುವಕನ ವರ್ತನೆಯನ್ನು ಪ್ರೇಕ್ಷಕರು ಖಂಡಿಸಿದ್ದಾರೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ
ನೀವು ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗುತ್ತೀರಾ? ಹಾಗಿದ್ದಲ್ಲಿ, ಜಾಗರೂಕರಾಗಿರಿ.