
ಕಾಲೇಜಿಗೆ ಹೋಗುವ ಮಗ ತನ್ನ ಪ್ರೇಯಸಿಯೊಂದಿಗೆ ಬೆಡ್ ರೂಂನಲ್ಲಿ ಅಸ್ತವ್ಯಸ್ತ ಸ್ಥಿತಿಯಲ್ಲಿ ಕಂಡ ತಾಯಿ ಏನೆನ್ನಬಹುದು? ಇಂತಹ ಸಂದರ್ಭ ಊಹಿಸಲೂ ಸಾಧ್ಯವಿಲ್ಲ. ಯಾಕೆಂದರೆ ಆ ವೇಳೆ ತಾಯಿ ತಾಳ್ಮೆ ಕಳೆದುಕೊಳ್ಳುತ್ತಾಳೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಕ್ಷಣದಲ್ಲಿ ಸಿಡಿಮಿಡಿಗೊಂಡು ಮಗನನ್ನು ಹೊಡೆಯಲೂ ಹಿಂಜರಿಯುವುದಿಲ್ಲ. ತನ್ನ ಮಗನ ನಡವಳಿಕೆ ಸರಿ ಇಲ್ಲವೆಂದಾಗ, ಅವನನ್ನು ತಿದ್ದಲು ಆಕೆ ಅದೆಷ್ಟೇ ಕಠಿಣ ನಿರ್ಧಾರ ತೆಗೆದುಕೊಳ್ಳಲೂ ತಯಾರಿರುತ್ತಾಳೆ.
ಕಾಲೇಜಿನ ಯುವಕನೊಬ್ಬ ತಾನು ಪ್ರೇಯಸಿಯೊಂದಿಗೆ ಬೆಡ್ ರೂಂ'ನಲ್ಲಿ ಅಸ್ತವ್ಯಸ್ತ ಸ್ಥಿತಿಯಲ್ಲಿದ್ದಾಗ ತಾಯಿ ಯಾವ ರೀತಿ ರಿಯಾಕ್ಟ್ ಮಾಡುತ್ತಾಳೆ ಎಂಬುವುದನ್ನು ತಿಳಿದುಕೊಳ್ಳಲು ಪ್ರಯೋಗವೊಂದನ್ನು ನಡೆಸಿದ್ದಾನೆ. ಇದಕ್ಕಾಗಿ ತನ್ನ ಗೆಳೆಯನೊಂದಿಗೆ ಸೇರಿ ಹುಡುಗಿಯಂತೆಯೇ ಕಾಣುವ ಗೊಂಬೆಯೊಂದನ್ನು ತನ್ನ ಬೆಡ್'ರೂಂ ನಲ್ಲಿಟ್ಟಿದ್ದಾನೆ. ಬಳಿಕ ಗೆಳೆಯನಿಗೆ 'ನಿಮ್ಮ ಮಗ ಗರ್ಲ್'ಫ್ರೆಂಡ್ ಜೊತೆ ಬೆಡ್'ರೂಂನಲ್ಲಿದ್ದಾನೆ' ಎಂದು ತಿಳಿಸಲು ಹೇಳಿದ್ದಾನೆ. ಇದನ್ನು ಕೇಳಿದ ತಾಯಿ ಮಗನನ್ನು ವಿಚಾರಿಸಲು ಬರುತ್ತಾಳೆ.
ಬೆಡ್ ರೂಂನ ಬಾಗಿಲು ತಟ್ಟಿದಾಗ ಹೊರ ಬಂದ ಮಗ ತಾನಿನ್ನೂ ಓದುತ್ತಿದ್ದೇನೆ ಎನ್ನುತ್ತಾನೆ. ಆದರೆ ಇದನ್ನು ಕೇಳದ ತಾಯಿ ಹಾಗೇ ರೂಂನೊಳಗೆ ನುಗ್ಗುತ್ತಾಳೆ. ಬೆಡ್ ಮೇಲೆ ಅಸ್ತವ್ಯಸ್ತ ಉಡುಪಿನೊಂದಿಗಿದ್ದ ಗೊಂಬೆಯನ್ನು ಯುವತಿ ಎಂದೇ ಭಾವಿಸಿದ ತಾಯಿ ಹಿಂದೆ ಮುಂದೆ ಯೋಚಿಸದೆ ಮಗನ ಕ್ಲಾಸ್ ತೆಗೆದುಕೊಳ್ಳುವುದೇ ಬಹಳ ಹಾಸ್ಯಾಸ್ಪವಾಗಿದೆ. ಆದರೆ ಏಟು ತಿಂದ ಮಗ ಗೊಂಬೆಯನ್ನು ತೋರಿಸಿ ಇದೆಲ್ಲಾ ನಿನ್ನ ವರ್ತನೆ ತಿಳಿಯಲು ಮಾಡಿದ್ದು ಎಂದು ತಿಳಿಸಿದ ಮೇಲಂತೂ ತಾಯಿಯ ಕೋಪ ಮತ್ತೆ ನೆತ್ತಿಗೇರುತ್ತದೆ. ಮುಂದೇನು ಮಾಡುತ್ತಾಳೆ ವಿಡಿಯೋ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.