
Creative Ways to Reuse Your Old TV: ಮನೆಯ ಯಾವುದೋ ಮೂಲೆಯಲ್ಲಿ ಧೂಳು ಹಿಡಿಯುತ್ತಿರುವ ಹಳೆಯ ಟಿವಿಯನ್ನು ನೋಡಿದಾಗೆಲ್ಲಾ ಅದನ್ನು ಗುಜರಿ ವ್ಯಾಪಾರಿಗೆ ಅಥವಾ ಕಸಕ್ಕೆ ಹಾಕಿಬಿಡೋಣ ಅನ್ನೋ ಯೋಚನೆ ಬರುವುದು ಸಹಜ. ಆದರೆ, ಸ್ವಲ್ಪ ಕ್ರಿಯೇಟಿವಿಟಿ ಬಳಸಿದರೆ ಆ ಹಳೆಯ 'ಡಬ್ಬಾ' ಟಿವಿ ಕೂಡ ಅದ್ಭುತ ಗ್ಯಾಜೆಟ್ ಆಗಿ ಬದಲಾಗಬಲ್ಲದು. ನಿಮ್ಮ ಹಣ ಉಳಿಸುವುದರ ಜೊತೆಗೆ ಹಳೆಯ ತಂತ್ರಜ್ಞಾನಕ್ಕೆ ಹೊಸ ಮೆರುಗು ನೀಡುವ ಟಿಪ್ಸ್ ಇಲ್ಲಿವೆ.
ನಿಮ್ಮ ಟಿವಿ ಹಳೆಯದಾದರೇನಂತೆ? ಅದನ್ನು ಇಂದಿನ ಟ್ರೆಂಡ್‌ಗೆ ತಕ್ಕಂತೆ ಸ್ಮಾರ್ಟ್ ಆಗಿ ಬದಲಿಸಬಹುದು. ಮಾರುಕಟ್ಟೆಯಲ್ಲಿ ಸಿಗುವ ಫೈರ್ ಸ್ಟಿಕ್ (Fire Stick) ಅಥವಾ ಗೂಗಲ್ ಕ್ರೋಮ್‌ಕಾಸ್ಟ್‌ನಂತಹ ಸ್ಟ್ರೀಮಿಂಗ್ ಡಿವೈಸ್‌ಗಳನ್ನು ಪ್ಲಗ್ ಇನ್ ಮಾಡಿದರೆ ಸಾಕು. ನಿಮ್ಮ ಹಳೆಯ ಟಿವಿಯಲ್ಲೇ ನೆಟ್‌ಫ್ಲಿಕ್ಸ್, ಯೂಟ್ಯೂಬ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಆಪ್‌ಗಳನ್ನು ಬಳಸಬಹುದು. ಕಡಿಮೆ ಖರ್ಚಿನಲ್ಲಿ ಇದೊಂದು ಮಿನಿ ಥಿಯೇಟರ್!
ಲ್ಯಾಪ್‌ಟಾಪ್ ಅಥವಾ ಪಿಸಿ ಸ್ಕ್ರೀನ್ ಚಿಕ್ಕದಿದೆ ಅಂತ ಬೇಸರ ಪಡಬೇಡಿ. ನಿಮ್ಮ ಹಳೆಯ ಟಿವಿಯಲ್ಲಿ HDMI ಪೋರ್ಟ್ ಇದ್ದರೆ, ಅದನ್ನು ಸುಲಭವಾಗಿ ಎರಡನೇ ಮಾನಿಟರ್ ಆಗಿ ಬಳಸಬಹುದು. ಆಫೀಸ್ ಕೆಲಸ ಮಾಡುವಾಗ ಅಥವಾ ವಿಡಿಯೋ ಎಡಿಟಿಂಗ್ ಮಾಡುವಾಗ ದೊಡ್ಡ ಸ್ಕ್ರೀನ್ ಬೇಕಿದ್ದರೆ ನಿಮ್ಮ ಹಳೆಯ ಟಿವಿಯೇ ಬೆಸ್ಟ್. ಇದರಿಂದ ಹೊಸ ಮಾನಿಟರ್ ಕೊಳ್ಳುವ ಸಾವಿರಾರು ರೂಪಾಯಿ ಹಣ ಉಳಿಯುತ್ತದೆ.
ಮನೆ ಅಥವಾ ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದೀರಾ? ಅವುಗಳ ಲೈವ್ ಫೀಡ್ ಅನ್ನು ಮೊಬೈಲ್‌ನ ಸಣ್ಣ ಸ್ಕ್ರೀನ್‌ನಲ್ಲಿ ನೋಡಿ ಕಣ್ಣು ನೋಯಿಸಿಕೊಳ್ಳುವ ಬದಲು, ನಿಮ್ಮ ಹಳೆಯ ಟಿವಿಯನ್ನು ಭದ್ರತಾ ಮಾನಿಟರ್ ಆಗಿ ಬಳಸಿ. ಟಿವಿಯನ್ನು ಗೋಡೆಗೆ ತಗಲಿಸಿ ಸಿಸಿಟಿವಿ ಸಂಪರ್ಕ ನೀಡಿದರೆ, ಮನೆಯ ಸುತ್ತಮುತ್ತ ನಡೆಯುವ ಚಟುವಟಿಕೆಗಳನ್ನು ದೊಡ್ಡ ಪರದೆಯ ಮೇಲೆ ಸ್ಪಷ್ಟವಾಗಿ ವೀಕ್ಷಿಸಬಹುದು.
ಬಿಸಿನೆಸ್‌ಗೆ ಡಿಜಿಟಲ್ ಬೋರ್ಡ್
ನೀವು ಒಂದು ಅಂಗಡಿ ಅಥವಾ ಸಣ್ಣ ಉದ್ಯಮ ನಡೆಸುತ್ತಿದ್ದೀರಾ? ಹಾಗಿದ್ದಲ್ಲಿ ಆ ಹಳೆಯ ಟಿವಿಯನ್ನು 'ಡಿಜಿಟಲ್ ಸಿಗ್ನೇಜ್' ಆಗಿ ಪರಿವರ್ತಿಸಿ. ಪ್ರತಿ ಬಾರಿ ಆಫರ್‌ಗಳ ಪೋಸ್ಟರ್ ಅಥವಾ ಬ್ಯಾನರ್ ಪ್ರಿಂಟ್ ಮಾಡಿಸುವ ಖರ್ಚು ಇಲ್ಲಿ ತಪ್ಪುತ್ತದೆ. ಟಿವಿಯಲ್ಲಿ ನಿಮ್ಮ ಉತ್ಪನ್ನಗಳ ಮಾಹಿತಿ ಅಥವಾ ರಿಯಾಯಿತಿಗಳ ಸ್ಲೈಡ್ ಶೋ ಪ್ರದರ್ಶಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸಬಹುದು.
ದಾನ ನೀಡಿ ಅಥವಾ ಗಿಫ್ಟ್ ಮಾಡಿ
ನಿಮಗೆ ಈ ಮೇಲಿನ ಯಾವುದೂ ಬೇಡ ಅನ್ನಿಸಿದರೆ, ಅದನ್ನು ಸುಮ್ಮನೆ ಕಸಕ್ಕೆ ಹಾಕಬೇಡಿ. ಅದು ಸರಿಯಾಗಿ ಕೆಲಸ ಮಾಡುತ್ತಿದ್ದರೆ ನಿಮ್ಮ ಆಪ್ತರಿಗೆ ಅಥವಾ ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಿ. ಅಥವಾ ಶಿಕ್ಷಣ ಸಂಸ್ಥೆಗಳಿಗೆ, ಎನ್‌ಜಿಒಗಳಿಗೆ (NGO) ದಾನ ಮಾಡುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಿ. ನೀವು ಬೇಡವೆಂದು ಎಸೆದ ವಸ್ತು ಇನ್ನೊಬ್ಬರ ಜೀವನದಲ್ಲಿ ಜ್ಞಾನದ ಕಿಟಕಿಯಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.