
ಉಪಯುಕ್ತ ವಸ್ತುಗಳನ್ನು ಮಾಡಲು ಬಳಸಬಹುದು
ಬೇಸಿಗೆಯಲ್ಲಿ ಕೋಲ್ಡ್ ಡ್ರಿಂಕ್‌ಗಳ ಬಳಕೆ ಹೆಚ್ಚಾಗುತ್ತದೆ. ಕ್ಯಾನ್‌ಗಳನ್ನು ಬಳಸಿದ ನಂತರ ಜನರು ಸಾಮಾನ್ಯವಾಗಿ ಅದನ್ನು ಎಸೆಯುತ್ತಾರೆ. ಆದರೆ ಸೋಡಾ ಕ್ಯಾನ್‌ಗಳನ್ನು ಎಸೆಯುವ ಬದಲು, ಉಪಯುಕ್ತ ವಸ್ತುಗಳನ್ನು ಮಾಡಲು ಬಳಸಬಹುದು ಎಂದು ನಿಮಗೆ ತಿಳಿದಿದೆಯೇ? ಕೋಲ್ಡ್ ಡ್ರಿಂಕ್ ಕ್ಯಾನ್‌ಗಳಿಂದ ವಿಂಡ್ ಚೈಮ್‌ನಿಂದ ಹಿಡಿದು ಪೆನ್ ಹೋಲ್ಡರ್‌ವರೆಗೆ ಹೇಗೆ ತಯಾರಿಸಬಹುದು ಎಂದು ತಿಳಿಯಿರಿ. ಕ್ಯಾನ್‌ನ ಬಣ್ಣದ ಭಾಗವನ್ನು ಚೂಪಾದ ಕತ್ತರಿಯಿಂದ ಎಲೆಯ ಆಕಾರದಲ್ಲಿ ಕತ್ತರಿಸಿ. ಒಂದು ಕ್ಯಾನ್‌ನಿಂದ 2 ಎಲೆಗಳನ್ನು ಸುಲಭವಾಗಿ ಮಾಡಬಹುದು. ಈ ಎಲೆಗಳನ್ನು ಅಂಟು ಬಳಸಿ ಹೂವಿನ ವಿನ್ಯಾಸದಲ್ಲಿ ಗೋಡೆಯ ಮೇಲೆ ಅಂಟಿಸಿ. ನೀವು ಬೇಕಿದ್ದರೆ ಕ್ಯಾನ್‌ಗೆ ಮೊದಲೇ ಬಣ್ಣ ಹಚ್ಚಿ ನಂತರ ಕತ್ತರಿಸಬಹುದು. ನಿಮ್ಮಿಷ್ಟದ ಬಣ್ಣ ಹಚ್ಚಿದ ನಂತರ ಗೋಡೆಯನ್ನು ಚೆನ್ನಾಗಿ ಅಲಂಕರಿಸಿ. ಅದ್ಭುತವಾದ ವಾಲ್ ಡೆಕೋರೇಟಿವ್ ಐಟಂ ಸಿದ್ಧ. ಇದಕ್ಕಾಗಿ ನೀವು ಮರದ ಬೇಸ್ ಕೂಡ ಬಳಸಬಹುದು. ನಂತರ ಅದನ್ನು ಫೋಟೋ ಫ್ರೇಮ್‌ನಂತೆ ಗೋಡೆಗೆ ನೇತುಹಾಕಿ.
ಹಲವಾರು ಕೋಲ್ಡ್ ಡ್ರಿಂಕ್ ಕ್ಯಾನ್‌ಗಳಿಂದ ನೀವು ಸುಂದರವಾದ ವಿಂಡ್ ಚೈಮ್ ಮಾಡಬಹುದು. ಇದಕ್ಕಾಗಿ ನಿಮಗೆ 6 ರಿಂದ 10 ಕ್ಯಾನ್‌ಗಳು ಬೇಕಾಗುತ್ತವೆ. ಜೊತೆಗೆ, ಮನೆಯಲ್ಲಿರುವ ಬಣ್ಣದ ದಾರಗಳು ಮತ್ತು ಇತರ ವಸ್ತುಗಳಿಂದ ವಿಂಡ್‌ಚೈಮ್ ಲುಕ್ ಸಿದ್ಧಪಡಿಸಬಹುದು. ಮೊದಲು, ಸ್ಪ್ರೇ ಬಣ್ಣ ಬಳಸಿ ಕ್ಯಾನ್‌ಗಳಿಗೆ ನಿಮ್ಮಿಷ್ಟದ ಬಣ್ಣ ಹಚ್ಚಿ. ನಂತರ, ಅದರ ಮೇಲೆ ಡಾಟ್ಸ್ ಬಳಸಿ ಹೂವುಗಳನ್ನು ಬಿಡಿಸಬಹುದು. ಈಗ ದಾರ ಕಟ್ಟಿ ನೇತುಹಾಕಿ. ಯಾವುದೇ ಖರ್ಚಿಲ್ಲದೆ ಮನೆಗೆ ಸುಂದರ ಅಲಂಕಾರಿಕ ವಸ್ತು ಸಿದ್ಧವಾಗುತ್ತದೆ.
ನೀವು ಕೋಲ್ಡ್ ಡ್ರಿಂಕ್ ಕ್ಯಾನ್ ಅನ್ನು ಸ್ವಚ್ಛಗೊಳಿಸಿ, ಅದರ ಕೆಳಭಾಗದಲ್ಲಿ ರಂಧ್ರ ಮಾಡಿ, ನಂತರ ಮಣ್ಣು ತುಂಬಿಸಿ. ಈಗ ನಿಮ್ಮಿಷ್ಟದ ಗಿಡವನ್ನು ಅದರಲ್ಲಿ ನೆಡಿ. ಮಣ್ಣು ಒಣಗಿದಾಗ ಸ್ಪ್ರೇ ಬಳಸಿ ನೀರು ಕೊಡಿ. ಈ ಗಿಡವು ನಿಮ್ಮ ಸ್ಟಡಿ ಟೇಬಲ್‌ನಿಂದ ಹಿಡಿದು ಲಿವಿಂಗ್ ರೂಮ್‌ವರೆಗೂ ತುಂಬಾ ಸುಂದರವಾಗಿ ಕಾಣುತ್ತದೆ.
ಕೋಲ್ಡ್ ಡ್ರಿಂಕ್ ಕ್ಯಾನ್ ಅನ್ನು ಸ್ವಚ್ಛಗೊಳಿಸಿ, ನಿಮ್ಮಿಷ್ಟದ ಬಣ್ಣ ಹಚ್ಚಿ. ನಂತರ ಅದರ ಮೇಲೆ ಡಾಟ್ಸ್ ಇಟ್ಟು ಸುಂದರವಾದ ಲುಕ್ ನೀಡಿ. ಈ ರೀತಿ ನೀವು ಸುಂದರವಾದ ಪೆನ್ ಹೋಲ್ಡರ್ ತಯಾರಿಸಬಹುದು. ಇದಲ್ಲದೆ, ಮತ್ತೊಂದು ಕ್ಯಾನ್ ತಯಾರಿಸಿ ಅದರಲ್ಲಿ ಅಗತ್ಯ ವಸ್ತುಗಳನ್ನು ಸುರಕ್ಷಿತವಾಗಿ ಇಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.