ಬೇಸಿಗೆಯಲ್ಲಿ ಹಾಲನ್ನು ಸುರಕ್ಷಿತವಾಗಿಡುವುದು ದೊಡ್ಡ ಸವಾಲು. ಸ್ವಲ್ಪ ಅಜಾಗರೂಕತೆಯಿಂದ ಹಾಲು ಪೂರ್ತಿ ಹಾಳಾಗಿ ಚೆಲ್ಲುವಂತಾಗುತ್ತದೆ. ಹಾಲನ್ನು ಕೆಡದಂತೆ ಉಳಿಸಿಕೊಳ್ಳಲು ಇಲ್ಲಿವೆ ಕೆಲವು ಸರಳ ಮನೆಮದ್ದುಗಳು.
kitchen May 14 2026
Author: Ashwini HR Image Credits:Getty
Kannada
ಹಾಲು ಒಡೆಯದಂತೆ ತಡೆಯಲು ರಾಮಬಾಣ
ಹಾಲು ಸ್ವಲ್ಪ ಹಳೆಯದಾಗಿದೆ ಅಥವಾ ಹೊರಗೆ ವಿಪರೀತ ಶಾಖವಿದೆ ಎನಿಸಿದಾಗ, ಹಾಲನ್ನು ಕುದಿಸುವ ಮೊದಲು ಅದಕ್ಕೆ ಒಂದು ಚಿಟಿಕೆ ಅಡುಗೆ ಸೋಡಾ (Baking Soda) ಹಾಕಿ.
Image credits: Getty
Kannada
ಇದು ಹೇಗೆ ಕೆಲಸ ಮಾಡುತ್ತದೆ?
ಶಾಖದ ಕಾರಣದಿಂದ ಹಾಲಿನಲ್ಲಿ 'ಲ್ಯಾಕ್ಟಿಕ್ ಆಸಿಡ್' ಹೆಚ್ಚಾಗಿ ಹಾಲು ಒಡೆಯುತ್ತದೆ. ಅಡುಗೆ ಸೋಡಾ ಹಾಲಿನ pH ಮಟ್ಟವನ್ನು ಸಮತೋಲನದಲ್ಲಿಟ್ಟು ಹಾಲು ಒಡೆಯದಂತೆ ತಡೆಯುತ್ತದೆ.
Image credits: Getty
Kannada
ಹಾಲನ್ನು ಸುರಕ್ಷಿತವಾಗಿಡಲು ಇತರ ಮುಖ್ಯ ಟಿಪ್ಸ್
ಸರಿಯಾದ ಸಮಯಕ್ಕೆ ಕುದಿಸಿ ಹಾಲಿನ ಪ್ಯಾಕೆಟ್ ಅಥವಾ ಡೈರಿಯಿಂದ ಮನೆಗೆ ಬಂದ ತಕ್ಷಣ ಕುದಿಸಿ. ಹಸಿ ಹಾಲು ಬೇಸಿಗೆಯಲ್ಲಿ ಬೇಗನೆ ಕೆಡುತ್ತದೆ.
Image credits: Getty
Kannada
ಆರಿಸಿ ಫ್ರಿಡ್ಜ್‌ನಲ್ಲಿಡಿ
ಬಿಸಿ ಹಾಲನ್ನು ನೇರವಾಗಿ ಫ್ರಿಡ್ಜ್‌ನಲ್ಲಿ ಇಡಬೇಡಿ. ಇದರಿಂದ ಫ್ರಿಡ್ಜ್‌ನ ತಾಪಮಾನ ಹೆಚ್ಚಾಗಿ ಹಾಲಿನ ಜೊತೆಗೆ ಇತರ ವಸ್ತುಗಳೂ ಹಾಳಾಗಬಹುದು.
Image credits: Getty
Kannada
ಶುದ್ಧವಾದ ಪಾತ್ರೆ ಬಳಸಿ
ಹಾಲು ಕುದಿಸುವ ಪಾತ್ರೆ ಸಂಪೂರ್ಣವಾಗಿ ಸ್ವಚ್ಛವಾಗಿರಲಿ. ಪಾತ್ರೆಯಲ್ಲಿ ಮೊದಲು ಕುದಿಸಿದ ಹಾಲಿನ ಅಂಶ ಅಥವಾ ಸ್ವಲ್ಪ ಹುಳಿ ಅಂಶವಿದ್ದರೂ ಹಾಲು ಒಡೆಯುತ್ತದೆ.
Image credits: Getty
Kannada
ನೀರಿನ ಬಳಕೆ
ಹಾಲನ್ನು ಪಾತ್ರೆಗೆ ಹಾಕುವ ಮೊದಲು ಪಾತ್ರೆಯ ತಳಕ್ಕೆ ಸ್ವಲ್ಪ ನೀರು ಹಾಕಿ. ಇದರಿಂದ ಹಾಲು ತಳ ಹಿಡಿಯುವುದಿಲ್ಲ ಮತ್ತು ಸೀದ ವಾಸನೆ ಬರುವುದಿಲ್ಲ.