ಯಾವತ್ತಾದರೂ ಯೋಚಿಸಿದ್ದೀರಾ, ಸುಮ್ಮನೆ ಬಾಯಿ ತಾಕಿಸುವ ಅಭ್ಯಾಸವಾದರೂ ಮುತ್ತು ಎಳೆಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರಿಗೂ ಖುಷಿ ನೀಡುತ್ತದೆ. ಅಂಥ ಮತ್ತು ಮುತ್ತಲ್ಲೇನಿದೆ?
ಯಾವ ಮಾದಕ ವಸ್ತುಗಳೂ ಬೇಡ, ಮುತ್ತೊಂದೇ ಸಾಕು, ಸೆಕೆಂಡಿನಲ್ಲಿ ಮತ್ತೇರಿಸುವ ಮ್ಯಾಜಿಕ್ ಮಾಡಲು. ಕಾಳಜಿ ಹೇಳುವಾಗ, ಪ್ರೀತಿ ವ್ಯಕ್ತಪಡಿಸುವಾಗ ಅಧರಗಳು ಆಡಲು ಸೋತ ಮಾತೆಲ್ಲವನ್ನೂ ಮುತ್ತೊಂದು ವ್ಯಕ್ತಪಡಿಸಬಲ್ಲದು. ಇಂಥ ಈ ಮುತ್ತಿನ ಕುರಿತ ಆಶ್ಚರ್ಯಕರ, ಅಪರೂಪದ ವಿಷಯಗಳನ್ನು ಇಲ್ಲಿ ನೀಡಲಾಗಿದೆ.
1. ನಿಮ್ಮ ಮುತ್ತಿನ ಸ್ಟೈಲ್ ಹೊಟ್ಟೆಯಲ್ಲೇ ಆರಂಭವವಾಗುತ್ತದೆ!
ಯಾವುದೇ ಹಾಲಿವುಡ್ ಮೂವಿ, ಪೇಯ್ಟಿಂಗ್ ಅಥವಾ ಶಿಲೆಗಳನ್ನು ಗಮನಿಸಿ, ಕಪಲ್ ತಮ್ಮ ತಲೆಯನ್ನು ಬಲಕ್ಕೆ ಬಗ್ಗಿಸಿಯೇ ಕಿಸ್ ಮಾಡುತ್ತಿರುತ್ತಾರೆ. ಅರೆ ಹೌದಲ್ಲ ಎಂದುಕೊಂಡಿರಾ? ಈ ಬಗ್ಗೆ ಸಂಶೋಧನೆ ನಡೆಸಿದ ಜರ್ಮನಿಯ ಸಂಶೋಧಕರು ಸುಮಾರು ನೂರು ದಂಪತಿಯನ್ನು ಅಧ್ಯಯನ ಮಾಡಿದಾಗ 3ರಲ್ಲಿ ಎರಡು ಜೋಡಿ ಬಲಕ್ಕೆ ತಲೆ ಬಗ್ಗಿಸಿಯೇ ಮುತ್ತನ್ನಿಡುವುದು ಕಂಡುಬಂತು. ನಂತರ ವಿಜ್ಞಾನಿಗಳು ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ, ನಾವು ಹೊಟ್ಟೆಯಲ್ಲಿರುವಾಗಲೇ ಬಲಕ್ಕೆ ತಲೆ ತಿರುಗಿಸುವ ಅಭ್ಯಾಸ ಆರಂಭವಾಗುತ್ತದೆ. ಈ ಕಿಸ್ಸಿಂಗ್ ಸ್ಟೈಲ್ ಕೂಡಾ ಆಗಲೇ ಆರಂಭವಾಗುತ್ತದೆ ಎಂದು ಘೋಷಿಸಿದರು.
undefined
2. ಮುತ್ತು ಕೊಡಲು ಸ್ನಾಯುಗಳ ಸಹಕಾರ ಅತ್ಯಗತ್ಯ!
ಏಕೆ ಗೊತ್ತಾ? ಒಂದು ಮುತ್ತಿನ ಹಿಂದೆ 146 ಸ್ನಾಯುಗಳು ಒಗ್ಗಟ್ಟಿನಲ್ಲಿ ಕೆಲಸ ಮಾಡುತ್ತವೆ! ಅವುಗಳಲ್ಲಿ 34 ಮುಖದ ಸ್ನಾಯುಗಳು, 112 ಆಂಗಿಕ ಸ್ನಾಯುಗಳು.
ನಾಟಕ ಕುಲಗೆಡಿಸಿದ ಆ ಒಂದು ಲಿಪ್ ಲಾಕ್
3. ಮುತ್ತು ನೀಡಿ ಪ್ರೀತಿ ವ್ಯಕ್ತಪಡಿಸುವುದನ್ನು ಇಲಿಗಳಿಂದ ಕಲಿತಿದ್ದೇವೆ!
ಟೋಕಿಯೋ ಯೂನಿವರ್ಸಿಟಿಯ ಸಂಶೋಧಕರಾದ ಖಜುಶಿಗೆ ತೌಹಾರಾ ಹಾಗೂ ಸಹೋದ್ಯೋಗಿಗಳ ಪ್ರಕಾರ, ಸುಮಾರು 75ರಿಂದ 125 ದಶಲಕ್ಷ ವರ್ಷದ ಹಿಂದೆ ಇದ್ದ ಇಲಿಗಳಿಂದ ನಮ್ಮ ಮುತ್ತು ನೀಡುವ ಕಲೆ ಬಂದಿದೆ. ಆಶ್ಚರ್ಯವೆಂದರೆ ಮಾನವನ ಹಾಗೂ ಇಲಿಗಳ ಜೆನೆಟಿಕ್ ಮೇಕಪ್ ಸುಮಾರಿಗೆ ಒಂದೇ ತರ ಇದೆ. ಇಯೋಮಯಾ ಎಂಬ ಪೂರ್ವಜ ಇಲಿಯು ತನ್ನ ಬಯಕೆಯನ್ನು ವ್ಯಕ್ತಪಡಿಸಲು ಸಂಗಾತಿ ಇಲಿಯ ಮೂಗನ್ನು ಉಜ್ಜುತ್ತಿತ್ತು. ಅಲ್ಲಿಂದಲೇ ಮನುಷ್ಯನ ಜೀನ್ಸ್‌ನಲ್ಲಿ ಮುತ್ತು ಕೊಟ್ಟು ಬಯಕೆ ವ್ಯಕ್ತಪಡಿಸುವ ಸ್ವಭಾವ ಬಂದಿದೆ ಎಂಬುದು ವಿಜ್ಞಾನಿಗಳ ಆಂಬೋಣ.
4. ಇಂಗ್ಲೆಂಡ್ ರಾಜ ಕಿಸ್ಸಿಂಗ್ ಬ್ಯಾನ್ ಮಾಡಿದ್ದ!
1439ರ ಜುಲೈ 16ರಂದು ಇಂಗ್ಲೆಂಡ್‌ನ ರಾಜ ಹೆನ್ರಿ v1 ದೇಶದಲ್ಲಿ ಮುತ್ತು ನೀಡುವುದನ್ನೇ ಬ್ಯಾನ್ ಮಾಡಿಬಿಟ್ಟಿದ್ದ! ಅವನಿಗೇನು ರೋಗ ಬಂದಿತ್ತು ಎಂದ್ರಾ? ಅವನಿಗಲ್ಲ, ಜನರಿಗೆ ರೋಗ ಬರಬಾರದೆಂದು ಹೀಗೆ ಮಾಡಿರುವುದಾಗಿ ಆತ ಕಾರಣ ನೀಡಿದ್ದ. ಇದು ನಿಧಾನವಾಗಿ ಪ್ರಪಂಚದ ಇತರ ದೇಶಗಳಿಗೂ ಹರಡಿ ಸ್ಮೂಚಿಂಗ್ ಬ್ಯಾನ್ ಮಾಡುವುದು ಕಾಮನ್ ಆಗಿಹೋಗಿತ್ತು. 16ನೇ ಶತಮಾನದಲ್ಲಿ ನಲ್ಲಿಇಟಲಿಯ ನ್ಯಾಪಲ್ಸ್, ಸಾರ್ವಜನಿಕವಾಗಿ ಮುತ್ತು ನೀಡುವುದನ್ನು ನಿಷೇಧಿಸಿದ್ದಲ್ಲದೆ, ಹಾಗೆ ಮಾಡಿದಲ್ಲಿ ಮರಣದಂಡನೆಯನ್ನೂ ಘೋಷಿಸಲಾಗಿತ್ತು.
5. ಎಪಿಕ್ ಮೂವಿ ಕಿಸ್‌ಗಳೆಲ್ಲ ಮುಂಚೆ ಇರಲೇ ಇಲ್ಲ!
ಏಕೆಂದರೆ, 1930ರಲ್ಲಿ ಹೇಸ್ ಕೋಡ್ ಎಂಬ ಸೆನ್ಸಾರ್ ನಿಯಮಾವಳಿಗಳು ನಟನಟಿಯರು ಮಲಗಿ ಕಿಸ್ ಮಾಡುವುದನ್ನು ನಿಷೇಧಿಸಿದ್ದವು. ಅಷ್ಟೇ ಅಲ್ಲ, ನಟಿಸುವ ದಂಪತಿಯು ಅವಳಿ ಬೆಡ್‌ಗಳಲ್ಲೇ ಮಲಗಬೇಕು, ಮಂಚದಲ್ಲಿ ಕಿಸ್ಸಿಂಗ್ ಸೀನ್ ತೆಗೆಯಲೇಬೇಕೆಂದರೆ, ಒಬ್ಬರು ಕಾಲನ್ನು ನೆಲಕ್ಕೆ ಊರಿರಲೇಬೇಕು, 3 ಸೆಕೆಂಡ್‌ಗಿಂತ ಹೆಚ್ಚು ಕಾಲ ಕಿಸ್ ಮಾಡಬಾರದು ಮುಂತಾದ ರೂಲ್ಸ್‌ಗಳು ಎಪಿಕ್ ಕಿಸ್ಸಿಂಗ್ ಸೀನ್‌ಗೆ ಬ್ರೇಕ್ ಹಾಕಿದ್ದವು.
6. ಕಿಸ್ಸಿಂಗ್ ಕುರಿತ ಕೋರ್ಸ್ ಮಾಡಬಹುದು!
ಕಿಸ್ಸಿಂಗ್‌ನಲ್ಲೇ ಕೆಲಸ ಹುಡುಕಿಕೊಳ್ಳಬೇಕೆಂದು ನಿಮ್ಮ ಯೋಜನೆ ಏನಾದರೂ ಇದ್ದರೆ, ಮುತ್ತಿನ ಬಗ್ಗೆ ಮುಂಚೆ ಅಧ್ಯಯನ ಮಾಡಬೇಕು. ಈ ಅಧ್ಯಯನವನ್ನು ಫಿಲೆಮಟಾಲಜಿ ಎಂದು ಕರೆಯಲಾಗುತ್ತದೆ. ಇನ್ನು ಇದನ್ನು ಅಧ್ಯಯನ ಮಾಡುವವರನ್ನು ಆಸ್ಕ್ಯುಲೋಲಜಿಸ್ಟ್ ಎನ್ನಲಾಗುತ್ತದೆ.
7. ಮುತ್ತಿನ ದಾಖಲೆ
ನೀವು ಎಷ್ಟೇ ಉತ್ತಮ ಮುತ್ತಮ್ಮ ಅಥವಾ ಮುತ್ತಪ್ಪ ಆಗಿರಬಹುದು, ಆದರೆ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮುರಿಯಲಾರಿರಿ. ಏಕೆಂದರೆ ಥೈಲ್ಯಾಂಡ್‌ನ ಜೋಡಿಯು ಯಾರೂ ಬ್ರೇಕ್ ಮಾಡದಷ್ಟು ಹೊತ್ತು ಮುತ್ತು ಕೊಟ್ಟುಕೊಂಡು ಕಿಸ್ಸಿಂಗ್ ಚಾಂಪಿಯನ್ಸ್ ಆಗಿದ್ದಾರೆ. ಅವರೆಷ್ಟು ಸಮಯ ಮುತ್ತು ಕೊಟ್ಟಿರಬಹುದು ಊಹಿಸಬಲ್ಲಿರಾ? ಬರೋಬ್ಬರಿ 58 ಗಂಟೆ, 35 ನಿಮಿಷ, 58 ಸೆಕೆಂಡ್‌ಗಳು!