ನಾಗರ ಹಾವನ್ನು ನೆಕ್ಕುತ್ತಿರೋ ಹಸು; ವಿಡಿಯೋ ನೋಡಿ ಜನ ದಂಗು !

Published : Aug 05, 2023, 02:30 PM IST
ನಾಗರ ಹಾವನ್ನು ನೆಕ್ಕುತ್ತಿರೋ ಹಸು; ವಿಡಿಯೋ ನೋಡಿ ಜನ ದಂಗು !

ಸಾರಾಂಶ

ನಾಗರ ಹಾವು ಅಂದ್ರೆ ಎಲ್ಲರಿಗಗೂ ಭಯ. ಹಾವನ್ನು ಕಂಡ್ರೆ ಓಡುವ ಜನರು ವಿಡಿಯೋ ನೋಡಿದಾಗ್ಲೂ ಹೆದರುತ್ತಾರೆ. ಹಾವು ಯಾರ ಜೊತೆಯೂ ಸ್ನೇಹ ಬೆಳೆಸಲು ಸಾಧ್ಯವೇ ಇಲ್ಲ ಎಂದುಕೊಂಡಿರುವ ನಮಗೆ ಈ ವಿಡಿಯೋ ಆಘಾತವನ್ನುಂಟು ಮಾಡುತ್ತದೆ.

ಟಿವಿಯಲ್ಲಿ ಹಾವು ನೋಡಿದ್ರೂ ಸರಿಯಾಗಿ ನಿದ್ರೆ ಬಂದಿಲ್ಲ ಎನ್ನುವ ಜನರಿದ್ದಾರೆ. ಹಾವಿನ ಮಹಿಮೆಯೇ ಅಂತಹದ್ದು. ಹಗಲಿನಲ್ಲಿ ಹಾವು ಕಂಡ್ರೆ ಜನರು ಬೆಚ್ಚಿ ಬೀಳ್ತಾರೆ. ಈಗಿನ ದಿನಗಳಲ್ಲಿ ಹಾವಿನ ಜೊತೆ ಆಟ ಆಡುವ ಅನೇಕ ಜನರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಕೆಲ ವಿಡಿಯೋಗಳು ಜನರನ್ನು ಬೆಚ್ಚಿ ಬೀಳಿಸುತ್ತವೆ. ಸಾಮಾನ್ಯವಾಗಿ ನಾಗರ ಹಾವು (King Cobra) ಹತ್ತಿರ ಬಂದವರನ್ನೆಲ್ಲ ಕಚ್ಚುತ್ತೆ ಎನ್ನುವ ನಂಬಿಕೆ ನಮಗಿದೆ. ಆದ್ರೆ ನಾವು ಹಾವಿಗೆ ಏನೂ ಮಾಡಿಲ್ಲವೆಂದ್ರೆ ಹಾವು ಶಾಂತವಾಗಿ ವಾಪಸ್ ಹೋಗುತ್ತೆ ಎಂದು ತಜ್ಞರು (Experts) ಹೇಳ್ತಾರೆ. ತನ್ನ ಜೀವಕ್ಕೆ ಆಪತ್ತಿದೆ ಎನ್ನುವ ಸಂದರ್ಭದಲ್ಲಿ ಮಾತ್ರ ಹಾವು ಕಚ್ಚುತ್ತೆ. ಎರಡು ಹಾವುಗಳು ಆಟ ಆಡೋದನ್ನು ನಾವು ನೋಡಿದ್ದೇವೆ. ಆದ್ರೆ ಹಾವು ಹಾಗೂ ಆಕಳ ನಡುವಿನ ಬಾಂಧವ್ಯದ ವಿಡಿಯೋ (Video) ಒಂದು ಈಗ ಎಲ್ಲರನ್ನು ಅಚ್ಚರಿಗೊಳಿಸಿದೆ. ವೀಡಿಯೋದಲ್ಲಿ, ಹಸು ತನ್ನ ಮುಂದೆ ಕುಳಿತಿದ್ದ ಕಿಂಗ್ ಕೋಬ್ರಾವನ್ನು ತನ್ನ ನಾಲಿಗೆಯಿಂದ ನೆಕ್ಕುತ್ತಿರುವುದನ್ನು ಕಾಣಬಹುದು.  

ಹಸು ಹಾಗೂ ನಾಗರ ಹಾವಿನ ಈ ಪ್ರೀತಿಯ ವಿಡಿಯೋ ಎಲ್ಲಿಯದೆ ಎಂಬುದು ಗೊತ್ತಾಗಿಲ್ಲ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ  ಐಎಫ್‌ಎಸ್ ಅಧಿಕಾರಿ ಒಬ್ಬರು ಹಂಚಿಕೊಂಡಿದ್ದಾರೆ. ಹಸು ಹಾವನ್ನು ನೆಕ್ಕುತ್ತಿದ್ದರೂ ಹಾವು ಅದನ್ನು ಕಚ್ಚುವ ಪ್ರಯತ್ನ ಮಾಡಿಲ್ಲ. ನಯವಾಗಿ ಹಸುವಿನ ಪ್ರೀತಿಯನ್ನು ಹಾವು ನಿರಾಕರಿಸೋದನ್ನು ನೀವು ನೋಡ್ಬಹುದು. ಈ ಅಪರೂಪದ ದೃಶ್ಯ ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು  ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿವರಿಸೋದು ಕಷ್ಟ. ಇಬ್ಬರ ನಡುವಿನ ಈ ನಂಬಿಕೆಯು ನಿಜವಾದ ಪ್ರೀತಿಯಿಂದ ಸ್ಥಾಪಿತವಾಗಿದೆ ಎಂದು ಐಎಫ್ ಎಸ್ ಅಧಿಕಾರಿ ಈ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ 2 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಸುಮಾರು 5 ಸಾವಿರ ಬಾರಿ ಲೈಕ್ ಸಿಕ್ಕಿದೆ.

Female Viagra: ಮಹಿಳಾ ವಯಾಗ್ರದ ಬಗ್ಗೆ ನಿಮಗೆಷ್ಟು ಗೊತ್ತು?

ಈ 17 ಸೆಕೆಂಡ್‌ಗಳ ವೀಡಿಯೊದಲ್ಲಿ, ನಾಗರ ಹಾವು ಹಸುವಿನ ಮುಂದೆ ಹೆಡೆ ಎತ್ತಿ ಕುಳಿತಿರುವುದನ್ನು ನೀವು ನೋಡ್ಬಹುದು. ಇಬ್ಬರೂ ಒಬ್ಬರನ್ನೊಬ್ಬರು ಸ್ವಲ್ಪ ಸಮಯ ನೋಡುತ್ತಾರೆ.  ಸ್ವಲ್ಪ ಸಮಯದ ನಂತರ ಹಸು, ಹಾವನ್ನು ಮೂಸುತ್ತದೆ. ಹಾವಿನ ಹೆಡೆ ಬಳಿ ಹೋಗಿ  ಬಹಳ ಪ್ರೀತಿಯಿಂದ ಹಾವನ್ನು ನೆಕ್ಕಲು ಪ್ರಾರಂಭಿಸುತ್ತದೆ. ತನಗೆ ಹಸುವಿಗೆ ತೊಂದರೆ ಇಲ್ಲ ಎಂಬುದು ಹಾವಿಗೆ ಗೊತ್ತಾದಂತಿದೆ. ಹಾಗಾಗಿ ಹಾವು ಯಾವುದೇ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ವಿರೋಧ ಪ್ರತಿಕ್ರಿಯೆ ನೀಡೋದಿಲ್ಲ. ಹಸುವಿನ ಮುಂದೆ ಹಾವು ಇನ್ನೂ ಆರಾಮವಾಗಿ ಕುಳಿತುಕೊಳ್ಳುತ್ತದೆ. 

ಪ್ರೀತಿ ಬಲೆಯಲ್ಲಿ NATIONAL CRUSH ಸ್ಮೃತಿ ಮಂಧನಾ..! ಆ ಲಕ್ಕಿ ಹುಡುಗ ಯಾರು ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಈ ವೀಡಿಯೋ ನೋಡಿದ ಬಳಕೆದಾರರು ಅಚ್ಚರಿಗೊಂಡಿದ್ದಾರೆ. ಇದೇ ಕಾರಣಕ್ಕೆ ನಾವು ಹಸುವನ್ನು ತಾಯಿ ಎಂದು ಕರೆಯುತ್ತೇವೆ ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ನಂದಿ... ಸರ್ಪ ದೇವರ ಪ್ರೀತಿಯಲ್ಲಿ... ಎಂದು ಕಮೆಂಟ್ ಮಾಡಿದ್ದಾರೆ.  ಹಾವು ಕಚ್ಚಿ ನಮ್ಮ ಮನೆ ಹಸುವೊಂದು ಸಾವನ್ನಪ್ಪಿತ್ತು. ಹಾಗಾಗಿ ಹಾವು, ಹಸುವನ್ನು ಕಚ್ಚೋದಿಲ್ಲ ಎನ್ನಲು ಸಾಧ್ಯವಿಲ್ಲ. ಎಲ್ಲ ದಿನವೂ ಭಾನುವಾರ ಆಗಿರೋದಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ.  ನಂದಿ ಲವ್ ವಿತ್ ನಾಗದೇವ್ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇದೊಂದು ಸಾಕಿದ ಹಾವು, ಹಾಗಾಗಿ ಇದು ಏನು ಮಾಡೋದಿಲ್ಲ ಎಂದು ಇನ್ನೊಬ್ಬರು ಬರೆದಿರೋದನ್ನು ನೀವು ಕಾಣ್ಬಹುದು. ಅಲ್ಲಿ ಕುಳಿತು ಹೇಗೆ ವಿಡಿಯೋ ಮಾಡ್ತಿದ್ದಾರೆ, ಅವರಿಗೆ ಭಯವಾಗ್ಲಿಲ್ವಾ ಎನ್ನುವ ಪ್ರಶ್ನೆಯನ್ನು ಇನ್ನೊಬ್ಬ ಬಳಕೆದಾರ ಕೇಳಿದ್ದಾನೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?