ಸಂಡೇ ಸ್ಪೆಷಲ್‌, ಮಂಗಳೂರಿನ ಟೇಸ್ಟೀ ಟೇಸ್ಟೀ ಚಿಕನ್ ಸುಕ್ಕಾ ಟ್ರೈ ಮಾಡಿ

By Vinutha PerlaFirst Published Aug 5, 2023, 1:24 PM IST
Highlights

ವೀಕೆಂಡ್ ಬಂತು. ನಾಳೆ ಭಾನುವಾರ. ಅಂದ್ಮೇಲೆ ಊಟದಲ್ಲಿ ಸ್ಪೆಷಲ್ ಇಲ್ದಿದ್ರೆ ಆಗುತ್ತಾ? ಈ ಬಾರಿ ಅದೇ ಬಿರಿಯಾನಿ, ಕೋಳಿ ಸಾರು ಮಾಡೋದು ಬಿಟ್ಬಿಡಿ. ಸ್ಪೆಷಲ್ ಆಗಿ ಮಂಗಳೂರಿನ ಚಿಕನ್ ಸುಕ್ಕಾ ಟ್ರೈ ಮಾಡಿ. ಇಲ್ಲಿದೆ ರೆಸಿಪಿ.

ಮಂಗಳೂರು-ಉಡುಪಿ ಕಡೆ ಯಾವ ಹೊಟೇಲ್‌ಗೆ ಹೋದರೂ ಕೋಳಿ ಸುಕ್ಕವಂತೂ ಇದ್ದೇ ಇರುತ್ತದೆ.  ಸ್ಥಳೀಯ ತುಳು ಭಾಷೆಯಲ್ಲಿ ಇದನ್ನು ಕೋರಿ ಸುಕ್ಕ ಅಥವಾ ಕೋರಿ ಅಜದಿನ ಎಂದು ಕರೆಯಲಾಗುತ್ತದೆ. ಇದು ಹೆಚ್ಚು ಗ್ರೇವಿಯೂ ಅಲ್ಲದ, ಹೆಚ್ಚು ಡ್ರೈ ಕೂಡಾ ಆಗಿರದ ಒಂದು ರೆಸಿಪಿಯಾಗಿದೆ. ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯ ಒಣ ಮಸಾಲಾದಲ್ಲಿ ಬೇಯಿಸಿ ಇದನ್ನು ಸಿದ್ಧಪಡಿಸುತ್ತಾರೆ. ಹುರಿದ ತೆಂಗನಕಾಯಿಯನ್ನು ಸಹ ಸೇರಿಸುತ್ತಾರೆ.

ಮಂಗಳೂರಿನ ಪ್ರಸಿದ್ಧ ಖಾದ್ಯಗಳ ಪಟ್ಟಿಯನ್ನು ಮಾಡಿದರೆ ಕೋರಿ ಸುಕ್ಕ (Chicken sukka) ಅಗ್ರಸ್ಥಾನದಲ್ಲಿದೆ. ಕೆಲವೊಬ್ಬರು ಮನೆಯಲ್ಲಿಯೇ ಕೋಳಿ ಸುಕ್ಕದ ಪೌಡರ್ ರೆಡಿ ಮಾಡಿದರೆ ಇನ್ನು ಕೆಲವರು ಮಾರ್ಕೆಟ್‌ನಿಂದ ಸಿದ್ಧವಾಗಿರುವ ಸುಕ್ಕಾ ಪೌಡರ್ ತರುತ್ತಾರೆ. ವೀಕೆಂಡ್ ಬಂತು. ನಾಳೆ ಭಾನುವಾರ. ಅಂದ್ಮೇಲೆ ಊಟದಲ್ಲಿ ಸ್ಪೆಷಲ್ ಇಲ್ದಿದ್ರೆ ಆಗುತ್ತಾ? ಈ ಬಾರಿ ಅದೇ ಬಿರಿಯಾನಿ, ಕೋಳಿ ಸಾರು ಮಾಡೋದು ಬಿಟ್ಬಿಡಿ. ಸ್ಪೆಷಲ್ ಆಗಿ ಮಂಗಳೂರಿನ ಚಿಕನ್ ಸುಕ್ಕಾ ಟ್ರೈ ಮಾಡಿ. ಈ ಟೇಸ್ಟೀ ಟೇಸ್ಟೀ ಚಿಕನ್ ಸುಕ್ಕಾ ಮಾಡುವುದು ಹೇಗೆ ತಿಳಿಯೋಣ.

Chicken Recipes: ಜಗತ್ತಿನ ಅತ್ಯುತ್ತಮ ಚಿಕನ್ ರೆಸಿಪಿ ಯಾವುದು ಗೊತ್ತಾ?

ಬೇಕಾದ ಪದಾರ್ಥಗಳು
ಪದಾರ್ಥಗಳು
500 ಗ್ರಾಂ ಚಿಕನ್ ಸಣ್ಣ ತುಂಡುಗಳಾಗಿ ಕತ್ತರಿಸಿ
2 ಮಧ್ಯಮ ಗಾತ್ರದ ಈರುಳ್ಳಿ
4-5 ಬೆಳ್ಳುಳ್ಳಿ
ಕರಿಬೇವಿನ ಎಲೆಗಳು
1/2 ಕಪ್ ತುರಿದ ತೆಂಗಿನಕಾಯಿ
ಉಪ್ಪು ರುಚಿಗೆ ತಕ್ಕಷ್ಟು

ಹುರಿಯಲು ಬೇಕಾದ ಸಾಮಗ್ರಿಗಳು
6 ಒಣ ಕೆಂಪು ಮೆಣಸಿನಕಾಯಿ
1 1/2 ಟೇಬಲ್ ಸ್ಪೂನ್ ಕೊತ್ತಂಬರಿ ಬೀಜ
4-6 ಸಂಪೂರ್ಣ ಕರಿಮೆಣಸು
1/4 ಟೀಚಮಚ ಮೇಥಿ ಬೀಜ
1/4 ಟೀಚಮಚ ಜೀರಿಗೆ ಬೀಜಗಳು
1/4 ಟೀಚಮಚ ಅರಿಶಿನ ಪುಡಿ
1 ಟೀಚಮಚ ಹುಣಸೆಹಣ್ಣು

ಮಂಗಳೂರು ಸ್ಟೈಲ್‌ ಚಿಕನ್ ಗೀ ರೋಸ್ಟ್ ರೆಸಿಪಿ ಮಾಡೋದು ತುಂಬಾ ಈಝಿ

ಮಾಡುವ ವಿಧಾನ
ಚಿಕನ್ ಅನ್ನು ಸ್ವಚ್ಛಗೊಳಿಸಿ, ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಎಲ್ಲಾ ಮಸಾಲೆಗಳನ್ನು ಪ್ಯಾನ್‌ನಲ್ಲಿ ಹಾಕಿ ಹುರಿಯಿರಿ. ಎಲ್ಲವೂ ಫ್ರೈ ಆದ ನಂತರ ಒಣ ಮೆಣಸಿನಕಾಯಿ (Dry chillies) ಸೇರಿಸಿ. ಈಗ ಇದಕ್ಕೆ ಸ್ಪಲ್ಪ ಎಣ್ಣೆ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಗೂ ಈರುಳ್ಳಿ (Onion) ಸೇರಿಸಿಕೊಳ್ಳಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಅರಿಶಿನ ಪುಡಿ (Turmeric powder) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆಫ್ ಮಾಡಿ ಮತ್ತು ಮಿಶ್ರಣವನ್ನು ತಣ್ಣಗಾಗಲು ಬಿಡಿ.

1/4 ತುರಿದ ತೆಂಗಿನಕಾಯಿ, ಹುಣಸೆಹಣ್ಣು ಸೇರಿಸಿ ಮತ್ತು ಮಿಶ್ರಣವನ್ನು ಬ್ಲೆಂಡರ್‌ನಲ್ಲಿ ಹೆಚ್ಚು ಪೇಸ್ಟ್ ಆಗದಂತೆ ರುಬ್ಬಿಕೊಳ್ಳಿ. ಇದಕ್ಕೆ ಪ್ರೈ ಮಾಡಿದ ಮಸಾಲೆಗಳು, ಹುಣಸೇ ಹಣ್ಣಿನ ಪೇಸ್ಟ್ ಸೇರಿಸಿ. ಈ ಮಸಾಲೆಯನ್ನು ಪಾತ್ರೆಗೆ ಶಿಫ್ಟ್ ಮಾಡಿ, ಚಿಕನ್ ತುಂಡುಗಳು, ಕರಿಬೇವಿನ ಎಲೆಗಳು, ಉಪ್ಪು ಸೇರಿಸಿ 10 ನಿಮಿಷಗಳ ಕಾಲ ಮುಚ್ಚಳವನ್ನು ಮುಚ್ಚಿ ಬೇಯಿಸಿ. ಇದು ತುಂಬಾ ನೀರು ಆಗಬಾರದು, ತುಂಬಾ ಡ್ರೈ ಸಹ ಆಗದಂತೆ ನೋಡಿಕೊಳ್ಳಿ. ಇದಕ್ಕೆ ಮೇಲಿನಿಂದ ಫ್ರೈ ಮಾಡಿದ ತೆಂಗಿನ ತುರಿ ಮತ್ತು ಸೇರಿಸಿ ಮಿಕ್ಸ್ ಮಾಡಿ. ಕೆಲವು ಕೊತ್ತಂಬರಿ ಸೊಪ್ಪು ಎಲೆಗಳಿಂದ ಅಲಂಕರಿಸಿ. ಈಗ ರುಚಿ ರುಚಿಯಾದ ಕೋಳಿ ಸುಕ್ಕ ಸವಿಯಲು ಸಿದ್ಧ.

ಓವನ್ ಇಲ್ಲದೆ ಸುಲಭವಾಗಿ ಬಾಯಲ್ಲಿ ನೀರೂರಿಸೋ ತಂದೂರಿ ಚಿಕನ್ ಮಾಡಿ

click me!