ನಿಮ್ಮ ಮದುವೆಗೆ ಎಷ್ಟು ಹಣ ಖರ್ಚಾಗಿದೆ? ದಂಪತಿಗಿದು ಡೇಂಜರ್ ಸುದ್ದಿ

First Published Jul 9, 2018, 5:52 PM IST
Highlights

ಮದುವೆಯಾಗಬೇಕು ಎಂಬುದು ಪ್ರತಿಯೊಬ್ಬನ ಜೀವನದ ಕನಸು. ಅದರಲ್ಲೂ ಅದ್ದೂರಿ ಮದುವೆಯಾಗಬೇಕು ಎಂಬುದು ಕೆಲವರ ಆಸೆಯಾಗುತ್ತಿದೆ. ಇನ್ನು ಕೆಲವರು ಕುಟುಂಬದ ಆಸೆಗೆ ಬಿದ್ದು ಅದ್ದೂರಿ ಮದುವೆಯಾಗುತ್ತಾರೆ. ಮದುವೆಗೆ ಮಾಡುವ ಖರ್ಚಿಗೂ ವಿವಾಹ ವಿಚ್ಛೇದನಕ್ಕೂ ಏನಾದರೂ ಸಂಬಂಧ ಇದೇಯಾ? ಹೌದು ಎನ್ನುತ್ತದೆ ಸ್ಟಡಿ.. ಹಾಗಾದರೆ ಅಧ್ಯಯನ ಏನು ಹೇಳುತ್ತದೆ.. ನೋಡಿಕೊಂಡು ಬನ್ನಿ...!

ಮದುವೆ, ಎಂಗೇಜ್ ಮೆಂಟ್, ಆ ಫೋಟೋ ಶೂಟ್-ಈ ಫೋಟೋ ಶೂಟ್ ಎಂದು ಮದುವೆಗೆ ಮುನ್ನವೇ ಸಾಕಷ್ಟು ಹಣ ಖಾಲಿ ಮಾಡಿಕೊಂಡು ಮದುವೆಯಾಗುವ ಜೋಡಿಗಳ ವಿವಾಹ ಸಂಬಂಧ ಜಾಸ್ತಿ ದಿನ ಬಾಳಿಕೆ ಬರುವುದಿಲ್ಲ.

ಹೌದು... ಇಂಥದ್ದೊಂದು ಅಂಶವನ್ನು ಅಧ್ಯಯನವೊಂದು ಬಿಚ್ಚಿಟ್ಟಿದೆ. ಎಕಾನಿಮಿಕ್ಸ್ ಪ್ರೊಫೆಸರ್ ಆಂಡ್ರ್ಯೂ ಫ್ರಾನ್ಸಿಸ್ 3000ಕ್ಕಿಂತಲೂ ಅಧಿಕ ಕಪಲ್ ಗಳನ್ನು ತಮ್ಮ ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಅನೇಕ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರ ಪಡೆದುಕೊಂಡಿದ್ದಾರೆ.

ಮದುವೆಗೆ ಹೆಚ್ಚು ಖರ್ಚು ಮಾಡಲು ಪ್ರೇರರೇಪಿಸುವುದರ ಹಿಂದೆ ವಿವಿಧ ಮ್ಯಾಗಜೀನ್ ಮತ್ತು ಡೈಮಂಡ್ ಕಂಪನಿಗಳ ಕೈವಾಡವೂ ಇದೆ ಎಂದು ಹೇಳಲಾಗುತ್ತದೆ. ಮದುವೆ ಮತ್ತು ಇತರೆ ವಿಚಾರಕ್ಕೆ ಅತಿ ಹೆಚ್ಚಿನ ಹಣ ವ್ಯಯ ಮಾಡುವ ದಂಪತಿ ನಂತರ ವಿವಿಧ ಕಷ್ಟ ಎದುರಿಸುವ ಸಂದರ್ಭವನ್ನು ತಂದುಕೊಡುತ್ತಾರೆ. ಕೆಲ ಸಾಲದ ಮೊತ್ತವೂ ಸುತ್ತಿಕೊಂಡು ಸಾಂಸಾರಿಕ ಜೀವನದ ಮೇಲೆ ಅಡ್ಡ ಪರಿಣಾಮ ತಂದಿಡಬಹುದು.

ಹಾಗಾಗಿ ಮದುವೆಗೆ ಮುನ್ನ ವ್ಯರ್ಥ ಖರ್ಚುಗಳನ್ನು ಕಡಿಮೆ ಮಾಡಿ. ಉಳಿಸಿದ್ದ ಹಣದಲ್ಲಿಯೇ ಸುಂದರ ಮಧುಚಂದ್ರದ ಕನಸು ಸಾಕಾರ ಮಾಡಿಕೊಳ್ಳಿ. ಮದುವೆಯಾದ ನಂತರ ಭದ್ರ ಜೀವನ ಕಟ್ಟಿಕೊಳ್ಳಿ. 

click me!