ನಿಮ್ಮನ್ನು ನಿಧಾನವಾಗಿ ಕೊಲ್ಲುತ್ತೆ ಈ ಬಿಳಿ ಆಹಾರ...

First Published Jul 9, 2018, 5:01 PM IST
Highlights

ಹೆಚ್ಚಾಗಿ ವೈದ್ಯರು ರಿಫೈನ್ಡ್ ಆಹಾರಗಳನ್ನು ತಿನ್ನುವ ಸಲಹೆ ಯಾರಿಗೂ ನೀಡೋದಿಲ್ಲ. ಯಾಕೆಂದರೆ ಇದರಲ್ಲಿ ಪೋಷಕ ತತ್ವಗಳು ಬಹಳ ಕಡಿಮೆ ಪ್ರಮಾಣದಲ್ಲಿರುತ್ತೆ. ಇದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ. ಮುಖ್ಯವಾಗಿ ಈ ನಾಲ್ಕು ಬಿಳಿ ಆಹಾರಗಳನ್ನು ನೀವು ನಿಮ್ಮ ನಿತ್ಯ ಆಹಾರದಿಂದ ದೂರ ಮಾಡಿದರೆ ಉತ್ತಮ. ಇಲ್ಲವಾದರೆ ಇವು ನಿಧಾನವಾಗಿ ನಿಮ್ಮನ್ನು ಕೊಲ್ಲುತ್ತೆ. ಅವು ಯಾವುವು ನೋಡೋಣ.. 

ಸಕ್ಕರೆ:

ಇದರಿಂದ ಬೊಜ್ಜು, ಡಯಾಬಿಟೀಸ್ ಮತ್ತು ಲಿವರ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಕ್ಯಾಲರಿ ಹೆಚ್ಚಿರುವುದರಿಂದ ಪಚನ ಕ್ರಿಯೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹೆಚ್ಚು ಸಕ್ಕರೆ ಅಂಶ ಸೇವಿಸುವವರು ಸರಿಯಾಗಿ ವ್ಯಾಯಾಮ ಮಾಡದಿದ್ದರೆ, ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಕ್ಯಾನ್ಸರ್ ಕಣಗಳು ವೃದ್ಧಿಯಾಗಲೂ ಈ ಸಕ್ಕರೆ ಸಹಕರಿಸುತ್ತದೆ. ಆದ್ದರಿಂದ, ಕಡಿಮೆ ಸಕ್ಕರೆ ಕಡಿಮೆ ತಿಂದಷ್ಟೂ ಆರೋಗ್ಯಕ್ಕೆ ಒಳ್ಳೆಯದು.

ರಿಫೈನ್ಡ್ ಅಕ್ಕಿ 

ಅಕ್ಕಿಯನ್ನು ರಿಫೈನ್ಡ್  ಮಾಡಿ ಮಾರಲಾಗುತ್ತದೆ. ಇದರಿಂದ ಅದರ ಹೊರ ಭಾಗದಲ್ಲಿರುವ ಪೌಷ್ಟಿಕಾಂಶ ನಷ್ಟವಾಗುತ್ತದೆ. ಇದರ ನಂತರ ಅಕ್ಕಿಯಲ್ಲಿ ಉಳಿಯುವುದು ಕೇವಲ ಸ್ಟಾರ್ಚ್ ಮಾತ್ರ. ಇದನ್ನು ಹೆಚ್ಚು ಸೇವಿಸಿದರೆ ಬ್ಲಡ್ ಶುಗರ್ ಕಾಣಿಸಿಕೊಳ್ಳುತ್ತದೆ. ಜೊತೆಗೆ ರಕ್ತದಲ್ಲಿ ಗ್ಲುಕೋಸ್ ಹೆಚ್ಚುತ್ತದೆ. 

ರಿಫೈನ್ಡ್ ಉಪ್ಪು 

ನೀರಿನಂಶ ದೇಹದಲ್ಲಿ ಉಳಿಸಲು ಉಪ್ಪು ಸಹಕಾರಿ. ಹೆಚ್ಚು ಉಪ್ಪು ಸೇವಿಸಿದರೆ ನೀರು ಹೆಚ್ಚಾಗುತ್ತದೆ. ಇಂಥ ಸಮಸ್ಯೆ ನಮ್ಮ ದೇಶದಲ್ಲಿ ಮೂವರಲ್ಲಿ ಒಬ್ಬ ವ್ಯಕ್ತಿಗೆ ಕಾಡುತ್ತದೆ. ರಿಫೈನ್ಡ್  ಉಪ್ಪಿನಲ್ಲಿ ಅಯೋಡಿನ್ ಅಂಶ ಇರುವುದಿಲ್ಲ. ನಿಮ್ಮ ದೇಹಕ್ಕೆ ಅಯೋಡಿನ್ ಅಂಶ ಸಿಗದಿದ್ದರೆ, ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ. 

ಮೈದಾ 

ಮೈದಾ ಮಾಡುವ ಸಮಯದಲ್ಲಿ ಗೋಧಿಯಿಂದ ಎಂಡೋಸ್ಪರ್ಮ್ ನಾಶವಾಗುತ್ತದೆ. ಜತೆಗೆ ಫೈಬರ್ ಕೂಡ ನಷ್ಟವಾಗುತ್ತದೆ. ಇದರಿಂದ ಜೀರ್ಣ ಕ್ರಿಯೆಗೆ ತೊಡಕನ್ನುಂಟುಮಾಡುತ್ತದೆ. ಆದ್ದರಿಂದ ಮೈದಾ ಮಿಕ್ಸ್ ಈರೋ ಗೋಧಿಯನ್ನು ಅವೈಡ್ ಮಾಡಿದರೊಳಿತು.

click me!