
೧ ಥೈರಾಯ್ಡ್ ಚೆಕ್ ಮಾಡಿಸಿಕೊಳ್ಳಿ
ಥೈರಾಯ್ಡ್ ಗ್ರಂಥಿಗಳು ತಮ್ಮ ಕೆಲಸವನ್ನು ನಿಧಾನಗೊಳಿಸುತ್ತ ಹೋಗುತ್ತವೆ. ಆಗ ಹೈಪೋಥೈರಾಯ್ಡಿಸಮ್ ಎಂಬ ಸಮಸ್ಯೆ ಉಂಟಾಗುತ್ತದೆ. ಇದರಿಂದ ನಮ್ಮ ಮೆಟಬಾಲಿಸಮ್ ಅರ್ಥಾತ್ ಚಯಾಪಚಯ ಕ್ರಿಯೆಗಳು ನಿಧಾನಗೊಂಡು ದೇಹದ ತೂಕ ಏರುತ್ತ ಹೋಗುತ್ತದೆ.
೨ ಹೆಣ್ಮಕ್ಕಳಿಗೆ ಪಿಸಿಒಎಸ್ ಸಮಸ್ಯೆ ಬರಬಹುದು
ಇದೊಂದು ಹಾರ್ಮೋನಲ್ ಸಮಸ್ಯೆ. ಇದರಿಂದ ಆ್ಯಂಡ್ರೋಜಿನ್ ಲೆವೆಲ್ ಅಧಿಕವಾಗಿ ಪೀರಿಯೆಡ್ಸ್ ನಲ್ಲಿ ವ್ಯತ್ಯಯವಾಗುತ್ತದೆ. ಇದರಿಂದಲೂ ಮೆಟಬಾಲಿಸಮ್ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಹೀಗಾದಾಗ ಹೊಟ್ಟೆಯ ಭಾಗದಲ್ಲಿ ಬೊಜ್ಜು ಅಧಿಕವಾಗುತ್ತದೆ. ದೇಹದ ಕೆಲವೊಂದು ಭಾಗಗಳಲ್ಲಿ ಅನವಶ್ಯಕ ಕೂದಲ ಬೆಳವಣಿಗೆಗಳಾಗಬಹುದು.
೩ ಕೆಲವೊಂದು ಔಷಧಗಳ ಸೇವನೆಯಿಂದ ಬಂದ ಬೊಜ್ಜೂ ಬೇಗ ಕರಗೋದಿಲ್ಲ
ಸ್ಟಿರಾಯ್ಡ್, ಡಿಪ್ರೆಶನ್, ಉದ್ವೇಗ ಸಮಸ್ಯೆಗೆ ನೀಡುವ ಆ್ಯಂಟಿ ಡಿಪ್ರೆಸೆಂಟ್ಸ್‌ಗಳ ಸೇವನೆಯಿಂದ ಬೊಜ್ಜು ಉಂಟಾಗುತ್ತವೆ. ಹೀಗೆ ಬಂದ ಬೊಜ್ಜನ್ನು ಕರಗಿಸುವುದೂ ಸುಲಭವಲ್ಲ.
೪ ಗರ್ಭನಿರೋಧಕಗಳ ಸೇವನೆ
ಬಾಯಿ ಮೂಲಕ ತೆಗೆದುಕೊಳ್ಳುವ ಗರ್ಭ ನಿರೋಧಕ ಪಿಲ್‌ಗಳು ಕರಗದ ಬೊಜ್ಜಿಗೆ ಕಾರಣವಾಗಿರಬಹುದು. ಪಿಲ್ ಸೇವನೆಯಿಂದ ಕೆಲವೊಮ್ಮೆ ಈಸ್ಟ್ರೋಜಿನ್ ಲೆವೆಲ್‌ನಲ್ಲಿ ಏರುಪೇರಾಗಿ ಬೊಜ್ಜು ಉಂಟಾಗಬಹುದು.
೫ ನಿದ್ರಾಹೀನತೆಯಿಂದ ಬೊಜ್ಜು ಅಧಿಕವಾಗಬಹುದು.
ನೀವು ಎಷ್ಟೇ ವ್ಯಾಯಮ, ಡಯೆಟ್ ಮಾಡಿದ್ರೂ ನಿದ್ದೆ ಚೆನ್ನಾಗಿ ಮಾಡದಿದ್ರೆ ಬೊಜ್ಜು ಕರಗಲ್ಲ. ನಿದ್ರಾ ಅವಧಿಯಲ್ಲಿ ಲೆಪ್ಟಿನ್ ಮತ್ತು ಗ್ರೀಲಿನ್ ಹಾರ್ಮೋನ್‌ಗಳು ಕಾರ್ಯ ನಿರ್ವಹಿಸುತ್ತವೆ. ಲೆಪ್ಟಿನ್ ಮೆದುಳಿನಲ್ಲಿ ಸ್ರವಿಸುವ ಹಾರ್ಮೋನ್. ಇದು ನಿದ್ರೆಯ ಮೂಲಕ ತೃಪ್ತಿ, ಫ್ರೆಶ್‌ನೆಸ್ ಕೊಡುತ್ತದೆ. ಗ್ರೀಲಿನ್ ಹಾರ್ಮೋನ್ ಹೊಟ್ಟೆ ಯೊಳಗೆ ಸ್ರವಿಸುವಂಥಾದ್ದು. ತಿನ್ನಬೇಕೆನ್ನುವ ಬಯಕೆಯನ್ನಿದು ವ್ಯಕ್ತಪಡಿಸುತ್ತದೆ. ನಿದ್ದೆ ಕಡಿಮೆಯಾದಾಗ ಗ್ರೀಲಿನ್ ಸ್ರಾವ ಹೆಚ್ಚಿ ಅಧಿಕ ಹಸಿವಿನ ಅನುಭವವಾಗುತ್ತದೆ. ಆ ಸಂದರ್ಭ ತಿಂದದ್ದು ಸರಿಯಾಗಿ ಜೀರ್ಣವಾಗದೇ ಬೊಜ್ಜಿನ ಸಮಸ್ಯೆ ಹೆಚ್ಚುತ್ತದೆ.ವ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.