Indian Constitution: ದಂಪತಿ ಎಂದಾಕ್ಷಣ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ವರ್ತನೆಗಿಲ್ಲ ಅವಕಾಶ!

By Suvarna NewsFirst Published Aug 25, 2022, 3:18 PM IST
Highlights

ಭಾರತದ ನಾಗರಿಕರಾಗಿದ್ದರೂ ನಮಗೆ ಅನೇಕ ವಿಷ್ಯಗಳ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಅದ್ರಲ್ಲಿ ಹಕ್ಕುಗಳು ಕೂಡ ಸೇರಿವೆ. ಕೆಲವೊಮ್ಮೆ ತಪ್ಪು ಮಾಡದೆ ಪೊಲೀಸ್ ಕೈಗೆ ಸಿಕ್ಕಿಬದ್ದಿರ್ತೇವೆ. ನಮ್ಮದು ತಪ್ಪಿಲ್ಲ ಎಂದು ವಾದ ಮಾಡುವಷ್ಟು ಕಾನೂನು ನಮಗೆ ತಿಳಿದಿರೋದಿಲ್ಲ. 
 

ಭಾರತದ ನಾಗರಿಕರಾದ್ಮೇಲೆ ಇಲ್ಲಿನ ಕಾನೂನು, ಕರ್ತವ್ಯಗಳ ಬಗ್ಗೆ ಸರಿಯಾಗಿ ತಿಳಿದಿರಬೇಕು. ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಅವನದೇ ಆದ  ಕೆಲವೊಂದು ಕರ್ತವ್ಯ ಹಾಗೂ ಹಕ್ಕುಗಳಿವೆ. ಬಹುತೇಕ ದಂಪತಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿದಿಲ್ಲ. ಯಾವುದು ಸರಿ ಹಾಗೂ ಯಾವುದು ತಪ್ಪು ಎಂಬ ಗೊಂದಲ  ಅವರನ್ನು ಕಾಡುತ್ತದೆ. ಕೆಲ ಪ್ರದೇಶದಲ್ಲಿ ದಂಪತಿ ಕುಳಿತಿದ್ರೆ ಪೊಲೀಸರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಆ  ಸಂದರ್ಭದಲ್ಲಿ ದಂಪತಿ ಅಸಮಾಧಾನಗೊಳ್ಳುತ್ತಾರೆ ಮತ್ತು ಮುಂದೇನು ಮಾಡ್ಬೇಕು ಎಂಬ ಗೊಂದಲ ಅವರಿಗಿರುತ್ತದೆ. ತಮ್ಮ ಹಕ್ಕುಗಳ ಬಗ್ಗೆ ದಂಪತಿ ತಿಳಿದ್ರೆ ಸಮಸ್ಯೆ ಎದುರಿಸಬೇಕಾಗುವುದಿಲ್ಲ. ಇಂದು ನಾವು ದಂಪತಿಗಿರುವ ಕಾನೂನು ಹಕ್ಕುಗಳ ಬಗ್ಗೆ ಕೆಲವೊಂದು ಮಾಹಿತಿ ನೀಡ್ತೇವೆ. 

ದಂಪತಿ (Couple) ಯ ಕಾನೂನುಬದ್ಧ (Legal) ಹಕ್ಕು : ದಂಪತಿಗೆ ಸಿಗುವ ಕಾನೂನು ಹಕ್ಕು ದಂಪತಿ ಎಲ್ಲಿ ಕುಳಿತಿದ್ದಾರೆ ಮತ್ತು ಹೇಗೆ ಕುಳಿತಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ರೆಸ್ಟೋರೆಂಟ್ (Restaurant) ನಲ್ಲಿ ಒಂದು ಹುಡುಗ – ಹುಡುಗಿ ಕುಳಿತಿದ್ದರೆ ಅವರ ಮಧ್ಯೆ ಯಾವ ಸಂಬಂಧವಿದೆ ಎಂಬುದನ್ನು ಹೇಳಲು ಸಾಧ್ಯವಾಗುವುದಿಲ್ಲ. ಅದೇ ಪಾರ್ಕ್ (Park) ನಲ್ಲಿ ಒಂದ ಛತ್ರಿ ಕೆಳಗೆ ಜೋಡಿ ಕುಳಿತಿದ್ದರೆ ಅವರ ಮಧ್ಯೆ ಏನಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ಇದೇ ರೀತಿ, ಹಳ್ಳಿ ಪ್ರದೇಶದಲ್ಲಿ ಹುಡುಗ – ಹುಡುಗಿ ಕೈ ಹಿಡಿದು ನಡೆಯುವುದು ಸೂಕ್ತವಲ್ಲ. ಪಟ್ಟಣ ಪ್ರದೇಶದಲ್ಲಿ ಕೂಡ ಇದನ್ನು ಒಪ್ಪುವುದಿಲ್ಲ. ಅಲ್ಲಿನ ಜನರು ಇದನ್ನು ತಪ್ಪೆಂದು ಭಾವಿಸ್ತಾರೆ. ಅದೇ ಮೆಟ್ರೋ ನಗರಗಳಲ್ಲಿ ಜೋಡಿ ಕೈ ಹಿಡಿದು ಹೋಗ್ತಿದ್ದರೆ ಅದನ್ನು ಪ್ರಶ್ನೆ ಮಾಡುವವರು ಯಾರೂ ಇರುವುದಿಲ್ಲ.    

ಗೋವಾದ ಬಗ್ಗೆ ಮಾತನಾಡುವುದಾದ್ರೆ ದಂಪತಿ ಗೋವಾ ಬೀಚ್‌ಗೆ ಭೇಟಿ ನೀಡುತ್ತಿದ್ದರೆ, ಅವರು ಹ್ಯಾಂಗ್ ಔಟ್ ಮಾಡಬಹುದು, ತಬ್ಬಿಕೊಳ್ಳಬಹುದು ಮತ್ತು ಕಿಸ್ ಕೂಡ ಮಾಡಬಹುದು. ದಂಪತಿಗೆ ಸಿಗುವ ಹಕ್ಕು ಸ್ಥಳವನ್ನು ಅವಲಂಬಿಸಿರುತ್ತದೆ ಎಂದಿದ್ದು ಇದೇ ಕಾರಣಕ್ಕೆ.  

ಕೆಲಸದಿಂದ ಬ್ರೇಕ್ ಕೇಳುತ್ತೆ ಈ ಸಂಕೇತಗಳು!

ಸಾರ್ವಜನಿಕ ಸ್ಥಳದಲ್ಲಿ ದಂಪತಿ : ಸಾರ್ವಜನಿಕ ಸ್ಥಳದಲ್ಲಿ ದಂಪತಿ  ಕುಳಿತುಕೊಂಡಿದ್ದರೆ ಅಥವಾ ಮಾತನಾಡುತ್ತಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆನ್ನುವ ಬಗ್ಗೆ ಕಾನೂನಿನಲ್ಲಿ ಅವಕಾಶವಿಲ್ಲ. ಪೊಲೀಸರು ಕ್ರಮ ಕೈಗೊಳ್ಳಲು ಸಿಆರ್‌ಪಿಸಿ ಮತ್ತು ಐಪಿಸಿ ಅಗತ್ಯವಿದೆ. ಅನುಮಾನದ ಮೇಲೆ ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ. ಭಾರತದ ಸಂವಿಧಾನವು ದೇಶದ ಎಲ್ಲಾ ನಾಗರಿಕರಿಗೆ ಬದುಕುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಲೈಫ್ ಆಂಡ್ ಲಿಬರ್ಟಿ ಬಗ್ಗೆ ಆರ್ಟಿಕಲ್ 21ರಲ್ಲಿ ಈ ವಿಷ್ಯವನ್ನು ಹೇಳಲಾಗಿದೆ.

ದೇಶದ ಎಲ್ಲಾ ಪ್ರಜೆಗಳು ತಮ್ಮ ಇಚ್ಛೆಯಂತೆ ಜೀವನ (Life) ನಡೆಸಬಹುದು  ಹುಡುಗ ಹುಡುಗಿ ಇಚ್ಛಿಸಿದರೆ ಮದುವೆಯಾಗಬಹುದು. ಇಬ್ಬರೂ ಒಟ್ಟಿಗೆ ಇರಬಹುದು. ಅವರನ್ನು  ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ. ಯಾವುದೇ ವ್ಯಕ್ತಿಗೆ ಕಿರುಕುಳ ನೀಡುವ ಹಕ್ಕು ಪೊಲೀಸರಿಗೆ ಇಲ್ಲ.  ಆದರೆ ತಪ್ಪು ಮಾಡಿದಾಗ ಮಾತ್ರ ಪೊಲೀಸರು ಶಿಕ್ಷೆ ನೀಡ್ತಾರೆ. ಹಾಗೆಯೇ, ಅವರಿಂದ ನಮಗೆ ತೊಂದರೆಯಾಗ್ತಿದೆ ಎಂದು ಬೇರೊಬ್ಬ ವ್ಯಕ್ತಿ ದೂರು ನೀಡಿದಾಗ ಪೊಲೀಸರು ಕ್ರಮಕೈಗೊಳ್ಳಬಹುದು.

Happy Tips: ಸದಾ ಸಂತೋಷವಾಗಿರ್ಬೇಕೆಂದ್ರೆ ಸಾಮಾಜಿಕ ಜಾಲತಾಣ ಬಳಸ್ಬೇಡಿ

ಸಾರ್ವಜನಿಕ ಸ್ಥಳದಲ್ಲಿ (Public Place) ಯಾವುದೇ ರೀತಿಯ ಅಶ್ಲೀಲ ಕೃತ್ಯವನ್ನು (Obscene Act) ಕಾನೂನಿನಲ್ಲಿ ತಪ್ಪು ಎಂದು ಹೇಳಲಾಗುತ್ತದೆ. ನಿಮಗೆಲ್ಲ ಗೊತ್ತಿರುವ ಹಾಗೆ ಈಗ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ಕೂಡ ಅಪರಾಧ. ಇದಕ್ಕೆ ಕಾನೂನಿನ ಮೂಲಕ ಶಿಕ್ಷೆ ವಿಧಿಸಬಹುದಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಬೇರೆಯವರು ಮಾಡ್ತಿದ್ದಾರೆಂದು ನೀವೂ ಈ ಕೆಲಸ ಮಾಡಿದ್ರೆ ನಿಮಗೆ ಶಿಕ್ಷೆಯಾಗುತ್ತದೆ. ಐಪಿಸಿ ಸೆಕ್ಷನ್ 294ರ ಪ್ರಕಾರ ಪೊಲೀಸರು ಕ್ರಮ ಜರುಗಿಸುತ್ತಾರೆ. 

click me!