ಉಪ್ಪಿನಕಾಯಿ ಇಲ್ಲದೆ ಊಟ ಮಾಡೋದೇ ಇಲ್ಲ ಎಂದಾದರೆ ಇದನ್ನು ತಿಳಿದುಕೊಳ್ಳಲೇಬೇಕು. ರುಚಿಯಾಗಿದೆ ಎಂದು ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸಿದರೆ ಅನಾರೋಗ್ಯ ಗ್ಯಾರಂಟಿ.
ಉಪ್ಪಿನಕಾಯಿಯಲ್ಲಿ ಎಣ್ಣೆ ಅಂಶ ಹೆಚ್ಚಿರುತ್ತದೆ. ಇದರಲ್ಲಿ ಉಪಯೋಗಿಸುವ ಮಸಾಲೆಯಿಂದ ಕೊಲೆಸ್ಟ್ರಾಲ್ ಮತ್ತಿತರೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದರ ಬಳಕೆ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಆ್ಯಸಿಡಿಟಿ, ಗ್ಯಾಸ್, ಹುಳಿ ತೇಗಿನಂಥ ಸಮಸ್ಯೆಯನ್ನು ತಂದೊಡ್ಡುತ್ತದೆ. ಉಪ್ಪಿನ ಪ್ರಮಾಣ ಹೆಚ್ಚಾಗಿರುವುದರಿಂದ ಹೆಚ್ಚಿನ ಸೋಡಿಯಂ ದೇಹಕ್ಕೆ ಸೇರುತ್ತದೆ. ಅಲ್ಲದೆ ಹೈ ಬ್ಲಡ್ ಪ್ರೆಷರ್‌ಗೆ ಕಾರಣವಾಗಬಲ್ಲದು. ಇದರಿಂದ ಇರೋ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಉಪ್ಪಿನಕಾಯಿಯಲ್ಲಿ ವಿನೆಗರ್ ಸಹ ಬಳಸುತ್ತಾರೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಅಲ್ಸರ್ ಉಂಟಾಗುತ್ತದೆ. ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚು ಹೆಚ್ಚು ಉಪ್ಪಿನಕಾಯಿ ತಿನ್ನುತ್ತಿದ್ದರೆ, ಆ್ಯಸಿಡಿಟಿ ಗ್ಯಾರಂಟಿ.
Subscribe to get breaking news alertsSubscribe ಆರೋಗ್ಯ , ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್ , ಸಂಬಂಧ, ಫ್ಯಾಷನ್ , ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.