
ಟಿವಿ ನೋಡ್ಕೊಂಡು ಅಥವಾ ಫೋನಿನಲ್ಲಿ ಮಾತಾಡ್ಕೊಂಡು ಊಟ ಮಾಡುತ್ತೇವೆ. ಊಟವಾದ ತಕ್ಷಣವೇ ಹಾಸಿಗೆಗೆ ಹೋಗುತ್ತೇವೆ. ಅದೂ ಇಲ್ಲವಾದರೆ ಫೋನ್ ನೋಡ್ಕೊಂಡು ಟೈಂ ಪಾಸ್ ಮಾಡುವುದು ಕಾಮನ್. ಇವೆಲ್ಲವೂ ದಪ್ಪ ಆಗೋಕೆ ಕಾರಣವಾಗುವಂಥ ಅಂಶಗಳು.
'ಬೆಳಗೆ ರಾಜನಂತೆ ತಿಂಡಿ ತಿನ್ನಬೇಕು, ಮಧ್ಯಾಹ್ನ ಸಾಮಾನ್ಯನಂತೆ ಉಣ್ಣಬೇಕು, ರಾತ್ರಿ ಭಿಕ್ಷುಕನಂತೆ ಊಟ ಮಾಡಬೇಕು,' ಎಂಬ ಗಾದೆ ಮಾತಿದೆ. ಆದರೆ ಕೈ ಬೆರಳ ತುದಿಯಲ್ಲೇ ಕೆಲಸ ಮಾಡುವ ಮಂದಿ ರಾತ್ರಿ ರಾಜನಂತೆಯೇ ಊಟ ಮಾಡಿ ಮಲಗುತ್ತಾರೆ. ಇದೇ ನೋಡಿ ಈಗಿನವರ ಸೊಂಬೇರಿತನ ಹಾಗೂ ತೂಕ ಹೆಚ್ಚಲು ಮುಖ್ಯ ಕಾರಣ.
ಸಂಶೋಧನೆಯೊಂದರ ಪ್ರಕಾರ ಊಟದ ನಂತರ 15 ನಿಮಿಷ ನಡೆದಾಡಬೇಕು. ಇದರಿಂದ ಮಧುಮೇಹ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ದೂರವಾಗುತ್ತವೆ. ಆಹಾರ ಸೇವಿಸುವ ಸಮಯದಲ್ಲಿ ರಕ್ತ ಸಂಚಲನದಲ್ಲಿ ಕೊಂಚ ಬದಲಾವಣೆಯಾಗುತ್ತದೆ. ಅದನ್ನೂ ಕಂಟ್ರೂಲ್‌ಗೆ ತರುತ್ತದೆ.
ಸ್ಲಿಮ್ ಆಗೋದಾದರೆ ಈರುಳ್ಳಿಯಲ್ಲಿದೆ ಮದ್ದು?
ರಾತ್ರಿ ಊಟದ ನಂತರ 15 ನಿಮಿಷ ವಾಕ್, ಬೆಳಗ್ಗೆ 45 ನಿಮಿಷದ ವಾಕ್‌ಗೆ ಸಮ. ಇದೊಂದು ತೂಕ ಕಡಿಮೆ ಮಾಡುವ ಮಾರ್ಗವೂ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಉತ್ತಮ ಪ್ರಕ್ರಿಯೆಯೂ ಹೌದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.