ಖಾರವಾಗಿರುವ ಹಸಿಮೆಣಸು ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ಇವು ಆರೋಗ್ಯಕ್ಕೂ ಒಳ್ಳೆಯದು. ಹಸಿಮೆಣಸಿನ ಬಗ್ಗೆ ನೀವು ತಿಳಿದುಕೊಂಡಿರದ ಸತ್ಯಗಳಿವು...
ಸಂಶೋಧನೆಯೊಂದರ ಪ್ರಕಾರ ಹಸಿ ಮೆಣಸು ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದರಿಂದ ರಕ್ತ ಸಮಸ್ಯೆಯೂ ನಿವಾರಣೆಯಾಗುತ್ತದೆ. ಪಚನಕ್ರಿಯೆಯನ್ನು ಸ್ಟ್ರಾಂಗ್ ಮಾಡುತ್ತದೆ. ಹಸಿಮೆಣಸಿನಲ್ಲಿರುವ ಫೈಬರ್ ಅಂಶ ಸೇವಿಸಿದ ಆಹಾರ ಬೇಗ ಜೀರ್ಣವಾಗುವಂತೆ ಮಾಡುತ್ತದೆ. ದೇಹದಲ್ಲಿ ಕಾಣಿಸುವ ಅರ್ಥರೈಟಿಸ್‌ನಂಥ ನೋವು ನಿವಾರಿಸುವಲ್ಲಿಯೂ ಹಸಿ ಮೆಣಸು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು.
ಇದರಲ್ಲಿರುವ ವಿಟಮಿನ್ ಸಿ ಗಾಯವನ್ನು ಮಾಸಲು ಸಹಕರಿಸುತ್ತದೆ. ಜೊತೆಗೆ ವಿಟಾಮಿನ್ ಸಿ ಮೂಳೆ, ಹಲ್ಲು ಮತ್ತು ಕಣ್ಣಿನ ಆರೋಗ್ಯಕ್ಕೂ ಅಗತ್ಯ. ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಮೆಣಸು ಸೇವಿಸಿದರೆ ಕಣ್ಣು, ಮೂಗು ನಿರಾಳವಾಗಿ ಉಸಿರಾಟವನ್ನು ಸುಗಮಗೊಳಿಸುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡಲು ಹಾಗೂ ಶರೀರವನ್ನು ಸುರಕ್ಷಿತವಾಗಿಡಲು ಇದು ಸಹಕಾರಿ. ಇದು ದೇಹವನ್ನು ಶುದ್ಧಗೊಳಿಸಿ, ರೆಡಿಕಲ್ ನಿವಾರಿಸಿ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ.
Subscribe to get breaking news alertsSubscribe ಆರೋಗ್ಯ , ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್ , ಸಂಬಂಧ, ಫ್ಯಾಷನ್ , ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.