
18 ವರ್ಷದ ಚಾರ್ಲಿ ಕ್ಯಾಂಡೆನ್ ಸೈಕಲ್‌ನಲ್ಲಿ 9 ತಿಂಗಳಲ್ಲಿ 29 ಸಾವಿರ ಕಿ.ಮೀ. ಪ್ರಪಂಚ ಪರ್ಯಟನೆ ಮಾಡಿ, ಸುಮಾರು 20 ದೇಶಗಳನ್ನ ಸುತ್ತಿದ್ದಾರೆ. ಇಂಥ ದಾಖಲೆ ಮಾಡಿದ ಅತ್ಯಂತ ಕಿರಿಯ ಪರ್ಯಟಕ ಇವನು. ಇದಕ್ಕೂ ಮೊದಲು ಲಂಡನ್‌ನ 19 ವರ್ಷದ ಟಾಮ್ ಡೇವಿಸ್ ಈ ದಾಖಲೆ ಮಾಡಿದ್ದರು.
ಲಂಡನ್‌ನ ಚಾರ್ಲಿ 6 ಜುಲೈ 2018ರಲ್ಲಿ ತನ್ನ ಪ್ರವಾಸವನ್ನು ಆರಂಭಿಸಿದರು. ಏಷ್ಯಾ, ಯುರೋಪ್, ಆಸ್ಟ್ರೇಲಿಯಾ ಮತ್ತು ಅಮೆರಿಕಾದ ಸುಮಾರು 20 ದೇಶಗಳನ್ನು ಆಗಲೇ ಸುತ್ತಿದ್ದಾರೆ.
ಆರಂಭದಲ್ಲಿ ಚಾರ್ಲಿ ಕೇವಲ ಯುರೋಪಿನಲ್ಲಿ ಸಾವಿರ ಕಿ.ಮೀ. ಯಾತ್ರೆ ಮಾಡಿದ್ದರು. ಕೊನೆಗೆ 29 ಸಾವಿರ ಕಿ.ಮೀ ಟೂರ್ ಮಾಡಿ ಮುಗಿಸಿದ್ದಾರೆ. ಅಂದರೆ 26 ಬಾರಿ ಮೌಂಟ್ ಎವರೆಸ್ಟ್ ಹತ್ತಿ ಇಳಿದಷ್ಟಾಗುತ್ತದೆ.
ಆಸ್ಟ್ರೇಲಿಯಾದಲ್ಲಿ ಅವರ ಸೈಕಲ್ ಮತ್ತು ಸಾಮಾನು ಕಳ್ಳತನವಾಗಿ ಚಾರ್ಲಿ ಅಕ್ಟೋಬರ್ 2018ರಲ್ಲಿ ಸುದ್ದಿಯಾಗಿದ್ದರು. ಸೈಕಲಿನಲ್ಲಿಟ್ಟಿದ್ದ ಬ್ಯಾಗಿನಲ್ಲಿ ಪಾಸ್‌ಪೋರ್ಟ್ ಸೇರಿ ಹಲವು ಸಾಮಗ್ರಿಗಳು ಕಳ್ಳತನವಾಗಿದ್ದವು. ಅವು ಸುಮಾರು ಮೂರೂವರೆ ಲಕ್ಷಕ್ಕಿಂತ ಹೆಚ್ಚು ಬೆಲೆಯುಳ್ಳದ್ದಾಗಿತ್ತು.
ಸೈಕಲ್ ಮತ್ತು ಬ್ಯಾಗ್ ಕಳೆದು ಹೋಗಿರುವುದು ಸ್ಥಳೀಯರಿಗೆ ತಿಳಿದಾಗ, ಅವರೇ ಹೊಸ ಸೈಕಲ್, ಬಟ್ಟೆ ಮತ್ತು ಇತರೆ ಅಗತ್ಯ ವಸ್ತುಗಳನ್ನು ನೀಡಿದರಂತೆ. ಜೊತೆಗೆ ಜನರೆಲ್ಲಾ ಸೇರಿ ಹಣ ಸಂಗ್ರಹಿಸಿ ತಮಗೆ ನೀಡಿದ್ದಾಗಿ ನೆನಪಿಸಿಕೊಳ್ಳುತ್ತಾರೆ, ಚಾರ್ಲಿ. ಆ ಹಣದಿಂದಲೇ ಮತ್ತೆ ಯಾತ್ರೆ ಮುಂದುವರಿಸಿದರಂತೆ. ಇದೀಗ 20 ದೇಶಗಳನ್ನು ಸುತ್ತಿ ಮುಗಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.