
ನೀವು ಕೆಲವು ಕಾಮುಕರು ಹೆಂಗೆಳೆಯರ ಒಳಉಡುಪುಗಳನ್ನು ಕದಿಯುವುದನ್ನು ಕೇಳಿರಬಹುದು. ಮಹಿಳಾ ಹಾಸ್ಟೆಲ್‌ಗಳಲ್ಲಿ ಒಣ ಹಾಕಿದ ಬ್ರಾಗಳು ಚಡ್ಡಿಗಳು ಇದ್ದಕ್ಕಿದ್ದಂತೆ ಮಾಯ ಆಗುವುದು ನಂತರ ಸಿಸಿಟಿವಿ ಗಮನಿಸಿದಾಗ ಯಾರೋ ಆಗಂತುಕ ಆ ಒಳಉಡುಪುಗಳನ್ನು ಕದ್ದು ಸಾಗಿಸುವುದು ಕಂಡು ಬಂದಂತಹ ಘಟನೆಗಳನ್ನು ನೀವು ಕೇಳಿರುವಿರಿ ಆದರೆ ಇಲ್ಲೊಂದು ಕಡೆ ಯಾವುದೋ ಕಾಮುಕರಲ್ಲ, ಸಾಕು ಬೆಕ್ಕು. ಹೌದು ಅಚ್ಚರಿ ಎನಿಸಿದರು ನಿಜ. ಬೆಕ್ಕೊಂದು ಹೀಗೆ ತಾನು ವಾಸ ಮಾಡುತ್ತಿದ್ದ ಕಟ್ಟಡದಲ್ಲಿ ಮಹಿಳೆಯರು ಒಣ ಹಾಕುತ್ತಿದ್ದ ಬ್ರಾಗಳನ್ನೆಲ್ಲಾ ದಿನವೂ ಹೊತ್ತು ತರುತ್ತಿತ್ತು. ಇದ್ಯಾವುದೂ ಆಕೆಯ ಮಾಲೀಕರದ್ದಾಗಿರಲಿಲ್ಲ, ಬೆಕ್ಕಿನ ಈ ಬುದ್ಧಿಗೆ ಬೆಕ್ಕಿನ ಮಾಲಕಿ ಸುಸ್ತಾಗಿ ಹೋಗಿದ್ದರು. ತನ್ನ ಬೆಕ್ಕಿನ ಈ ವಿಚಿತ್ರ ವರ್ತನೆಯ ವೀಡಿಯೋವನ್ನು ಬೆಕ್ಕಿನ ಮಾಲಕಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು ಆ ವಿಡಿಯೋ ಈಗ ಭಾರಿ ವೈರಲ್ ಆಗಿದೆ.
ಬಣ್ಣ ಬಣ್ಣದ ಬ್ರಾ ಹೊತ್ತು ತರುವ ಬೆಕ್ಕು:
ವೀಡಿಯೋದಲ್ಲಿ ಬೆಕ್ಕು ದಿನವೂ ಬಣ್ಣ ಬಣ್ಣದ ಕಲರ್ ಕಲರ್‌ನ ತುಂಬಾ ದುಬಾರಿ ಎನಿಸಿದ ಬ್ರಾಗಳನ್ನು ಹೊತ್ತು ತರುತ್ತಿತ್ತು. ಹೀಗೆ ಬೆಕ್ಕು ಬ್ರಾಗಳನ್ನು ಹೊತ್ತು ತರುತ್ತಿರುವ ವೀಡಿಯೋವನ್ನು ಬೆಕ್ಕಿ ಮಾಲೀಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಕ್ಕಿನ ಈ ವಿಚಿತ್ರ ವರ್ತನೆಗೆ ಮಾಲೀಕರು ಸುಸ್ತಾಗಿ ಹೋಗಿದ್ದರು. ಯಾಕೆ ಇವಳು ಹೀಗೆ ಆಕೆಯ ಪೂರ್ಣಾವಧಿ ಕೆಲಸವೇ ಸುತ್ತಮುತ್ತಲ ಮನೆಗಳಿಂದ ಬ್ರಾಗಳನ್ನು ಕದ್ದು ತರುವುದು. ಇದು ಆಕೆಯ ಪ್ರತಿದಿನದ ಕೆಲಸ, ಯಾಕೆ ಹೀಗೆ, ಯಾಕೆ ನೀನು ದಿನವೂ ನನಗೆ ಬ್ರಾಗಳನ್ನು ತೆಗೆದುಕೊಂಡು ಬಂದು ಕೊಡುವೆ, ನಮ್ಮ ಮನೆಯ ತುಂಬ ಬರೀ ಬೇರೆಯವರ ಬ್ರಾಗಳೇ ಇದೆ. ಇದು ನನಗಾಗಿಯೇ? ಈಗ ಇಲ್ಲಿ ಏನಾಗುತ್ತಿದೆ ಅನ್ನಾ? ಎಂದು ಆ ಬೆಕ್ಕಿನ ಜೊತೆ ಮಾಲೀಕರು ಕೇಳುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ.
ನಾನು ಇದಕ್ಕೆ ಧನ್ಯವಾದ ಹೇಳುತ್ತೇನೆ ಆದರೆ ಇದರಿಂದ ನಾನು ಏನು ಮಾಡಬೇಕು ಎಂದು ನೀನು ಬಯಸಿದ್ದೀಯಾ ಎಂಬುದು ನನಗೆ ಅರ್ಥವಾಗ್ತಿಲ್ಲ, ಒಂದು ದಿನ ಮಧ್ಯರಾತ್ರಿ ಎದ್ದಿದೆ. ಆದರೆ ಆಗಲೂ ನನ್ನ ಬೆಕ್ಕು ಅನ್ನಾ ಈ ಬೇರೆಯವರ ಬ್ರಾಗಳನ್ನು ತಂದು ನನಗೆ ಉಡುಗೊರೆ ನೀಡುವಂತೆ ನನ್ನ ಬೆಡ್ ತುಂಬಾ ತುಂಬಿಸಿತ್ತು. ಇಂದು ಆಕೆ ನನಗೆ ಎರಡು ಬ್ರಾಗಳನ್ನು ತಂದಿದ್ದಾಳೆ. ಇದಿನ್ನೂ ಒಣಗಿಲ್ಲ, ಈಗಷ್ಟೇ ತೊಳೆದು ಹಾಕಿದಂತೆ ಫ್ರೆಶ್ ಆಗಿದೆ. ಅನ್ನಾ ಈಗ ಮುಂಜಾನೆ ನಾಲ್ಕು ಮುಕ್ಕಾಲು ಎಂದು ಬೆಕ್ಕಿನ ಮಾಲಕಿ ಹೇಳಿದ್ದು ಈ ವೀಡಿಯೋ ನಗು ತರಿಸುತ್ತಿದೆ. ಇವುಗಳು ಯಾವುದು ನನ್ನ ಬ್ರಾಗಳಲ್ಲ, ಅವು ನನ್ನವೂ ಆಗುವುದಕ್ಕೂ ಸಾಧ್ಯವಿಲ್ಲ ಎಂದು ಬೆಕ್ಕಿನ ಮಾಲಕಿ ಹೇಳಿದ್ದಾರೆ.
ಅಲ್ಲದೇ ಇದಾದ ನಂತರ ಬೆಕ್ಕು ಪ್ಲಾಸ್ಟಿಕ್ ಲಕೋಟೆಗಳನ್ನು ತರುವ ಅಭ್ಯಾಸವನ್ನು ಶುರು ಮಾಡಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ ನಂತರದಲ್ಲಿ ತನಗೆ ಕಂಡ ಹಲವು ವಸ್ತುಗಳನ್ನು ತರುತ್ತಿತ್ತು. ಅದರಲ್ಲಿ ಮಕ್ಕಳ ಆಟದ ಸಾಮಾನುಗಳು ಇದ್ದವು. ಈ ಬೆಕ್ಕು ನಾನು ಏನು ತಂದಿದ್ದೇನೆ ನೋಡಿ ಎಂದು ಕುತೂಹಲದಿಂದ ನಮ್ಮನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿತ್ತು.
ನಾವು ಆಕೆಯನ್ನು 2016ರಲ್ಲಿ ಪ್ರಾಣಿಕೇಂದ್ರವೊಂದರಿಂದ ತೆಗೆದುಕೊಂಡು ಬಂದಿದ್ದೆವು. ಆದರೆ ಆಕೆ ತಾನು ಮಾಡುವ ಕೆಲಸವೆಲ್ಲವನ್ನು ಬಹಳ ಒಳ್ಳೆಯ ರೀತಿಯಿಂದಲೇ ಮಾಡುತ್ತಿದ್ದಳು. ಆಕೆಗೆ ಬೇರೆಯವರ ಗಮನವನ್ನು ತನ್ನತ್ತ ಸೆಳೆಯುವುದನ್ನು ಭಾರಿ ಇಷ್ಟಪಡುತ್ತಿದ್ದಳು. ಆದರೆ ಆಕೆಯಂತಹ ಬೆಕ್ಕನ್ನು ನಾನು ಹಿಂದೆಲ್ಲೂ ನೋಡಿಲ್ಲ ಎಂದು ಆ ಮಹಿಳೆ ವೀಡಿಯೋದಲ್ಲಿ ಹೇಳಿಕೊಂಡಿದ್ದು, ವೀಡಿಯೋ ಭಾರಿ ವೈರಲ್ ಆಗಿದೆ.
ವೀಡಿಯೋ ನೋಡಿದ ನೆಟ್ಟಿಗರು ಏನಂದರು?
ವೀಡಿಯೋ ನೋಡಿದ ಅನೇಕರು ಹಲವು ರೀತಿಯ ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆದರೆ ತಿಳಿಯದವರಿಗೆ ಬ್ರಾ ಬಹಳ ದುಬಾರಿ ಒಳಉಡುಪು, ಅದರಲ್ಲೂ ಬ್ರಾಂಡೆಡ್, ಸೆಲೆಬ್ರಿಟಿಗಳಲ್ಲಿ ಬಹಳ ಪ್ರಸಿದ್ಧಿ ಪಡೆದಿರುವ ವಿಕ್ಟೋರಿಯಾ ಬ್ರಾಗಳ ಬೆಲೆ 3-4 ಸಾವಿರದಿಂದ 90 ಸಾವಿರದವರೆಗೂ ಇದೆ. ಹೀಗಾಗಿ ಈ ಬೆಕ್ಕಿನ ವೀಡಿಯೋ ನೋಡಿದ ಒಬ್ಬರು ಇದು ವಿಕ್ಟೋರಿಯಾ ಬ್ರಾದ ಕ್ಯಾಟ್ ವಾಕ್ ಮಾಡ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಅನ್ನಾ ನಿಮಗೆ ಒಳ್ಳೆಯ ಸಪೋರ್ಟ್ ಬೇಕು ಎಂದು ಬಯಸಿದೆ ಎಂದು ತಮಾಷೆ ಮಾಡಿದ್ದಾರೆ. ಹಾಗೆಯೇ ಇನ್ನೊಬ್ಬರು ನನ್ನ ಬೆಕ್ಕು ಸ್ನಾನ ಮಾಡುವಾಗ ಧರಿಸುವ ಸೂಟ್ ಇಷ್ಟಪಡುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಅನ್ನಾಳ ಹೆಸರನ್ನು ಬ್ರಾನಾ ಅಂತ ಇಡಿ ಅಂತ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬೆಕ್ಕುಗಳು ಬ್ರಾ ಕದಿಯುವುದು ಏಕೆ?
ಕೆಲ ಅಧ್ಯಯನದ ಪ್ರಕಾರ ಬೆಕ್ಕುಗಳು ಮಾಲೀಕರ ವಾಸನೆಯ ಬಲವಾದ ಆಕರ್ಷಣೆಯಿಂದಾಗಿ ಬ್ರಾಗಳಂತಹ ವಸ್ತುಗಳನ್ನು ಕದಿಯುತ್ತವೆ ಎಂದು ತಿಳಿದುಬಂದಿದೆ, ಏಕೆಂದರೆ ಈ ವಾಸನೆಯು ಹೆಚ್ಚಾಗಿ ದೇಹಕ್ಕೆ ಹತ್ತಿರವಾಗಿ ಧರಿಸಿರುವ ಬಟ್ಟೆಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಈ ನಡವಳಿಕೆಯು ಬೆಕ್ಕುಗಳು ತಮ್ಮ ಮಾಲೀಕರಿಗೆ ಹತ್ತಿರವಾಗಲು, ಪರಿಚಿತ ವಾಸನೆಯಿಂದ ತಮ್ಮ ಪ್ರದೇಶವನ್ನು ಗುರುತಿಸಲು ಅಥವಾ ಸರಳವಾಗಿ ಸೌಕರ್ಯ ಮತ್ತು ಗಮನವನ್ನು ಸೆಳೆಯಲು ಬಯಸುವುದಕ್ಕೆ ಮಾಡುತ್ತವೆ ಎಂಬ ಮಾಹಿತಿ ಇದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.