ಕ್ಯಾನ್ಸರ್ ಕಾಯಿಲೆ ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಕಾರಣ ನಾವು ನಿತ್ಯ ಸೇವಿಸುವ ಆಹಾರ ಎನ್ನುತ್ತಾರೆ ತಜ್ಞರು. ಯಾವ ಆಹಾರ ಆರೋಗ್ಯಕರ ಎಂದು ಸೇವಿಸುತ್ತೇವೋ ಅವುಗಳೇ ನಮ್ಮ ಜೀವಕ್ಕೆ ಕುತ್ತು ತರುತ್ತವೆ. ಇಂತಹ ಆಹಾರ ಸಾಮಾಗ್ರಿಗಳ ಮಾಹಿತಿ.
ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆ ಸದ್ಯ ಜನರನ್ನು ಕಂಗಾಲುಗೊಳಿಸಿದೆ. ಶ್ರೀಮಂತರು, ಬಡವರು ಎನ್ನದೇ ಎಲ್ಲರನ್ನೂ ಸತಾಯಿಸುತ್ತಿದೆ. ಜಂಕ್ ಫುಡ್ ಗಳ ಅಬ್ಬರ ಶುರುವಾದಾಗಿನಿಂದ ಕ್ಯಾನ್ಸರ್ ಕಾಯಿಲೆಗೀಡಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಲಾರಂಭಿಸಿದೆ. ಸಂಶೋಧನಾಕಾರರೂ ಈ ಆಹಾರ ಸೇವನೆ ಕ್ಯಾನ್ಸರ್ ಗೆ ತುತ್ತಾಗುವಂತೆ ಮಾಡುತ್ತದೆ ಎಂದು ತಮ್ಮ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಆದರೆ ನಿಮಗೆ ಗೊತ್ತಾ? ಯಾವುದನ್ನು ನಾವು ಆರೋಗ್ಯಕರ ಆಹಾರ ಎಂದು ಪ್ರತಿನಿತ್ಯ ಸೇವಿಸುತ್ತೇವೋ ಅದರಿಂದಲೂ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಹೌದು..., ಇದು ನಿಜಕ್ಕೂ ಶಾಕಿಂಗ್ ಸಂಗತಿ. ಹಾಗಾದ್ರೆ ಆ ಆಹಾರ/ ಆಹಾರ ಸಾಮಾಗ್ರಿಗಳೇನು? ಇಲ್ಲಿದೆ ಕ್ಯಾನ್ಸರ್ ಗೀಡು ಮಾಡಬಲ್ಲ, ನಿತ್ಯ ಸೇವಿಸುವ ಆಹಾರ ಸಾಮಾಗ್ರಿಗಳು.
1. ಸೋಡಾ: ಸೋಡಾದಲ್ಲಿ ಕ್ಯಾನ್ಸರ್ ಗೀಡು ಮಾಡಬಲ್ಲ ಸಕ್ಕರೆ ಮಾತ್ರವಲ್ಲದೇ, ಕ್ಯಾರಮಲ್ ಕಲರ್ ಕೂಡಾ ಬಳಕೆ ಮಾಡಲಾಗುತ್ತದೆ. ಈ ಕೃತಕ ಬಣ್ಣದಿಂದ ಕ್ಯಾನ್ಸರ್ ಗೀಡು ಮಾಡಬಲ್ಲ ಮಾರಕ ಅಂಶ ಹೊಂದಿಗೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
2. ಗ್ರಿಲ್ಡ್ ಮಾಂಸ: ಕೆಂಡದಲ್ಲಿ ಸುಟ್ಟು ಮಾಡುವ ಮಸಾಲೆಭರಿತ ಮಾಂಸ ತಿನ್ನಲು ಬಹಳ ರುಚಿಯಾಗಿರುತ್ತದೆ. ಆದರೆ ಇದನ್ನು ತಯಾರಿಸಲು ಬಳಸುವ ಅತಿ ಹೆಚ್ಚು ತಾಪಮಾನದಿಂದ ಹೈಡ್ರೋಕಾರ್ಬನ್ಸ್ ಉತ್ಪತ್ತಿಯಾಗಿ ಕ್ಯಾನ್ಸರ್ ಉಂಟು ಮಾಡಬಲ್ಲವು.
3. ಮೈಕ್ರೋವೇವ್ ಪಾಪ್ ಕಾರ್ನ್: ಮೈಕ್ರೋವೇವ್ ನಲ್ಲಿ ಪಾಪ್ ಕಾರ್ನ್ ತಯಾರಿಸುವ ವೇಳೆ ಡಯಾಸಿಟೆಲ್ ಬಿಡುಗಡೆಯಾಗುತ್ತದೆ. ಇದು ಮಾರಣಾಂತಿಕ ಕಾಯಿಲೆಗೆ ದಾರಿ ಮಾಡಿಕೊಡುವುದರ್ಲಲಿ ಅನುಮಾನವಿಲ್ಲ.
4. ಸಂಸ್ಕರಿಸಿದ ಆಹಾರ, ವಿಶೇಷವಾಗಿ ಟೊಮಾಟೋ: ಸಂಸ್ಕರಿಸಿದ ಆಹಾರಗಳು ಜೀವಕ್ಕೆ ಹಾನಿಯುಂಟು ಮಾಡುತ್ತವೆ. ಇವುಗಳನ್ನು ವಿತರಿಸುವ ಕ್ಯಾನ್ ಗಳಲ್ಲಿ ಕೆಮಿಕಲ್ ಬಿಪಿಎ ಇರುವುದರಿಂದ ಕ್ಯಾನ್ಸರ್ ಗೀಡಾಗುವಂತೆ ಮಾಡುತ್ತವೆ. ಟೊಮಾಟೋ ಆರೀಗ್ಯಕರ ತರಕಾರಿಯಾದರೂ ಪ್ಯಾಕಿಂಗ್ ನಿಂದಾಗಿ ಈ ವಿಷಯುಕ್ತ ಅಂಶ ಟೊಮಾಟೋಗಳಲ್ಲಿ ಸೇರಿಕೊಳ್ಳುತ್ತವೆ.
5. ಸಾಕಿದ ಮೀನುಗಳಿಂದ ತಯಾರಿಸಿ ಖಾದ್ಯ: ಮೀನು ಆರೋಗ್ಯಕರ ಆದರೆ ಸಾಕಿದ ಮೀನುಗಳಿಗೆ ರಾಸಾಯನಿಕಗಳ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಹೀಗಾಗೇ ಈ ಮೀನುಗಳು ದೊಡ್ಡ ಗಾತ್ರ ಹೊಂದಿರುತ್ತವೆ. ಆದರೆ ಎಚ್ಚರ ಇವುಗಳ ಸಾಕಣಿಕೆಗೆ ಬಳಸುವ ರಾಸಾಯನಿಕ ಜೀವಕ್ಕೇ ಮಾರಕವಾಗಬಲ್ಲವು.
7. ಕೃತಕ ಸಿಹಿ ಪದಾರ್ಥಗಳು: ಬಹುತೇಕ ಕೃತಕ ಸಿಹಿ ಉತ್ಪನ್ನಗಳು ರಾಸಾಯನಿಕ ಪ್ರಕ್ರಿಯೆಯಿಂದ ತಯಾರಿಸಲಾಗುತ್ತದೆ. ಹೀಗಾಗಿ ಇವುಗಳು ಸುರಕ್ಷಿತ ಎನ್ನಲು ಸಾಧ್ಯವಿಲ್ಲ. ಇದರಲ್ಲಿರುವ ಅಂಶಗಳು ಮೆದುರು ಕ್ಯಾನ್ಸರ್ ಗೀಡು ಮಾಡಬಲ್ಲವೆಂದು ಸಂಶೋಧನೆಗಳು ತಿಳಿಸಿವೆ.
8. ಅಜೈವಿಕ ಹಣ್ಣು ಹಾಗೂ ತರಕಾರಿಗಳು: ಹಣ್ಣು ಹಾಗೂ ತರಕಾರಿಗಳು ಆರೋಗ್ಯವ್ನನು ವೃದ್ಧಿಸುತ್ತವೆ. ಆದರೆ ಇವುಗಳನ್ನು ಸಂರಕ್ಷಿಸಲು ಸಿಂಪಡಿಸುವ ಔಷಧಿ ಜೀವಕ್ಕೆ ಕುತ್ತು ತರುವುದರಲ್ಲಿ ಅನುಮಾನವಿಲ್ಲ. ಆಸ್ಟ್ರೇಲಿಯಾದಲ್ಲಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇಂತಹ ಔಷಧಿ ಸಿಂಪಡನೆಯನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ.
9. ಸಂಸ್ಕರಿಸಿದ ಬಿಳಿ ಹಿಟ್ಟು: ಸಂಸ್ಕರಿಸಿದ ಹಿಟ್ಟು ಮೂಲ ಗೋಧಿ ಹಿಟ್ಟಿನಲ್ಲಿರುವ ಪೌಷ್ಟಿಕಾಂಶಗಳನ್ನು ತೆಗೆದು ಹಾಕುತ್ತದೆ. ಇಷ್ಟೇ ಅಲ್ಲದೇ ಹೊಳೆಯುವ ಬಿಳಿ ಬಣ್ಣಕ್ಕಾಗಿ ಹಿಟ್ಟನ್ನು ಕ್ಲೋರಿನ್ ಗ್ಯಾಸ್ ನಿಂದ ಬ್ಲೀಚ್ ಮಾಡಲಾಗುತ್ತದೆ. ಇದರ ಸೇವನೆಯಿಂದ ಕ್ಯಾನ್ಸರ್ ಕಾಯಿಲೆ ಕಟ್ಟಿಟ್ಟ ಬುತ್ತಿ.
10 ಸಂಸ್ಕರಿಸಿದ ಮಾಂಸ: ಇತ್ತೀಚೆಗೆ ಮಕ್ಕಳು ಹಾಗೂ ಯುವಜನರು ಸಾಸೇಜ್, ಹಾಟ್ ಡಾಗ್ಸ್ ನಂತಹ ಸಂಸ್ಕರಿಸಿದ ಮಾಂಸ ಪ್ರಿಯರಾಗುತ್ತಿದ್ದಾರೆ. ಇವುಗಳನ್ನು ಹಾಳಾಗದಂತೆ ಕಾಪಾಡಲು ಅಧಿಕ ಪ್ರಮಾಣದಲ್ಲಿ ಉಪ್ಪು ಮತ್ತು ರಾಸಾಯನಿಕ ಪದಾರ್ಥಗಳನ್ನು ಮಿಶ್ರಣ ಮಾಡಲಾಗುತ್ತದೆ. ಅದರಲ್ಲೂ ಇವುಗಳಿಗೆ ಹಾಕುವ ನೈಟ್ರೇಟ್ ಎಂಬ ರಾಸಾಯನಿಕ ಮಾರಣಾಂತಿಕ ಕಾಯಿಲೆಗೀಡು ಮಾಡುತ್ತದೆ.
ಈ ಮೇಲಿನ ಆಹಾರಗಳನ್ನು ಹೊರತುಪಡಿಸಿ, ಫ್ರೆಂಚ್ ಫ್ರೈಸ್, ಡಯಟ್ ಆಹಾರಗಳು, ಸಂಸ್ಕರಿಸಿದ ಸಕ್ಕರೆ, ಮದ್ಯ, ಬಟಾಟೆ ಚಿಪ್ಸ್ ಇವುಗಳೂ ಕ್ಯಾನ್ಸರ್ ಗೀಡು ಮಾಡಬಲ್ಲ ಹನಿಕಾರಕ ಅಂಶಗಳನ್ನು ಹೊಂದಿರುತ್ತವೆ. ಇವುಗಳಿಂದ ದೂರವಿದ್ದು, ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬಹುದು. ಸಂಸ್ಕರಿಸಿದ ಆಹಾರ ಪದಾರ್ಥಗಳಿಂದ ಜೈವಿಕ ಹಾಗೂ ನೈಸರ್ಗಿಕವಾಗಿ ಬೆಳೆದ ಆಹಾರ ಸೇವನೆ ಉತ್ತಮ