ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ರೀಲ್‌ಗಳು ಸಾಕಷ್ಟು ಚರ್ಚೆಯಾಗುತ್ತವೆ. ಅಂಥದ್ದೇ ಒಂದು ತಮಾಷೆಯ ರೀಲ್‌ನಲ್ಲಿ ಈಗ ಜಮೀರ್ ಅಹ್ಮದ್ ಅವರ ಮೂಡ್‌ಗಳನ್ನು ವಿಭಿನ್ನವಾಗಿ ಚಿತ್ರಿಸಿದ್ದಾರೆ.
ವ್ಯಕ್ತಿಯ ಹಾವಭಾವಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಪೇಜ್ ಒಂದರಲ್ಲಿ ಗಂಡುಮಕ್ಕಳಿಗೆ ಇರುವ ನಾಲ್ಕೇ ಮೂಡ್‌ಗಳ ಬಗ್ಗೆ ಚಿತ್ರಸಿಲಾಗಿದೆ. ಸಾಮಾನ್ಯವಾಗಿ ನವರಸಗಳ ಬಗ್ಗೆ ಚರ್ಚೆಯಾಗುತ್ತದೆ. ಸಿನಿಮಾದಲ್ಲಿ ನವರಸನಾಯಕ ಅಂದ್ರೆ ಎಲ್ಲರಿಗೂ ನೆನಪಾಗೋದು ಜಗ್ಗೇಶ್. ಆದರೆ, ರಾಜಕೀಯದಲ್ಲಿ ನವರಸ ನಾಯಕ ಅಂದ್ರೆ ಹೆಚ್ಚೂಕಡಿಮೆ ಎಲ್ಲರೂ ಜಮೀರ್ ಅಹ್ಮದ್ ಎಂದೇ ಹೇಳುತ್ತಾರೆ. ಅದಕ್ಕೆ ಕಾರಣ, ಅವರು ಮಾತನಾಡುವ ವೈಖರಿಯೂ ಹೌದು, ಅವರ ಹಾವಭಾವವೂ ಹೌದು. ಈಗ ಜಮೀರ್ ಅಹ್ಮದ್ ಅವರ ವಿಡಿಯೋಗಳನ್ನು ಇಟ್ಟುಕೊಂಡೇ, ಗಂಡ್ ಮಕ್ಳಿಗೆ ಇರೋ ನಾಲ್ಕು ಮೂಡ್‌ಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ವಿಡಿಯೋದ ಜೊತೆಗೆ ಬಿಗ್‌ಬಾಸ್ ಶೈಲಿಯ ಬ್ಯಾಕ್‌ಗ್ರೌಂಡ್ ಆಡಿಯೋ ನೀಡಿರುವುದು ಕೂಡ ಮಜವಾಗಿದೆ.
ಬೆಳಗ್ಗೆ 7.30ರಿಂದ 12 ಯವರೆಗೆ ಗಂಡ್‌ಮಕ್ಳು ಮಸ್ತಿ ಮೂಡ್‌ನಲ್ಲಿ ಇರುತ್ತಾರೆ. ಕ್ರಿಕೆಟ್ ಆಡೋದು, ಮಸ್ತಿ ಮಾಡೋದೇ ಈ ಟೈಮ್‌ನ ಕಳೆಯುತ್ತಾರೆ ಅಂತಾ ತಿಳಿಸಲಾಗಿದೆ. ಇದಕ್ಕೆ ಜಮೀರ್ ಅಹ್ಮದ್ ಅವರು ಬ್ಯಾಟಿಂಗ್, ಬೌಲಿಂಗ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಇನ್ನು ಮಧ್ಯಾಹ್ನ 12 ಗಂಟೆಯ ನಂತರ ಗಂಡ್ ಮಕ್ಳಲ್ಲಿ ಕಾಣಿಸಿಕೊಳ್ಳೋದು ಕಿರಿಕ್ ಮೂಡ್. ಏನೇ ಮಾತಾಡಿದ್ರೂ ಎಲ್ಲಾದಕ್ಕೂ ಕಿರಿಕ್. ಅಮ್ಮನ ಜೊತೆ, ಅಪ್ಪನ ಜೊತೆ, ಸ್ನೇಹಿತರ ಜೊತೆ ಎಲ್ಲರ ಜೊತೆಗೂ ಕಿರಿಕ್ ಮಾಡ್ತಲೇ ಇರುತ್ತಾರೆ. ಇದಕ್ಕೆ ಜಮೀರ್ ಅಹ್ಮದ್ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ರೋಷಾವೇಷದಿಂದ ಮಾತನಾಡಿರುವ ಹಾಗೂ ಟಿವಿ ಚಾನೆಲ್‌ಗಳಲ್ಲಿ ಸಿಟ್ಟಿನಲ್ಲಿ ಮಾತನಾಡಿರುವ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಇನ್ನು ಸಂಜೆ 5 ಗಂಟೆಯ ನಂತರ ಲವ್ ಮೂಡ್ ಶುರುವಾಗತ್ತಂತೆ. ಲವ್ ಹಾಡುಗಳನ್ನ ಕೇಳೋದು, ಲವರ್‌ನ ಭೇಟಿಯಾಗೋದು ಗಂಡ್‌ಮಕ್ಳ ದಿನಚರಿಯಲ್ಲಿ ಇರುತ್ತಂತೆ. ಇದಕ್ಕಾಗಿ ಅವರು ಜಮೀರ್ ಅಹ್ಮದ್, ವಿಧಾನಸಭೆಯಲ್ಲಿ ಶಾಸಕಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್ ಅವರ ಜೊತೆಯಲ್ಲಿ ಮಾತನಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇನ್ನು ಮಧ್ಯರಾತ್ರಿ 1.30ರ ನಂತ್ರ ಗಂಡು ಮಕ್ಕಳಲ್ಲಿ ಸ್ಯಾಡ್ ಮೂಡ್ ಶುರುವಾಗುತ್ತಂತೆ, ಈ ವೇಳೆ ಅವರು ವೇದಾಂತಿಯ ರೀತಿ ಮಾತನಾಡೋದು, ಪ್ಯಾಥೋ ಸಾಂಗ್‌ಗಳನ್ನು ಕೇಳೋ ಕೆಲಸ ಮಾಡ್ತಾರೆ. ಇದಕ್ಕಾಗಿ ಜಮೀರ್ ಅಹ್ಮದ್ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾವುಕವಾಗಿರುವ ವಿಡಿಯೋವನ್ನು ಹಾಕಲಾಗಿದೆ.
undefined
ದೇಶ್ ಹಮಾರಾ ಹೈ ಎಂದು ವೀರಾವೇಷದ ಭಾಷಣ ಮಾಡುತ್ತಾ ಡಯಾಸ್ ಗಾಜು ಒಡೆದ ಜಮೀರ್ ಅಹ್ಮದ್!
ಇದೆಲ್ಲದರೊಂದಿಗೆ ಮುಂದೆ ಈ ರೀತಿಯ ವಿಡಿಯೋ ಯಾರದು ಬೇಕು ಎಂದು ಕೇಳಲಾಗಿದೆ. ಅದಕ್ಕೆ ರಂಗಣ್ಣ, ಸಿದ್ದರಾಮಯ್ಯ, ಪ್ರದೀಪ್ ಈಶ್ವರ್, ಡ್ರೋನ್ ಪ್ರತಾಪ್, ಹುಚ್ಚ ವೆಂಕಟ್, ನರೇಂದ್ರ ಮೋದಿ, ಡಿ ಬಾಸ್, ಸಾಧು ಕೋಕಿಲ, ಯಡಿಯೂರಪ್ಪ ಹಾಗೂ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಹೇಳಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೂ 14 ಸಾವಿರ ಮಂದಿ ವೀಕ್ಷಣೆ ಮಾಡಿದ್ದು 50ಕ್ಕೂ ಹೆಚ್ಚಿನ ಕಾಮೆಂಟ್‌ಗಳು ಬಂದಿವೆ.
ದೇಶದಲ್ಲಿ ಮೋದಿ ಅಲೆ ಇದ್ಯಾ? ಈ ಬಾರಿ ಹಾಗೇನು ಕಾಣ್ತಿಲ್ಲ ಎಂದ ಜಮೀರ್ ಅಹ್ಮದ್