ಬೆಂಗಳೂರಿನ ಒರಾಕಲ್ ಕೆಲಸ ಬಿಟ್ಟು ಫಲೂಡಾ ಉದ್ಯಮ ಆರಂಭಿಸಿದ ಟೆಕ್ಕಿ, ಈಗ 9 ಕೋಟಿ ಬ್ಯೂಸಿನೆಸ್

Published : Sep 15, 2026, 04:11 PM IST
falooda

ಸಾರಾಂಶ

ಬೆಂಗಳೂರಿನಲ್ಲಿ 1 ಲಕ್ಷ ರೂಪಾಯಿ ವೇತನದ ಒರಾಕಲ್ ಕೆಲಸ ಬಿಟ್ಟ ಟೆಕ್ಕಿ ಊರಿಗೆ ಮರಳಿ ಫಲೂಡ ಬ್ಯೂಸಿನೆಸ್ ಆರಂಭಿಸಿದ್ದಾರೆ. ವರ್ಷಕ್ಕೆ 12 ಲಕ್ಷ ವೇತನದಿಂದ ಇದೀಗ 9 ಕೋಟಿ ರೂಪಾಯಿ ಉದ್ಯಮವಾಗಿ ಹೊರಹೊಮ್ಮಿದೆ.

ಉದ್ಯೋಗ ಕಡಿತ ಸೇರಿದಂತೆ ಹಲವು ಕಡಿತಗಳು ಒರಾಕಲ್ ಸೇರಿದಂತೆ ಬಹುತೇಕ ಕಂಪನಿಗಳಲ್ಲಿ ನಡೆಯುತ್ತಿದೆ. ಉದ್ಯೋಗ ಕಡಿತಗಳ ನಡುವೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ತಿಂಗಳಿಗೆ 1 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದರು. ಆದರೆ ಕೆಲಸದ ಒತ್ತಡ, ಉದ್ಯೋಗ ಕಡಿತದ ಭೀತಿ ನಡುವೆ ತನ್ನದೇ ಉದ್ಯಮ ಮಾಡಲು ನಿರ್ಧರಿಸಿದ್ದಾರೆ. ಎಲ್ಲರ ವಿರೋಧದ ನಡುವೆ ಒರಾಕಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರಿನ ಟೆಕ್ಕಿ, ಊರಿಗೆ ಮರಳಿದ್ದಾನೆ. ಹಲವರ ಟೀಕೆ ನಡುವೆ ಫಲೂಡ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ. ಇದೀಗ ವರ್ಷಕ್ಕೆ 9 ಕೋಟಿ ರೂಪಾಯಿ ವ್ಯವಹಾರದ ಕಂಪನಿಯಾಗಿ ಬೆಳೆದು ನಿಂತಿದೆ.

ಸ್ವಂತ ಉದ್ಯಮದ ಕನಸು ಕಂಡ ಟೆಕ್ಕಿ

ಬೆಂಗಳೂರಿನ ಒರಾಕಲ್ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಪ್ರದೀಪ್ ಕಣ್ಣನ್ ಕೆಲಸದಿಂದ ಬೇಸತ್ತಿದ್ದ. ಕೆಲಸದ ಒತ್ತಡ, ಟಾರ್ಗೆಟ್, ಬಿಡುವಿಲ್ಲದ ವರ್ಕ್‌ನಿಂದ ಹೈರಾಣಾಗಿದ್ದ. ಕೆಲಸದಲ್ಲಿದ್ದುಕೊಂಡೇ ಏನಾದರು ಮಾಡಬೇಕು ಬಳಿಕ ಕೆಲಸ ಬಿಡಬೇಕು ಎಂದುಕೊಂಡು ಹಲವು ಪ್ರಯತ್ನ ಮಾಡಿದ್ದ. ಆದರೆ ಸಾಧ್ಯವಾಗಲಿಲ್ಲ. ಕೊನೆಗೆ ಏನಾದರು ಸರಿ ಸ್ವಂತ ಉದ್ಯಮ ಮಾಡಬೇಕು ಎಂದು ಗಟ್ಟಿ ನಿರ್ಧಾರ ಮಾಡಿದ್ದ. ತಿಂಗಳಿಗೆ 1 ಲಕ್ಷ ರೂಪಾಯಿ ವೇತನ ಬರುತ್ತಿದ್ದ ಒರಾಕಲ್ ಕೆಲಸ ಬಿಟ್ಟುಬಿಟ್ಟ.

ಕುಲ್ಫಿ ಉದ್ಯಮ ಆರಂಭಿಸಿ ಸೋತ ಟೆಕ್ಕಿ

ಬೆಂಗಳೂರಿನಲ್ಲೇ ಉಳಿದುಕೊಂಡ ಟೆಕ್ಕಿ ಪ್ರದೀಪ್ ಕಣ್ಣನ್, ಕುಲ್ಫಿ ಉದ್ಯಮ ಆರಂಭಿಸಿದ್ದ. ಲೆಟ್ಸ್ ಕುಲ್ಫಿ ಎಂಬ ಕುಲ್ಫಿ ಉದ್ಯಮ ಆರಂಭಿಸಿ ಯಶಸ್ಸಿಗಾಗಿ ಇನ್ನಿಲ್ಲದ ಪ್ರಯತ್ನ ಮಾಡಿದ್ದ. ಏನೇ ಮಾಡಿದರೂ ಬೆಂಗಳೂರಲ್ಲಿ ಕುಲ್ಫಿ ಉದ್ಯಮ ಯಶಸ್ಸು ಕಾಣಸಲಿಲ್ಲ. ಸಾಲ ಹೆಚ್ಚಾಯಿತು. ಸಮಸ್ಯೆಗಳು ತಲೆದೋರಿತು. ಕೊನೆಗೆ ಬೇರೆ ದಾರಿ ಕಾಣದೆ ಕುಲ್ಫಿ ಉದ್ಯಮ ಮುಚ್ಚಬೇಕಾಯಿತು.

ಫಲೂಡ ಉದ್ಯಮ ಆರಂಭ

ಯಾವುದೇ ಉದ್ಯಮ ಆರಂಭಿಸಿಲ್ಲ, ಅನುಭವವೂ ಇಲ್ಲ. ಹೀಗಿರುವಾಗ ತಿಂಗಳಿಗೆ 1 ಲಕ್ಷ ರೂಪಾಯಿ ವೇತನ ಬಿಟ್ಟಿದ್ದು ತಪ್ಪು ಎಂದು ಹಲವರು ಹೇಳಿದ್ದರು. ಕುಲ್ಫಿ ಉದ್ಯಮವೂ ಮುಚ್ಚಿತ್ತು. ಹೀಗಾಗಿ ಟೀಕೆಗಳು ಹೆಚ್ಚಾಯಿತು. ಬೆಂಗಳೂರಿನಲ್ಲಿ ಈತನಿಗೆ ಕೆಲಸ ಇತ್ತಾ ಅನ್ನೋ ಅನುಮಾನವನ್ನು ವ್ಯಕ್ತಪಡಿಸಿದ್ದರು. ಆದರೆ ಗಟ್ಟಿ ನಿರ್ಧಾರ ಮಾಡಿದ ಪ್ರದೀಪ್ ಕಣ್ಣನ್ ತಮಿಳುನಾಡಿನ ಕರೂರ್‌ಗೆ ಮರಳಿದ್ದ. ಬಳಿಕ ಫಲೂಡ ಉದ್ಯಮ ಆರಂಭಿಸಿದ.

ಸಣ್ಣ ಸಣ್ಣ ಶಾಪ್‌ಗಳನ್ನು ಟಾರ್ಗೆಟ್ ಮಾಡಿ ಫಲೂಡ ತಯಾರಿಸಿ ಬಾಟಲಿಯಲ್ಲಿ ಪ್ಯಾಕ್ ನೀಡಿ ವಿತರಣೆ ಮಾಡಲು ಆರಂಭಿಸಿದ. ಸಣ್ಣ ಔಟ್‌ಲೆಟ್ ತೆರೆದು ಫಲೂಡ ಮಾರಾಟ ಆರಂಭಿಸಿದ. ನಿಧಾನವಾಗಿ ಯಶಸ್ಸು ಕಾಣಲು ಆರಂಭಿಸಿತು. ಬ್ಯೂಸಿನೆಸ್ ಬೆಳೆಯಿತು. ಇದೀಗ ಉದ್ಯಮ ದೊಡ್ಡದಾಯಿತು. ವರ್ಷಕ್ಕೆ 9 ಕೋಟಿ ರೂಪಾಯಿ ಟರ್ನ್ ಓವರ್‌ಗೆ ಏರಿಕೆಯಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಅಲಂಕೃತ ಜೈಲಿನಲ್ಲಿ ಇದ್ದಂತೆ' ಬೆಂಗಳೂರಿನಂಥ ನಗರದಲ್ಲಿ ಮಕ್ಕಳ ಸಾಕುವ ಕಷ್ಟ ಬರೆದುಕೊಂಡ ಸ್ಟಾರ್ಟ್‌ಅಪ್‌ ಉದ್ಯಮಿ
ಎಷ್ಟೇ ಕ್ಲೀನ್‌ ಮಾಡಿದ್ರೂ ಡಸ್ಟ್‌ ಬಿನ್‌ ವಾಸನೆ ಬರ್ತಿದ್ಯಾ? ಹೀಗೆ ಮಾಡಿ