ಫುಡ್ ಪಾಯ್ಸನ್‌ಗೆ ರೈಡ್ ವೈನ್ ಮದ್ದು!

By Web DeskFirst Published Oct 16, 2018, 5:21 PM IST
Highlights

ಕೆಂಪು ಅಥವಾ ಕಪ್ಪು ದ್ರಾಕ್ಷಿಯಿಂದ ಮಾಡಿರುವ ವೈನನ್ನು ನಿಯಮಿತವಾಗಿ, ಸ್ವಲ್ಪ ಸ್ವಲ್ಪ ಕುಡಿದರೆ ಮದ್ದಾಗಬಲ್ಲದು. ದುಬಾರಿಯೂ ಅಲ್ಲದ, ಎಲ್ಲ ವಯಸ್ಸಿನವರೂ ಸೇವಿಸಬಹುದಾದ ಇದರಲ್ಲಿ ಅಂಥದ್ದೇನಿದೆ?

ಕೊಡಗಿನ ಕಡೆ ಮನೆಯಲ್ಲಿಯೇ ತಯಾರಿಸುವ ವೈನ್ ರುಚಿ ಸವಿದವವನೇ ಬಲ್ಲ. ವಿವಿಧ ಫ್ಲೇವರ್‌ಗಳಲ್ಲಿ ಲಭ್ಯವಾಗೋ ವೈನ್‌ನಲ್ಲಿ ಕಡಿಮೆ ಪ್ರಮಾಣದ ಆಲ್ಕೋಹಾಲ್ ಅಂಶವಿದ್ದು, ಆರೋಗ್ಯಕಾರಿ ಗುಣಗಳೂ ಇವೆ. ಕುಡಿಯದೇ ಹೋದರೂ ಪರ್ವಾಗಿಲ್ಲ, ವಿಧ ವಿಧವಾಗಿ ಬಳಸಿದರೂ ಆರೋಗ್ಯಕ್ಕೆ ಒಳ್ಳೆಯದು. ಹೇಗೆ?

  • ದಿನಕ್ಕೆ ಅರ್ಧ ಗ್ಲಾಸ್ ಕುಡಿಯುವುದರಿಂದ ಮೊಡವೆ ಬರುವುದಿಲ್ಲ. ಕುಡಿಯದಿದ್ದರೂ  ಹತ್ತಿಯನ್ನು ವೈನ್‌ನಲ್ಲಿ ಅದ್ದಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆಯಬೇಕು. ಇದು ಮೊಡವೆಯನ್ನು ದೂರ ಮಾಡುತ್ತದೆ.
  • ಬೇಗ ಚರ್ಮದ ಕಾಂತಿ ಹೆಚ್ಚಾಗಬೇಕೆಂದರೆ ರೆಡ್ ವೈನ್ ಕುಡಿಯಬೇಕು.
  • ಇದರಲ್ಲಿ ಅ್ಯಂಟಿ ಆ್ಯಕ್ಸಿಡೆಂಟ್ ಅಂಶವಿದ್ದು, ಕ್ಯಾನ್ಸರ್ ತಡೆಯುತ್ತದೆ ಮತ್ತು ಕರುಳು ಸಮಸ್ಯೆ ಸರಿ ಹೋಗುತ್ತದೆ.
  • ವೈನ್‌ನಲ್ಲಿ ಮರೆಗುಳಿತನವನ್ನು ಕಡಿಮೆ ಮಾಡುವ ಅಂಶವೂ ಇದೆ.
  • ಫುಡ್ ಪಾಯಿಸನ್  ಆದಾಗ ಒಂದು ಗ್ಲಾಸ್ ವೈನ್ ಸೇವಿಸಿದರೊಳಿತು. 
  • ಆ್ಯಂಟಿ ಏಜಿಂಗ್ ಗುಣವಿರೋ ವೈನ್ ಮುಖ ಸುಕ್ಕಾಗದಂತೆ ತಡೆಯುತ್ತದೆ.
click me!