ಆ್ಯಕ್ಟಿವ್ ಆಗಿರಬೇಕೆಂದರೆ ಇದನ್ನು ತಿನ್ನಿ...

By Web DeskFirst Published Oct 13, 2018, 4:47 PM IST
Highlights

ಬೆಳಗ್ಗೆ ಏಳು, ಮೊಬೈಲ್‌ ಒಮ್ಮೆ ಚೆಕ್ ಮಾಡು. ಒಂದಾದ ಮೇಲೆ ಮತ್ತೊಂದು ಮೆಸೇಜ್ ನೋಡುವಾಗಿ ಟೈಂ ಕಳೆದಿದ್ದೇ ಗೊತ್ತಾಗೋಲ್ಲ. ಲೇಟ್ ಆಯಿತೆಂದು ಸಿಕ್ಕಿದ್ದು ತಿಂದು ಆಫೀಸ್‌ಗೆ ಹೊರಟರೆ, ಅಪಾಯ ಕಟ್ಟಿಟ್ಟ ಬುತ್ತಿ....

ರಾತ್ರಿಯೂ ಮೊಬೈಲ್‌ನಲ್ಲಿ ಚಾಟ್. ಬೆಳಗ್ಗೆ ಎದ್ದೂ ಮೊಬೈಲ್ ವೀಕ್ಷಣೆ. ಈ ಮಧ್ಯೆ ಎಲ್ಲಿಯೋ ತುಸು ನಿದ್ದೆ. ಈ ಜಂಜಾಟದಲ್ಲಿ ದಣಿದ ದೇಹಕ್ಕೆ ಅಗತ್ಯ ವಿಶ್ರಾಂತಿಯೇ ಸಿಗೋಲ್ಲ. ದೇಹ ದಣಿದಿದೆ ಎಂದರೆ, ಬಾಯಿಗೆ ಏನೂ ರುಚಿಸೋಲ್ಲ. ಸಿಕ್ಕಿದ್ದು ತಿಂದು ಹೊರಟಿರೋ, ದೈಹಿಕ ಆರೋಗ್ಯಕ್ಕೂ ಕುತ್ತು, ಮಾನಸಿಕ ಆರೋಗ್ಯಕ್ಕೂ ಅಪಾಯ. 

ದಿನಪೂರ್ತಿ ಆರೋಗ್ಯವಾಗಿರಬೇಕೆಂದರೆ ಅಗತ್ಯದಷ್ಟು ಪೋಷಕಾಂಶಗಳು ನಮ್ಮ ದೇಹ ಸೇರಬೇಕು. ಅಗತ್ಯದಷ್ಟು ಪೌಷ್ಟಿಕಾಂಶಗಳು ನಮ್ಮ ದೇಹ ಸೇರುತ್ತಿಲ್ಲವೆಂದರೆ ಕೋಪ-ತಾಪ ಹೆಚ್ಚುತ್ತೆ. ಆತಂಕ, ಸಂತೋಷಗಳನ್ನು ತಹಬದಿಗೆ ತಂದುಕೊಳ್ಳಲು ಹೆಣಗಾಡಬೇಕು. ಈ ಸಮಸ್ಯೆಯಿಂದ ದೂರವಾಗಲು ಸಾಧ್ಯವಾದಷ್ಟು ಈ ಆಹಾರ ಸೇವಿಸಿ....

  • ಆತಂಕ ದೂರ ಮಾಡಲು ಸೇಬು ಮತ್ತು ದಾಳಿಂಬೆ
  • ಶಾಂತ ಮನಸ್ಸಿಗೆ ಕಿತ್ತಲೆ
  • ಶಕ್ತಿ ಹೆಚ್ಚಿಸಲು ಬಾಳೆಹಣ್ಣು
  • ದುಃಖ ಕಡಿಮೆ ಮಾಡಲು ಸೊಪ್ಪು
  • ಸುಳ್ಳು ಹೇಳಬಾರದೆಂದರೆ ಕಪ್ಪು ದ್ರಾಕ್ಷಿ
  • ಕಣ್ಣಿನ ದೃಷ್ಟಿ ಹೆಚ್ಚಿಸಲು ಪ್ಲಮ್
click me!