ಬಾಳೆಲೆ ಊಟ ಮಾಡೋದ್ರಿಂದ ಏನೇನ್ ಲಾಭ?

By Web Desk  |  First Published Oct 19, 2018, 12:16 PM IST

ನೆಲದ ಮೇಲೆ ಕಾಲು ಕಟ್ಟಿ ಕೂತು, ಊಟ ಮಾಡೋ ಮಜಾನೇ ಬೇರೆ. ಈ ಬಾಳೆಲೆ ಊಟ ಮಾಡಿದ್ರೆ ಏನೆಲ್ಲಾ ಲಾಭವಿದೆ ಗೊತ್ತಾ?


ಮದುವೆ, ಮುಂಜಿ, ದೇವಸ್ಥಾನಗಳಲ್ಲಿ ಎಲೆ ಊಟ ಮಾಡುತ್ತೇವೆ. ಹಳ್ಳಿ ಮನೆಗಳಲ್ಲೇ ಎಲೆ ಊಟ ಮಾಡುವುದು ಕಡಿಮೆ. ಇನ್ನು ಸಿಟಿ ಕಥೆ ಬಿಡಿ. ಟಿವಿ ಮುಂದೆ ಕೂತು, ತಟ್ಟೇಲಿ ಅನ್ನ ಹಾಕ್ಕೊಂಡು, ಸ್ಪೂನ್‌ನಲ್ಲಿ ಊಟ ಮಾಡೋದು ಕಾಮನ್. 

ಒಣಗಿದ ಎಲೆ ಅಥವಾ ಹಸಿ ಎಲೆಯಲ್ಲಿ ತಿನ್ನುವುದು ಈಗ ಅಪರೂಪ. ಉತ್ತರ ಭಾರತದಲ್ಲಿಯಂತೂ ಬಾಳೆಲೆ ಇರೋಲ್ಲ. ಏನಿದ್ದರೂ ಬಾಳೆಲೆ ಊಟ ದಕ್ಷಿಣ ಭಾರತದ ಸ್ಪೆಷಲ್. 

Tap to resize

Latest Videos

ಈಗಿನ ಕಾಲದವರಿಗೆ ತಾತ- ಅಜ್ಜಿ ಮನೆ ಹಿತ್ತಲಲ್ಲಿ ಬೆಳೆದ ಬಾಳೆಗಿಡ, ಅದರೆ ಎಲೆಯಲ್ಲಿ ಊಟ ಮಾಡುವ ಮಜಾವೇ ಗೊತ್ತಿಲ್ಲ. ಆದರೆ, ಕಾಲು ಕಟ್ಟಿ ನೆಲದ ಮೇಲೆ ಕೂತು, ಎಲೆ ಮುಂದೆ ಕೂತು ಊಟ ಸವಿಯುವ ಮಜಾವೇ ಬೇರೆ. ದೇವರಿಗೂ ಬಾಳೆಲೆಯಲ್ಲಿ ನೇವೇಧ್ಯವನ್ನಿಟ್ಟರೆ ಶ್ರೇಷ್ಠ ಎನ್ನುವ ನಂಬಿಕೆ ಭಾರತೀಯರದ್ದು. ಇಂಥ ಬಾಳೆಲೆ ಊಟ ಮಾಡುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ ಗೊತ್ತಾ?

  • ಕೆಲವು ಅಡುಗೆಯನ್ನು ಎಲೆಯಲ್ಲಿ ಸುತ್ತಿ ಹಬೆಯಲ್ಲಿ ಬೇಯಿಸುತ್ತಾರೆ. ಅದರಲ್ಲಿ ವಿಟಮಿನ್ ಎ, ಕ್ಯಾಲ್ಸಿಯಮ್ ಮತ್ತು ಕಾರ್ಬೋನೇಟ್ ದೇಹಕ್ಕೆ ಹೆಚ್ಚಿಗೆ ದೊರೆಯುತ್ತದೆ.
  • ಹಲಸಿನ ಎಲೆಯಲ್ಲಿ ಫೈಟೊನ್ಯೂಟ್ರಿಎಂಟ್ ಇದ್ದು, ಇದರಲ್ಲಿ ಕಡುಬಿನಂಥ ತಿಂಡಿಯನ್ನು ಬೇಯಿಸಿದರೆ, ಕ್ಯಾನ್ಸರ್ ಮತ್ತು ಹೃದಯಿ ಸಂಬಂಧಿ ರೋಗ ನಿಯಂತ್ರಣಕ್ಕೆ ಬರುತ್ತದೆ. 
  • ಎಲೆಯಲ್ಲಿ ಬೇಯಿಸಿದ ಆಹಾರ ಆ್ಯಂಟಿ ಆಕ್ಸಿಡೆಂಟ್‌ನಂತೆ ಕಾರ್ಯ ನಿರ್ವಹಿಸುತ್ತದೆ. 
  • ಎಲೆಯಲ್ಲಿ ಊಟ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. 
  • ಎಲೆಯಲ್ಲಿ ಗ್ಲೂಕೋಸ್ ಇದ್ದು, ಆಹಾರದ ರುಚಿಯನ್ನೂ ಹೆಚ್ಚಿಸುತ್ತದೆ. 
  • ಹಸಿ ಕಮಲದ ಎಲೆಯಲ್ಲಿ ಅನ್ನ ಮಾಡುತ್ತಾರೆ. ಇದರಿಂದ ಅತಿಸಾರ ಕಡಿಮೆ ಮಾಡಿ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. 
click me!