ಪಮೇಲಾ ಆಂಡರ್‌ಸನ್ ಎಂಬ ಚೆಲುವೆ ಐದನೇ ಮದುವೆಯಾಗುತ್ತಿದ್ದಾಳೆ, ಪಕ್ಕದಲ್ಲಿ 23 ವರ್ಷ ವಯಸ್ಸಿನ ಮಗ. ಗಂಡನಾದವನು ಮೂವತ್ತೈದು ವರ್ಷಗಳಿಂದ ಪರಿಚಿತ. ಐದು ಮದುವೆಯಾಗಿದ್ದರೂ, ಈತ ನಾಲ್ಕನೇ ಗಂಡ. ಏನೀ ಚೆಲುವೆಯ ಜೀವನೋತ್ಸಾಹ?
ಪಮೇಲಾ ಆಂಡರ್‌ಸನ್ ಎಂಬ ಈ ಸದಾ ಚೆಲುವೆ, ಶಾಶ್ವತ ಯುವತಿಯ ಬದುಕು ದಂಗುಬಡಿಸುವಂತಿದೆ. ಇದೀಗ ತಾನೆ ಆಕೆ ತನ್ನ ಬದುಕಿನ ಐದನೇ ಮದುವೆಯಾದಳು. ಗಂಡನಾದವನು ಆಕೆಗೆ ಮೂವತ್ತೈದು ವರ್ಷಗಳಿಂದ ಪರಿಚಿತ ಹಾಗೂ ಸಂಗಾತಿ ಆಗಿದ್ದವನು. ಈತನೊ ಜೊತೆ ಮೂರು ದಶಕದ ಹಿಂದೆ ಡೇಟಿಂಗ್ ಮಾಡಿದ್ದೂ ಉಂಟು. ಇತ್ತ ಆಕೆಯ ಹೊಸ ಗಂಡ ಜಾನ್ ಪೀಟರ್ಸ್‌ಗೂ ನಾಲ್ಕಾರು ಮದುವೆಯಾಗಿದೆ. ಈ ಮದುವೆಗಳಿಂದ ಇಬ್ಬರಿಗೂ ಸಾಕಷ್ಟು ಮಕ್ಕಳೂ ಹುಟ್ಟಿದ್ದಾರೆ. ಮಕ್ಕಳಿಗೆ ಮದುವೆಯಾಗಿದ್ದರೆ ಈಗ ಮೊಮ್ಮಕ್ಕಳೂ ಇರುತ್ತಿದ್ದರು, ಯಾಕೆಂದರೆ ಪಮೇಲಾಳ ಮೊದಲ ಮಗನಿಗೆ ಈಗ 23ರ ಹರೆಯ.
ಅಮೆರಿಕದಲ್ಲಿ ಎರಡು ಮೂರು ಮದುವೆಯಾಗುವುದು ಹೊಸತೇನಲ್ಲ. ಇನ್ನು ಚಿತ್ರ ನಟಿಯರಿಗಂತೂ ಅದು ಅತ್ಯಂತ ಸಾಮಾನ್ಯ, ಪಮೇಲಾ ಆಂಡರ್‌ಸನ್, ಬೇವಾಚ್ ಎಂಬ ಮುಕ್ತ ಕಾಮದ ಅಭಿವ್ಯಕ್ತಿಯ ಟಿವಿ ಶೋದ ನಟಿ. ಅದರಿಂದ ಪ್ರಸಿದ್ಧಳಾದ ಈಕೆಯ ಬದುಕು ಅಮೆರಿಕದ ಮುಕ್ತ ಲೈಂಗಿಕ ಬದುಕಿನ ಪ್ರತಿನಿಧಿಯೇ ಎಂಬ ಹಾಗಿದೆ. ಪಮೇಲಾಗೆ ಈಗ 52 ವರ್ಷ. ಆದರೆ ಯಾರೂ ಆಕೆಗೆ ಅಷ್ಟೊಂದು ವರ್ಷಗಳಾದವು ಅನ್ನುವ ಹಾಗೆಯೇ ಇಲ್ಲ. ಬಿಕಿನಿ ಹಾಕಿದರೆ ಈಗಲೂ ಹದಿನೆಂಟರ ಹರೆಯದವಳು ಅನ್ನುವ ಹಾಗೇ ಬಾಡಿ ಮೇಂಟೇನ್ ಮಾಡಿದಾಳೆ. ಈಕೆಯ ಗಂಡನಾಗತ್ತಿರುವ ಜಾನ್ ಪೀಟರ್ಸ್‌ಗೆ 71 ವರ್ಷ. ಇಪ್ಪತ್ತು ವರ್ಷಗಳ ವಯಸ್ಸಿನ ಅಂತರ ಆಕೆಗೆ ಅಷ್ಟೊಂದು ಕಾಡದಂತೆ.
2.2 ಲಕ್ಷದ ಉಡುಗೆ ತೊಟ್ಟು ಕ್ರಿಸ್ಟಲ್ ಅವಾರ್ಡ್ ಸ್ವೀಕರಿಸಿ ದೀಪಿಕಾ
ಪಮೇಲಾಳ ಮದುವೆಗಳ ಬಗ್ಗೆ ನೋಡುವುದೇ ಕುತೂಹಲಕರ. ಈಕೆಯ ಮೊದಲ ಗಂಡ ಪಾಪ್ ಮ್ಯೂಸಿಕ್ ಡ್ರಮ್ಮರ್ ಟಾಮಿ ಲೀ. ಪರಿಚಯವಾಗಿ ನಾಲ್ಕೇ ದಿನಗಳಲ್ಲಿ ಇವರು ಮದುವೆಯಾಗಿದ್ದರು! ಮದುವೆಯಾಗಿ ಕೆಲವೇ ದಿನಗಳಲ್ಲಿ ಇವರಿಬ್ಬರ ಸೆಕ್ಸ್ ಟೇಪ್‌ಗಳು ಮಾಧ್ಯಮಗಳಿಗೆ ಸಿಕ್ಕಿ, ರಾದ್ಧಾಂತವಾಗಿತ್ತು. ಮೂರು ವರ್ಷ ಸಂಸಾರ ಮಾಡಿದ ಇವರಿಬ್ಬರಿಗೆ ಬ್ರಾಂಡನ್ ಮತ್ತು ಡಿಲಾನ್ ಎಂಬ ಇಬ್ಬರು ಮಕ್ಕಳು, ಟಾಮ್ ಲೀ, ಪಮೇಲಾಗೆ ಹೊಡೆಯುತ್ತಿದ್ದನಂತೆ. ಹೀಗಾಗಿ ಆತ ಜೈಲಿಗೆ ಹೋದ. ಮರಳಿ ಬಂದ ಮೇಲೆ ಪುನಃ ಈಕೆಯನ್ನು ಕೂಡಿದ. ಆದರೆ ಮತ್ತೆ ಹಿಂಸೆ. ಕಡೆಗೂ ಡೈವೋರ್ಸ್ ಆಯ್ತು.
ಈತನ ನಂತರ ಕಿಡ್ ರಾಕ್ ಎಂಬ ಮ್ಯೂಸಿಶಿಯನ್ ಈಕೆಗೆ ಜತೆಯಾದ. ಎರಡು ವರ್ಷ ಜತೆಯಾಗಿ ಬಾಳಿದ ಬಳಿಕ ಬೇರೆಯಾದರು. ಕೆಲ ವರ್ಷಗಳ ಬಳಿಕ ಮತ್ತೆ ಜತೆಯಾಗಿ, ಮದುವೆಯಾದರು. ಎರಡು ವರ್ಷ ಇವರ ಸಂಸಾರ ನಡೆಯಿತು. ಇದಾದ ಬಳಿಕ ಆಕೆಗೆ ಗರ್ಭಪಾತವಾಯಿತು. ಬಳಿಕ ಇಬ್ಬರೂ ಬೇರೆಯಾದರು. ಕಿಡ್ ರಾಕ್ ಬಳಿಕ ರಿಕ್ ಸಾಲೋಮನ್ ಎಂಬ ಫಿಲಂ ಪ್ರೊಡ್ಯೂಸರ್ ಜತೆ ಆಕೆಗೆ ಲವ್ ಉಂಟಾಯಿತು. ಮದುವೆಯಾದರು, ಕೆಲವೇ ದಿನಗಳಲ್ಲಿ ಬೇರೆಯೂ ಆದರು. ಇದೇ ಸಂದರ್ಭ ಆತನೊಮ್ಮೆ ತನ್ನನ್ನು ಕೊಲ್ಲು ಯತ್ನಿಸಿದ್ದ ಎಂದೂ ಆಕೆ ದೂರಿದಳು. ವಿಚ್ಛೇದನದ ಬಳಿಕವೂ ಇವರು ಆಗಾಗ ಜತೆಯಾಗಿ ಕಾಣಿಸಿಕೊಂಡದ್ದು ಉಂಟು. ಇದರ ನಡುವೆ, ಈಕೆಯ ಮೊದಲ ಗಂಡ ಟಾಮ್ ಲೀ ಮತ್ತೆ ಈಕೆಗೆ ಜತೆಯಾದ. ಮತ್ತೆ ಇಬ್ಬರೂ ಕೆಲಕಾಲ ಜತೆಯಾಗಿ ಬಾಳಿದರು. ನಂತರ ಎಂದಿನಂತೆ ಜಗಳ ಶುರುವಾಯಿತು. ಬೇರೆಬೇರೆಯಾದರು.
ನಮ್ಮ ಡಿವೋರ್ಸ್ ವಿಷ್ಯ ಮಕ್ಕಳಲ್ಲಿ ಹೇಳಿದ್ದು ಇನ್ನೂ ಕಾಡುತ್ತಿದೆ
ಹೀಗೆ ಪಮೇಲಾ ನಿಜಕ್ಕೂ ಎಷ್ಟು ಬಾರಿ ಮದುವೆಯಾಗಿದ್ದಾಳೆ ಎಂಬುದು ಆಕೆಗೂ ನೆನಪಿರಲಿಕ್ಕಿಲ್ಲ. ಆಕೆಯ ಬಳಿ ಮದುವೆ ಅಗ್ರಿಮೆಂಟ್‌ಗಳಿಗಿಂತಲೂ ಡೈವೋರ್ಸ್ ಪೇಪರ್‌ಗಳೇ ಹೆಚ್ಚು ಇದ್ದಂತಿವೆ. ಅದನ್ನೆಲ್ಲ ಹಿಂದಕ್ಕೆ ಬಿಟ್ಟು, ಆಕೆಯೀಗ ಹೊಸ ಹೆಜ್ಜೆ ಹಾಕಲು ಆರಂಭಿಸಿರುವ ಹಾಲಿವುಡ್‌ನ ಇನ್ನೊಬ್ಬ ಪ್ರೊಡ್ಯೂಸರ್ ಜಾನ್ ಪೀಟರ್ಸ್ ಜೊತೆಗೆ. ಮೊದಲು ಹೇರ್‌ಡ್ರೆಸ್ಸರ್ ಆಗಿದ್ದ ಈತ ಈಗ ಕೋಟ್ಯಧೀಶ. ಇಬ್ಬರೂ ದಶಕಗಳ ಹಿಂದೆ ಭೇಟಿಯಾದವರು, ಡೇಟಿಂಗ್ ಮಾಡಿದವರು. ಮದುವೆ ಎಂಬುದು ಫಾರ್ಮಲ್ ಆಚರಣೆ ಅಷ್ಟೇ.
ಪಮೇಲಾ ಐದನೇ ಮದುವೆಯಾಗುತ್ತಿರುವುದಕ್ಕೆ ಆಕೆಯ ಮಗ ಬ್ರಾಂಡನ್ ಲೀಗಂತೂ ಹರ್ಷವೇ ಇದೆ. ಆತ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಾನೆ. ತಾಯಿ ಖುಷಿಯಾಗಿರುವುದು ಅವನಿಗೆ ಇಷ್ಟ. ಹೊಸ ತಂದೆ ಜಾನ್, ತಾಯಿಯನ್ನು ಇನ್ನಷ್ಟು ಖುಷಿಯಾಗಿ ಇಟ್ಟುಕೊಳ್ಳಬಲ್ಲ ಎಂಬುದು ಅವನ ನಂಬಿಕೆಯಂತೆ.
ಐದಾರು ಮದುವೆ, ಐದಾರು ಗಂಡಂದಿರು, ದಾಂಪತ್ಯದ ಹಿಂಸೆ, ನೋವಿನ ಡೈವೋರ್ಸ್‌ಗಳು, ಹತ್ತಾರು ಗೆಳೆಯರು, ಮೈ ಮರೆಸುವ ಮ್ಯೂಸಿಕ್, ಮುಕ್ತ ಲೈಂಗಿಕತೆಯ ಟಿವಿ ಶೋಗಳು- ಹೀಗೆ ವರ್ಣರಂಜಿತ ಬದುಕು ಪಮೇಲಾ ಆಂಡರ್‌ಸನ್‌ಳದು. ಇಷ್ಟೆಲ್ಲದರ ನಡುವೆ ದೇಹವನ್ನು ಸೌಂದರ್ಯ ಕೆಡದಂತೆ ಬಿಗಿಯಾಗಿ ಕಾಪಿಟ್ಟುಕೊಂಡ ಈ ಚೆಲುವೆ ಈ ಬಗ್ಗೆ ಹೇಳುವುದು ಹೀಗೆ: ಎಂಥ ಸಂದರ್ಭದಲ್ಲೂ ಶಾಂತಿ, ನೆಮ್ಮದಿ ಕೆಡಿಸಿಕೊಳ್ಳದಿರುವುದು, ಒತ್ತಡ ಮಾಡಿಕೊಳ್ಳದಿರುವುದು ದೇಹಾರೋಗ್ಯ ಮತ್ತು ಸೌಂದರ್ಯ ಕಾಪಾಡಿಕೊಳ್ಳೋದಕ್ಕೆ ಮುಖ್ಯ.
ಜನವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ