ಬಿಯರ್, ವಿಸ್ಕಿ, ರಮ್ ಸೇರಿ ಮದ್ಯ ಸೇವಿಸುವಾಗ ಅಪ್ಪಿ ತಪ್ಪಿ ಈ ಐದು ಆಹಾರ ತಿನ್ನಬೇಡಿ

Published : Aug 15, 2026, 08:44 PM IST
Bourbon Whiskey

ಸಾರಾಂಶ

ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಮದ್ಯ ಸೇವಿಸುವಾಗ ಸೇವಿಸುವ ಆಹಾರದ ಕುರಿತು ಗಮನಹರಿಸಬೇಕು, ಬಾಯಿಗೆ ರುಚಿ, ಮದ್ಯದ ಕಿಕ್ ಎಂದು ವೈರಲ್ ಕಾಂಬಿನೇಷನ್ ಆಹಾರ ಸೇವಿಸಬೇಡಿ. ಈ ಐದು ಆಹಾರದಿಂದ ಸಮಸ್ಯೆಗಳೇ ಹೆಚ್ಚು.

ಮದ್ಯ ಸೇವಿಸುವಾಗ ಅದಕ್ಕೆ ತಕ್ಕಂತೆ ಸೈಡ್ ಡಿಶ್ ಬೇಕೆ ಬೇಕು. ಅದರಲ್ಲೂ ಚಿಕನ್ ಫ್ರೈ, ಕಬಾಬ್, ಚಿಪ್ಸ್, ಉಪ್ಪಿನಕಾಯಿ, ಕಡಲೇಕಾಯಿ ಸೇರಿದಂತೆ ಹಲವು ಸೈಡ್ಸ್ ಜನಪ್ರಿಯ ಕಾಂಬಿನೇಷನ್. ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರ. ಇದರ ಜೊತೆಗೆ ಕೆಲ ಆಹಾರಗಳು ಆರೋಗ್ಯವನ್ನು ಮತ್ತಷ್ಟು ಹಾಳುಮಾಡುತ್ತದೆ. ಹೀಗಾಗಿ ಮದ್ಯಸೇವನೆ ವೇಳೆ ನಿಮ್ಮ ಸೈಡ್ ಡಿಶ್ ಬಗ್ಗೆಯೂ ಗಮನಹರಿಸಬೇಕು. ಕೆಲ ಆಹಾರಗಳು ಆಲ್ಕೋಹಾಲ್ ಜೊತೆ ಸೇರಿದಂತೆ ಗಂಭೀರ ಪರಿಣಾಮ ಬೀರುತ್ತದೆ.

ಎಣ್ಣೆಯಲ್ಲಿ ಕರಿದ ತಿಂಡಿಗಳು

ಫ್ರೆಂಚ್ ಫ್ರೈಸ್, ಪಕೋಡಾ, ಚಿಕನ್ ಫ್ರೈ, ಚಿಕನ್ ಕಬಾಬ್ ಸೇರಿದಂತೆ ಎಣ್ಣೆಯಲ್ಲಿ ಕರಿದ ತಿನಿಸು ಮದ್ಯ ಸೇವನೆ ಜೊತೆ ಉತ್ತಮವಲ್ಲ. ಕರಿದ ತಿಂಡಿ ಹಾಗೂ ಆಲ್ಕೋಹಾಲ್ ಜೊತೆಯಾಗಿ ದೇಹ ಸೇರಿದಾಗ ಹೊಟ್ಟೆಯ ಒಳಪದರ ಕಿರಿದಾಗುತ್ತದೆ. ಆ್ಯಸಿಡ್ ರಿಫ್ಲೆಕ್ಸ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಎದೆಯುರಿ, ವಾಕರಿಕೆಗಳು ಕಾಣಿಸಿಕೊಳ್ಳುತ್ತದೆ.

ಉಪ್ಪು ಹೆಚ್ಚಿರುವ ತಿಂಡಿಗಳು

ಉಪ್ಪು ಹಾಕಿರುವ ಕಡಲೇಕಾಯಿ, ಚಿಪ್ಸ್, ಫ್ರೈಡ್ ಸ್ನಾಕ್ಸ್ ಸೇರಿದಂತೆ ಹಲವು ತಿನಿಸುಗಳು ಮದ್ಯದ ಜೊತೆ ಉತ್ತಮ ಕಾಂಬಿನೇಷನ್ ಎಂದು ಹಲವರು ಭಾವಿಸಿದ್ದಾರೆ. ಆದರೆ ಮದ್ಯ ದೇಹದಲ್ಲಿರುವ ನೀರು ಹೊರಹಾಕುತ್ತದೆ. ಇದರಿಂದ ಡಿಹೈಡ್ರೇಶನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಲ್ಕೋಹಾಲ್ ಹಾಗೂ ಉಪ್ಪಿನ ತಿಂಡಿಗಳು ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚು ಮಾಡಿ ಅಧಿಕ ರಕ್ತದೊತ್ತಡಕ್ಕೆ (ಬಿಪಿ) ಕಾರಣವಾಗುತ್ತದೆ.

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳಾದ ಚೀಸ್, ಪನ್ನೀರ್, ಬೆಣ್ಣೆಯ ತಿಂಡಿಗಳನ್ನು ಮದ್ಯದ ಜೊತೆ ಸೇವಿಸುವುದರಿಂದ ಜೀರ್ಣಕ್ರೀಯೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೊಟ್ಟೆ ಉಬ್ಬರ, ಗ್ಯಾಸ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಕಾಂಬಿನೇಷನ್ ದೀರ್ಘ ಕಾಲದ ಆರೋಗ್ಯ ಸಮಸ್ಯೆಗೆ ನಾಂದಿ ಹಾಡುತ್ತದೆ.

ಸಿಹಿ ತಿಂಡಿಗಳು

ಹಲವು ಮದ್ಯದ ಜೊತೆ ಸಿಹಿ ತಿಂಡಿ ತಿಂದರೆ ಕಿಕ್ ಜಾಸ್ತಿ ಎನ್ನುತ್ತಾರೆ. ಆದರೆ ಅಸಲಿಗೆ ಇದು ಅತ್ಯಂತ ಅಪಾಯಕಾರಿ. ಮದ್ಯ ಹಾಗೂ ಸಿಹಿ ತಿಂಡಿಯಲ್ಲಿನ ಸಕ್ಕರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ತಕ್ಷಣಕ್ಕೆ ಹೆಚ್ಚಿಸುತ್ತದೆ. ಇದರಿಂದ ಲಿವರ್ ಮೇಲಿನ ಒತ್ತಡ ಹೆಚ್ಚಿಸುತ್ತದೆ. ಇಷ್ಟೇ ಅಲ್ಲ ಶುಗರ್ ಪ್ರಮಾಣ ಅಧಿಕ ಮಾಡಲಿದೆ ಅಥವಾ ಏರುಪೇರು ಮಾಡಲಿದೆ. ಮರು ದಿನ ಹ್ಯಾಂಗೋವರ್ ಹೆಚ್ಚಿರುತ್ತೆ.

ಚಾಕೋಲೇಟ್

ಮದ್ಯದ ಜೊತೆ ಅಥವಾ ಬಳಿಕ ಚಾಕೋಲೇಟ್ ಉತ್ತಮವಲ್ಲ. ಕೆಫಿನ್, ಕೊಕೋಸ ಕೊಬ್ಬಿನಾಂಶ ಹೆಚ್ಚಿರುವ ಚಾಕೋಲೇಟ್ ಹೊಟ್ಟೆಯೊಳಗೆ ಸೇರಿದಾಗ ಜೀರ್ಣಾಂಗವ್ಯೂಹದ ಮೇಲೆ ಪರಿಣಾಮ ಬೀರುತ್ತದೆ. ಆ್ಯಸಿಡಿಟಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ವಿಶೇಷ ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಆರೋಗ್ಯದ ಕುರಿತು ಕಾಳಜಿ ಹಾಗೂ ಮುಂಬರುವ ಅಪಾಯದ ಕುರಿತು ತಿಳಿಸಲು ಈ ಲೇಖನ ನೀಡಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

6 ಮೊಟ್ಟೆಗಳಲ್ಲಿ 2 ಒಡೆದು, 2 ಫ್ರೈ ಮಾಡಿ, 2 ತಿಂದರೆ ಉಳಿಯುವುದೆಷ್ಟು? 90% ಜನರು ಈ ಲೆಕ್ಕದಲ್ಲಿ ಫೇಲ್!
ನಾಯಿಗಳು ಟೈರ್, ಕಂಬ, ಗೋಡೆ ಮೇಲೆಯೇ ಮೂತ್ರ ಮಾಡೋದು ಯಾಕೆ? ಇಲ್ಲಿದೆ ಅಸಲಿ ಕಾರಣ