ನಿಮ್ಮನ್ನು ಆಗಾಗ ಕಾಡೋ ತಲೆನೋವಿಗೆ ಏಸಿ ಆಗಬಹುದು ಕಾರಣ!

Published : Jun 25, 2018, 04:37 PM IST
ನಿಮ್ಮನ್ನು ಆಗಾಗ ಕಾಡೋ ತಲೆನೋವಿಗೆ ಏಸಿ ಆಗಬಹುದು ಕಾರಣ!

ಸಾರಾಂಶ

ಉರಿ ಉರಿ ಬಿಸಿಲಲ್ಲೂ ನಮ್ಮನ್ನು ತಂಪಾಗಿ ಇಡುವ ಏಸಿ, ನಮ್ಮ ದೇಹದ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ. ತಲೆನೋವು, ಅಲರ್ಜಿ...ಸಣ್ಣ ಪುಟ್ಟ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುವ ಈ ಹವಾ ನಿಯಂತ್ರಿತ ಯಂತ್ರ ದೇಹದ ಮೇಲೆ ಪರಿಣಾಮ ಬೀರುವುದರೊಂದಿಗೆ, ಮಾನಸಿಕವಾಗಿಯೂ ನಮ್ಮನ್ನು ಕುಂದಿಸುತ್ತದೆ.

ಈ ಕೂಲ್ ಮಷಿನ್ ನಮ್ಮ ಮೇಲೆ ಬೀರುವ ಪರಿಣಾಮಗಳೇನು ಗೊತ್ತಾ?

  • ಡ್ರೈ ಕಣ್ಣು: ಕಣ್ಣು ಉರಿ ಮತ್ತು ನವೆ ತರಿಸುತ್ತದೆ.
  • ನಿರ್ಜಲೀಕರಣ.  ಎಸಿ ರೂಮಿನಲ್ಲಿ ನೀರು ಕುಡಿಯುವುದು ಕಡಿಮೆಯಾದರೆ, ಡೀಹೈಡ್ರೇಷನ್ ಸಮಸ್ಯೆ ಎದುರಿಸಬೇಕಾಗುತ್ತದೆ. 
  • ಉಸಿರಾಟದ ತೊಂದರೆಯೊಂದಿಗೆ ಗಂಟಲು ಒಣಗುವುದು, ಮೂಗು ಕಟ್ಟುವುದು ಹಾಗೂ ಮೂಗು ಉರಿ ಅಥವಾ ಊದಿಕೊಳ್ಳುತ್ತದೆ.
  • ಆಸ್ತಮಾ ಮತ್ತು ಅಲರ್ಜಿ: ಶುದ್ಧ ಹಾಗೂ ನೈಸರ್ಗಿಕ ಗಾಳಿಯೇ ಇಲ್ಲದೇ, ಬರೀ ಏಸಿ ಕೆಳಗೆ ಕುಳಿತು ಕೆಲಸ ಮಾಡುವುದರಿಂದ ಅಸ್ತಾಮ, ಅಲರ್ಜಿಯಂಥ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.
  • ತಲೆ ನೋವು: ಡೀಹೈಡ್ರೇಷನ್‌ನಿಂದ ತಲೆ ನೋವು, ಮೈಗ್ರೇನ್ ಕಾಡುವುದು ಗ್ಯಾರಂಟಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಮ್ಮ ಹೊಸ ಮನೆಗೆ ಪೇಂಟ್ ಮಾಡುವಾಗ ಈ 7 ತಪ್ಪು ಮಾಡಬೇಡಿ!
ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!