ಸದಾ ಕೈಯಲ್ಲಿರೋ ಮೊಬೈಲ್, ಸಾರ್ವಜನಿಕರ ಶೌಚಾಲಯ ಕೊಳಕು ಎನ್ನುವವರಿಗೆ ಎಟಿಎಂ ಯಂತ್ರದಲ್ಲಿ ಇವೆಲ್ಲಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾ ಇರುತ್ತವೆ ಎಂಬ ಆಘಾತಕಾರಿ ಅಂಶವೊಂದನ್ನು ಸಂಶೋಧನೆಯೊಂದು ದೃಢಪಡಿಸಿದೆ.
ಪಬ್ಲಿಕ್ ಟಾಯ್ಲೆಟ್ ಕಂಡರೆ ಸಾಕು ಛೀ!!! ಕೊಳಕು ವಾಸನೆ ಎಂದು ಬಳಸುವುದನ್ನೇ ಅವೈಯ್ಡ್ ಮಾಡುತ್ತೇವೆ. ಆದರೆ, ಎಟಿಎಂ ಬಗ್ಗೆ ಅಂತ ಯಾವುದೇ ಕೊಳಕು ಭಾವನೆ ಇಲ್ಲದೇ ಹಣ ಬೇಕೆಂದಾಗ ಬಳಸುತ್ತೇವೆ. ಸಾರ್ವಜನಿಕ ಶೌಚಾಲಯಕ್ಕಿಂತಲೂ ಎಟಿಎಂ ಕೊಳಕೆಂಬ ಆಘಾತಕಾರಿ ಅಂಶವೊಂದು ಇದೀಗ ಬೆಳಕಿಗೆ ಬಂದಿದೆ!
undefined
ಇದನ್ನು ಕೇಳಿದಾಕ್ಷಣ ಒಮ್ಮೆ ಆಶ್ಚರ್ಯ ಆಗುವುದು ಗ್ಯಾರಂಟಿ. ಹಣ ವಿತ್ ಡ್ರಾ ಮಾಡುವ ಜೊತೆ ಬ್ಯಾಕ್ಟೀರಿಯಾವನ್ನೂ ವಿತ್ ಡ್ರಾ ಮಾಡುತ್ತೀವಿ. ಇಂಗ್ಲೆಂಡ್ ಸಂಶೋಧಕರು ಎಟಿಎಂ ನ್ಯೂಮರಿಕಲ್ ಪ್ಯಾಡ್ ಹಾಗೂ ಪಬ್ಲಿಕ್ ಟಾಯ್ಲೆಟ್ ಸೀಟ್ ಎರಡರ ಅಧ್ಯಯನ ನಡಿಸಿದ್ದಾರೆ. ಇದರಲ್ಲಿ pseudomonads ಹಾಗೂ bacillus ಬ್ಯಾಕ್ಟೀರಿಯಾ ಇರುವುದು ಬೆಳಕಿಗೆ ಬಂದಿದೆ. ಈ ಎರಡೂ ಬ್ಯಾಕ್ಟೀರಿಯಾಗಳು ಜ್ವರ ಹಾಗೂ ಅತಿಸಾರ ಭೇದಿ ತರಿಸುತ್ತವೆ.
ನೈಟ್ ಶಿಫ್ಟ್ ತರುತ್ತೆ ಆರೋಗ್ಯಕ್ಕೆ ಕುತ್ತು...
ಅಷ್ಟೇ ಅಲ್ಲದೆ ಪಬ್ಲಿಕ್ ಟೆಲಿಫೋನ್‌ಗಳಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ತಿಳಿದುಕೊಳ್ಳಲು 3000 ಜನರನ್ನು ಬಳಸಿಕೊಳ್ಳಲಾಗಿತ್ತು. ಜನರು ಫೋನನ್ನು ಮೂಗು ಹಾಗೂ ಬಾಯಿ ಹತ್ತಿರ ಇಟ್ಟಿಕೊಂಡು ಮಾತಾನಾಡುವ ಕಾರಣದಿಂದಲೂ ಬ್ಯಾಕ್ಟೀರಿಯಾ ಹೆಚ್ಚುತ್ತದೆ. ಇದು ಅನೇಕ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ, ಎಂದು ಸಂಶೋಧನೆ ದೃಢಪಡಿಸಿದೆ