ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡು ಬಂದರೂ ಸಿಟಿ ಸ್ಕ್ಯಾನ್ ಮಾಡಿಸುವಂತೆ ವೈದ್ಯರು ಹೇಳುತ್ತಾರೆ. ಇದೊಂದು ರೀತಿ ಫ್ಯಾಷನ್ ಆಗಿ ಬಿಟ್ಟಿದೆ ಈಗೀಗ. ಅಷ್ಟಕ್ಕೂ ಗರ್ಭಿಣಿ ಈ ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದಾ?
ಜೀವಕ್ಕೆ ಹೆದರಿ ವೈದ್ಯರು ಹೇಳುತ್ತಿದ್ದಾರೆಂದು ಹಿಂದೂ ಮುಂದು ನೋಡದೇ, ಕಾರಣ ತಿಳಿಯದೇ ಸಿಟಿ ಸ್ಕ್ಯಾನ್‌ಗೆ ಮುಂದಾಗುತ್ತೇವೆ. ತಪ್ಪೊ ಸರಿನೋ ಗೊತ್ತಾಗುವುದಿಲ್ಲ ಎಂದರೆ ಇಲ್ಲಿದೆ ನೋಡಿ.....
ಸಿಟಿ ಸ್ಕ್ಯಾನ್ ದೇಹದ ಒಳ ಭಾಗವನ್ನು ಸಂಪೂರ್ಣವಾಗಿ ವಿಶ್ಲೇಷಿಸುತ್ತದೆ. ಕಂಪ್ಯೂಟರ್ ಟೊಮೊಗ್ರಾಫ್ (ಸಿಟಿ) ಎನ್ನುವ ಈ ದೇಹ ಪರೀಕ್ಷೆಯಲ್ಲಿ ಎಲ್ಲಿಯೋ ಅಡಗಿ ಕುಳಿತಿರುವ ಅನಾರೋಗ್ಯವನ್ನೂ ಕಂಡು ಹಿಡಿಯಬಹುದು. ಇದರಲ್ಲಿ ರೊಟೇಟಿಂಗ್ ಎಕ್ಸ್-ರೇ ಮಷೀನ್ ಬಳಸಲಾಗುತ್ತದೆ. ಯಾವುದೇ ರೀತಿ ನೋವಾಗದಂಥ ಸುಲಭ ಮಾರ್ಗ ಹಾಗೂ ಕಡಿಮೆ ವೆಚ್ಚದಲ್ಲಿ ದೇಹದ ನ್ಯೂನತೆಯನ್ನು ಕಂಡು ಹಿಡಿಯಬಹುದು.
ಈ ಪರೀಕ್ಷೆಗೊಳಪಟ್ಟಾಗ ರೋಗಿಯ ಮುಖ ಭಾಗ ಮಾತ್ರ ಹೊರಗಿರುತ್ತದೆ. ದೇಹ ಪೂರ್ತಿ ಯಂತ್ರದೊಳಗಿರುತ್ತದೆ. ಇದರಲ್ಲಿರುವ ಎಕ್ಸ್- ರೇ ಟ್ಯೂಬ್ ದೇಹವನ್ನು ಸುತ್ತುತ್ತಿರುತ್ತದೆ. ಇದರಲ್ಲಿ ದೇಹದ ಭಾಗಗಳು 2ಡಿ ಚಿತ್ರದಂತೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಯಾವುದೇ ನ್ಯೂನತೆ ಇದ್ದರೂ, ಸ್ಪಷ್ಟವಾಗಿ ಗೋಚರಿಸುತ್ತದೆ.
undefined
ಗರ್ಭದಲ್ಲಿ ಗಾಳಕ್ಕೆ ಸಿಕ್ಕ ಮೀನಂತೆ ಮಗು ಮಿಸುಗಾಡುವುದೇಕೆ?
ಸಣ್ಣ ತೊಂದರೆ ಇದ್ದರೂ ಸಿಟಿ ಸ್ಕ್ಯಾನ್ ಮೂಲಕ ಪತ್ತೆ ಹಚ್ಚಬಹುದು. ಆದರೆ ಕೆಲವರಿಗೆ ಇದರ ರೇಡಿಯೇಷನ್‌ನಿಂದ ಚರ್ಮ ರೋಗ ಬರಬಹುದು. ಅದೂ ಅದೇ ರೇಡಿಯೇಷನ್‌ನಿಂದ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೂ ಹಾನಿಯಾಗಬಹುದು. ಹಾಗಾಗಿ ಮಗುವಿರುವ ಭಾಗದಲ್ಲಿ ಈ ಪರೀಕ್ಷೆಗೆ ಒಳಪಡದೇ ಹೋದರೆ ಒಳಿತು.