ಅಣಬೆ ಒಂದು ಬಗೆಯ ಶಿಲೀಂಧ್ರ. ಮಾಂಸಾಹಾರವೆಂದು ಪರಿಗಣಿಸುವ ಬಹುತೇಕರು ಇದನ್ನು ಸೇವಿಸುವುದೇ ಇಲ್ಲ. ಹಾಗಂತ ಎಲ್ಲ ಅಣಬೆಯೂ ಇದೇ ವರ್ಗಕ್ಕೆ ಸೇರುವುದಿಲ್ಲ. ಅದೂ ಅಲ್ಲದೇ ಕಡಿಮೆ ಕಾರ್ಬೊಹೈಡ್ರೇಟ್ ಮತ್ತು ನಾರಿನಂಶವಿರುವ ಅಣಬೆ ತಿಂದರೆ ಬೊಜ್ಜು ಕರಗಿಸಿಕೊಳ್ಳುವುದೂ ಸುಲಭ. ಇನ್ನೇನಿವೆ ಇದರ ಉಪಯೋಗಳು...
ಅಣಬೆಯ ಹಣೆಬರಹ ತಿಳಿದುಕೊಳ್ಳುವುದು ಹೇಗೆ?
ಅಣಬೆ ಒಂದು ಬಗೆಯ ಶಿಲೀಂಧ್ರ. ಮಾಂಸಾಹಾರವೆಂದು ಪರಿಗಣಿಸುವ ಬಹುತೇಕರು ಇದನ್ನು ಸೇವಿಸುವುದೇ ಇಲ್ಲ. ಹಾಗಂತ ಎಲ್ಲ ಅಣಬೆಯೂ ಇದೇ ವರ್ಗಕ್ಕೆ ಸೇರುವುದಿಲ್ಲ. ಅದೂ ಅಲ್ಲದೇ ಕಡಿಮೆ ಕಾರ್ಬೊಹೈಡ್ರೇಟ್ ಮತ್ತು ನಾರಿನಂಶವಿರುವ ಅಣಬೆ ತಿಂದರೆ ಬೊಜ್ಜು ಕರಗಿಸಿಕೊಳ್ಳುವುದೂ ಸುಲಭ. ಇನ್ನೇನಿವೆ ಇದರ ಉಪಯೋಗಳು...
- ಪ್ರತಿದಿನ ಅಣಬೆ ತಿನ್ನುವುದರಿಂದ ಶೇ.64ರಷ್ಟು ಸ್ತನ ಕ್ಯಾನ್ಸರ್ ತಡೆಯಬಹುದು.
- ಇದರಲ್ಲಿ ಅತಿ ಹೆಚ್ಚು ವಿಟಮಿನ್ ಬಿ2 ಮತ್ತು ಬಿ3 ಇರುವುದರಿಂದ ದೇಹಕ್ಕೆ ಅಗತ್ಯ ಶಕ್ತಿ ನಿಡುತ್ತದೆ.
- ಅಣಬೆಯಲ್ಲಿ ವಿಟಮಿನ್ ಡಿ ಹೆಚ್ಚಿದ್ದು, ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ ಇದೆ. ರಕ್ತ ಹೀನತೆ ಹಾಗೂ ರಕ್ತದೊತ್ತಡ ನಿವಾರಣೆಗೆ ಅಗತ್ಯವಾದ ಪೊಟಾಷಿಯಂ ಇದರಲ್ಲಿದೆ.
ಎಂಥ ಅಣಬೆ ಕೊಳ್ಳಬೇಕು?
- ಅಣಬೆ ಕೊಳ್ಳುವಾಗ ಫ್ರೆಶ್ ಆಗಿರುವುದನ್ನು ಆರಿಸಿಕೊಳ್ಳಿ. ಯಾವುದೆ ರೀತಿಯಲ್ಲಿಯೂ ಡ್ಯಾಮೇಜ್ ಆದ, ಕೊಳೆತ ಅಣೆಬೆಯನ್ನು ಕೊಳ್ಳಬೇಡಿ. ಕತ್ತರಿಸಿದ ಅಣಬೆ ಸಿಗುವುದಿಲ್ಲ. ಅಂಥದ್ದು ಕಂಡರೆ ಮುಟ್ಟಲಿಕ್ಕೂ ಹೋಗಬೇಡಿ.
- ಪ್ಯಾರಸಾಲ್ ( ಚತ್ತರಿ ಆಕಾರ) ಅಣಬೆಯ ಸುತ್ತ ಬಿಳಿ ಗೆರೆ ವಿಷಕಾರಿ ಅಂಶ ಹೊಂದಿರುತ್ತದೆ. ಬೆಳೆಯುವಾಗ ಅದು ಕಂದು ಬಣ್ಣಕ್ಕೆ ಬದಲಾಗುತ್ತೆ. ಈ ಬಗ್ಗೆ ಗಮನಿಸಿ.
- ವಿಚಿತ್ರ ಆಕಾರ ಮತ್ತು ಸುಕ್ಕುಗಟ್ಟಿರುವ ಅಣಬೆಯಿಂದ ದೂರವಿರಿ.
-ಜ್ಯಾಕ್ ಒ ಲ್ಯಾನ್ ಮತ್ತು ಕಂದು ಬಣ್ಣದ ಅಣಬೆಯಲ್ಲಿ ವಿಷಕಾರಿ ಅಂಶವಿರುವ ಸಾಧ್ಯತೆ ಇದೆ ಎಂಬುವುದು ನೆನಪಿರಲಿ.