
ಬೆಂಗಳೂರು(ಮೇ.26): ಕುಂಬಳಕಾಯಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಕಹಿ ಕುಂಬಳಕಾಯಿ ಅಂದ್ರೆ ಯಾರಿಗೆ ತಾನೆ ಇಷ್ಟ ಆಗುತ್ತೆ ಹೇಳಿ. ಆದರೆ ಕಹಿ ಕುಂಬಳಕಾಯಿಂದ ಮಾಡುವ ವಿವಿಧ ಪ್ರಕಾರದ ಖಾದ್ಯಗಳಿಂದ ದೂರ ಇರುವಂತೆ ನೂತನ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ.
ಹೌದು ಕಹಿ ಕುಂಬಳಕಾಯಿ ಖಾದ್ಯ ಸೇವಿಸಿ ಇಬ್ಬರು ಮಹಿಳೆಯರು ತಮ್ಮ ಕೂದಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಫ್ರಾನ್ಸ್ ನಲ್ಲಿ ಓರ್ವ ಮಹಿಳೆ ಕಹಿ ಕುಂಬಳಕಾಯಿಯ ಜ್ಯೂಸ್ ಸೇವಿಸಿದ್ದರ ಪರಿಣಾಮ ಕೆಲವೇ ದಿನಗಳಲ್ಲಿ ತಮ್ಮ ಕೂದಲ್ನ್ನು ಕಳೆದುಕೊಂಡಿದ್ದಾರಂತೆ.
ಕುಂಬಳಕಾಯಿಯಲ್ಲಿ ಕುಕುರ್ ಬಿಟಾಸಿನ್ ಎಂಬ ಟಾಕ್ಸಿನ್ ನಿಂದ ಕಹಿ ಉತ್ಪಾದನೆಯಾಗುತ್ತದೆ. ಇದನ್ನು ಸೇವಿಸುವುದರಿಂದ ಕೂದಲು ಊದುರುವಿಕೆ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.