ಫೇಸ್ಬುಕ್ ನಲ್ಲಿ ಸಿಕ್ಕ ಗೆಳತಿ ಗಿಟಾರ್ ನೀಡಿದ್ಲು. ಹಾಡಿಗೆ ಪ್ರೋತ್ಸಾಹ ನೀಡಿದ್ಲು. ಕೂಲಿ ಕೆಲಸ ಮಾಡ್ತಾನೆ ಹಾಡಿನ ವಿಡಿಯೋ ಮಾಡಿದ ಹುಡುಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ. ಎಲ್ಲರ ಮನಸ್ಸು ಗೆದ್ದ. ಆತನ ಸಕ್ಸಸ್ ಸ್ಟೋರಿ ಇಲ್ಲಿದೆ.
ಸಾಮಾಜಿಕ ಜಾಲತಾಣಗಳು ಮೂಲೆ ಮೂಲೆಯಲ್ಲಿರುವ ಜನರ ಪ್ರತಿಭೆಯನ್ನು ಹೊರತರಲು ನೆರವಾಗ್ತಿವೆ. ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಜನರು ತಮ್ಮ ಕಲೆಯನ್ನು ಹಂಚಿಕೊಳ್ತಿದ್ದಾರೆ. ಈ ಮೂಲಕ ರಾತ್ರೋರಾತ್ರಿ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಇದ್ರಲ್ಲಿ ಅಮರಜೀತ್ ಜೈಕರ್ ಕೂಡ ಒಬ್ಬರು. ಪ್ರೀತಿ (Love) ಹುಡುಗ್ರ ದಾರಿ ತಪ್ಪಿಸುತ್ತದೆ ಎನ್ನುವ ಮಾತಿದೆ. ಪ್ರೀತಿಗೆ ಬಿದ್ದವರು ಕೆಲಸ ಬಿಟ್ಟು, ಹುಡುಗಿ ಹಿಂದೆ ಅಲೆಯುತ್ತಾರೆ, ಜೀವನದಲ್ಲಿ ಸಕ್ಸಸ್ (Success) ಕಾಣೋದು ಅಪರೂಪ ಎನ್ನಲಾಗುತ್ತದೆ. ಆದ್ರೆ ಕೆಲ ಯಶಸ್ವಿ ಪುರುಷರ ಹಿಂದೆ ಮಹಿಳೆಯಿದ್ದಾಳೆ. ಅಮರಜೀತ್ ಜೈಕರ್ (Amarjeet Jaiker ) ಪ್ರಸಿದ್ಧಿಗೂ ಕಾರಣವಾಗಿದ್ದು ಆತನ ಗರ್ಲ್ ಫ್ರೆಂಡ್. ಬಾಲಿವುಡ್ ಸ್ಟಾರ್ ಗಳಿಗೆ ಇಷ್ಟವಾಗಿರುವ ಅಮರಜೀತ್ ಜೈಕರ್ ನಲ್ಲಿ ಏನು ವಿಶೇಷವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
ಯಾರು ಅಮರಜೀತ್ ಜೈಕರ್ ? : ಅಮರಜೀತ್ ಜೈಕರ್ ಬಿಹಾರ (Bihar) ದ ಸಮಸ್ತಿಪುರದ ನಿವಾಸಿ. 22 ವರ್ಷದ ಅಮರಜೀತ್, ಮಧುರ ಧ್ವನಿಯುಳ್ಳ ಹುಡುಗ. ಬಡ ಕುಟುಂಬದಿಂದ ಬಂದವನು. ಅಮ್ಮ- ಅಪ್ಪ, ತಮ್ಮ – ತಂಗಿ ಹಾಗೂ ಅಜ್ಜ – ಅಜ್ಜಿ ಜೊತೆ ವಾಸವಾಗಿದ್ದಾರೆ ಅಮರಜೀತ್ ಜೈಕರ್. ಸಮಸ್ತಿಪುರದಲ್ಲಿ ಅಮರ್ಜೀತ್ ತಂದೆ ಅಂಗಡಿ ನಡೆಸುತ್ತಿದ್ದಾರೆ. ಅವರು ಸಲೂನ್ (Salon) ನಲ್ಲಿ ಕೆಲಸ ಮಾಡ್ತಿದ್ದು, ಮಗನ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ. ಆರಂಭದಲ್ಲಿ ಅಮರಜೀತ್ ಜೈಕರ್, ಶ್ರೀಮಂತರ ಮನೆಯಲ್ಲಿ ವೇಟರ್ ಕೆಲಸ ಮಾಡ್ತಿದ್ದ. ಆತ 200 – 250 ರೂಪಾಯಿ ಸಂಪಾದನೆ ಮಾಡ್ತಿದ್ದ.
ಪ್ರೇರಣೆಯಾದಳು ಗೆಳತಿ : ಅಮರಜೀತ್ ಜೈಕರ್ ಹಾಡನ್ನು ಕೇಳಿದ ಆತನ ಗರ್ಲ್ ಫ್ರೆಂಡ್ ಅಮರಜೀತ್ ಜೈಕರ್ ಕಲೆಗೆ ಪ್ರೋತ್ಸಾಹ ನೀಡಿದ್ದಳು. ಫೇಸ್ ಬುಕ್ ನಲ್ಲಿ ಸ್ನೇಹಿತೆಯಾದಾಕೆ ವಿಡಿಯೋ ಮಾಡುವಂತೆ ಆತನನ್ನು ಒತ್ತಾಯಿಸಿದ್ದಳಂತೆ. ಆತನಿಗೆ ಗಿಟಾರ್ ಖರೀದಿಸಿ ನೀಡಿದ್ದಳಂತೆ. ಖಿನ್ನತೆಗೆ ಒಳಗಾಗಿದ್ದಾಗ ಅಮರಜೀತ್ ಜೈಕರ್ ಗೆ ಧೈರ್ಯ ತುಂಬಿದ್ದ ಗೆಳತಿ, ಈಗ ಅಮರಜೀತ್ ಜೈಕರ್ ಸಕ್ಸಸ್ ಹಿಂದಿದ್ದಾಳೆ. ಅಮರಜೀತ್ ಜೈಕರ್ ಈಗ ಗೆಳತಿ ನೀಡಿದ್ದ ಗಿಟಾರ್ ನಲ್ಲಿಯೇ ತರಬೇತಿ ಪಡೆಯುತ್ತಿದ್ದಾನೆ.
ಕೆಟ್ಟು ನಿಂತ ಲಿಫ್ಟ್, ತಮ್ಮದೇ ಆರತಕ್ಷತೆ ಮಿಸ್ ಮಾಡ್ಕೊಂಡ NRI ಜೋಡಿ
ವೈರಲ್ ಆಯ್ತು ವಿಡಿಯೋ : ಹಾಡುಗಳನ್ನು ಹಾಡಿ ವಿಡಿಯೋ ಮಾಡಿದ ಅಮರಜೀತ್ ಜೈಕರ್, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾನೆ. ಕೆಲಸ ಮಾಡ್ತಾ ಅಮರಜೀತ್ ಹಾಡನ್ನು ಹಾಡ್ತಿರುತ್ತಾನೆ. ಆರಂಭದಲ್ಲಿ ಕಷ್ಟವಾದ್ರೂ ಈಗ ಜನರು ಕಲೆಯನ್ನು ಮೆಚ್ಚಿಕೊಂಡಿದ್ದಾರೆ. ಅಮರಜೀತ್ ನ ದಿಲ್ ದೇ ದಿಯಾ ಹೈ ಹಾಡನ್ನು ಸಾಮಾಜಿಕ ಬಳಕೆದಾರರು ಇಷ್ಟಪಟ್ಟಿದ್ದಾರೆ. ಅಮರಜೀತ್ ಬಾಲಿವುಡ್ ನ ಅನೇಕ ಟ್ರ್ಯಾಕ್‌ಗಳನ್ನು ಹಾಡಿದ್ದಾನೆ.
ಅಮರಜೀತ್ ವಿಡಿಯೋ ಹಂಚಿಕೊಂಡ ಬಾಲಿವುಡ್ ಸ್ಟಾರ್ಸ್ : ಸಾಮಾನ್ಯರು ಮಾತ್ರವಲ್ಲ ಬಾಲಿವುಡ್ ಸ್ಟಾರ್ಸ್ ಕೂಡ ಅಮರಜೀತ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮನಸ್ಸಿಗೆ ಮುದ ನೀಡುವ ಅಮರಜೀತ್ ಧ್ವನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿತು ಚಂದ್ರ ಮತ್ತು ಸೋನು ಸೂದ್ ಜೊತೆ ಅವನೀಶ್ ಶರಣ್ ಅವರಂತಹ ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ಕೂಡ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ನಿರ್ದೇಶಕ ವಿನೋದ್ ಕಪ್ರಿ ಕೂಡ ಅಮರಜೀತ್ ಕ್ಲಿಪ್ ಇಷ್ಟಪಟ್ಟಿದ್ದಾರೆ. 2020 ರ ಚಲನಚಿತ್ರ ಹಾಫ್ ಗರ್ಲ್‌ಫ್ರೆಂಡ್ ನ ಫಿರ್ ಭಿ ತುಮ್ಕೋ ಚಾಹುಂಗಾ ಹಾಡಿರುವ ಅಮರಜೀತ್‌ನ ಕ್ಲಿಪ್ ಗಳನ್ನು ವಿನೋದ್ ಕಪ್ರಿ ಲೈಕ್ ಮಾಡಿದ್ದಾರೆ.
ವಿಶ್ವದ ಅತ್ಯಂತ ದುಬಾರಿ ತರಕಾರಿಯಿದು, ಈ ಬೆಲೆಗೆ ಕಾಸ್ಟ್ಲೀ ಬೈಕನ್ನೇ ಖರೀದಿಸ್ಬೋದು!
ಅಮರಜೀತ್ ಮುಂದಿದೆ ದೊಡ್ಡ ಕನಸು : ಅಮರಜೀತ್ ಬರೀ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕ್ತಾ ಪ್ರಸಿದ್ಧಿ ಪಡೆಯುವ ಉದ್ದೇಶ ಹೊಂದಿಲ್ಲ. ಉತ್ತಮ ಸಿಂಗರ್ ಆಗುವ ಆಸೆ ಹೊಂದಿದ್ದಾನೆ. ಆತ ಇಂಡಿಯನ್ ಐಡಲ್ ನಲ್ಲಿ ಪಾಲ್ಗೊಳ್ಳುವ ಇಚ್ಛೆ ಹೊಂದಿದ್ದಾನೆ.