ಒಂದೇ ಬಾರಿಗೆ 3-4 ಬರ್ಗರ್ ತಿನ್ನುತ್ತಿದ್ದ ಖ್ಯಾತ ಗಾಯಕ; ತಮ್ಮ ತೂಕ ಇಳಿಕೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಅದ್ನಾನ್ ಸಾಮಿ

Published : Nov 08, 2026, 08:44 PM IST
Adnan Sami recalls eating 3-4 Big Macs in one sitting

ಸಾರಾಂಶ

ಖ್ಯಾತ ಗಾಯಕ ಅದ್ನಾನ್ ಸಾಮಿ ಅವರು ಪಾಡ್‌ಕಾಸ್ಟ್‌ನಲ್ಲಿ ತಮ್ಮ ಭಾರೀ ತೂಕದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಆಹಾರದ ಮೇಲಿನ ವ್ಯಾಮೋಹ ಹಾಗೂ ಅತಿಯಾಗಿ ತಿನ್ನುವ ಅಭ್ಯಾಸವೇ ಅವರ 230 ಕೆಜಿ ತೂಕಕ್ಕೆ ಕಾರಣವಾಗಿತ್ತು ಎಂದು ವಿವರಿಸಿದ್ದಾರೆ.

ಬಾಲಿವುಡ್‌ನ ಖ್ಯಾತ ಗಾಯಕ ಅದ್ನಾನ್ ಸಾಮಿ ಅವರ ಹಾಡುಗಳು ಎಷ್ಟು ಜನಪ್ರಿಯತೆಯಿಂದ ಕೂಡಿದೆಯೋ, ಅಷ್ಟೇ ಅವರ ತೂಕ ಇಳಿಕೆಯ ಜರ್ನಿ ಕೂಡ ರೋಚಕವಾಗಿದೆ. ಈ ಹಿಂದೆ 230 ಕೆಜಿ ತೂಕ ಹೊಂದಿದ್ದ ಅವರು, ಏಕಾಏಕಿ ಭಾರೀ ಪ್ರಮಾಣದಲ್ಲಿ ತೂಕ ಇಳಿಸಿಕೊಂಡು ಸ್ಫೂರ್ತಿಯಾಗಿದ್ದರು.

ಇದೀಗ ಅವರು ತಮ್ಮ ತೂಕ ಹೆಚ್ಚಾಗಿತ್ತು ಅನ್ನೋದ್ರ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ವಿವರಿಸಿದ್ದಾರೆ. Untriggered with AminJaz ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿ ತಮ್ಮ ಹಿಂದಿನ ದಿನಗಳನ್ನ ಮೆಲುಕು ಹಾಕಿದ್ದಾರೆ. ತಾವು ಭಾರೀ ತೂಕ ಹೊಂದಿದ್ದಾಗ ಜನರು ತಮ್ಮ ಬಳಿ ಏನೆಲ್ಲ ಕೇಳುತ್ತಿದ್ದರು? ಅದಕ್ಕೆ ನನ್ನ ಉತ್ತರ ಏನಾಗಿತ್ತು? ಅಷ್ಟೇ ಅಲ್ಲ ತಾವು ಅಷ್ಟೊಂದು ದಪ್ಪವಾಗಲು ಕಾರಣ ಏನಾಗಿತ್ತು ಅನ್ನೋದ್ರ ಹಿಂದಿನ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಅದ್ನಾನ್ ಸಾಮಿ ಹೇಳಿದ್ದೇನು?

ನಿಮಗೆ ಆಹಾರದ ಮೇಲಿನ ಆಸೆಯ ಅಭಿಪ್ರಾಯ ವ್ಯಕ್ತಪಡಿಸಿ ಎಂದಾಗ 'ನನಗೆ ಪ್ರತಿಯೊಂದೂ ವೀಕ್‌ನೆಸ್ (ದೌರ್ಬಲ್ಯ) ಆಗಿತ್ತು. ಸಿಹಿ ತಿಂಡಿಗಳಿರಲಿ ಅಥವಾ ಬೇರೆ ಯಾವುದೇ ಆಹಾರವಿರಲಿ, ಎಲ್ಲವೂ ನನಗೆ ಅತಿಯಾಗಿ ಇಷ್ಟವಾಗುತ್ತಿತ್ತು ಎಂದು ಉತ್ತರ ಕೊಟ್ಟಿದ್ದಾರೆ. ಇದೇ ವೇಳೆ ಅವರಿಗೆ ತಮ್ಮ ದೇಹದ ಬಗ್ಗೆ ಜನರು ಕೇಳುತ್ತಿದ್ದ ಪ್ರಶ್ನೆಗೆ ಅವರ ಉತ್ತರ ಏನಾಗಿತ್ತು ಅನ್ನೋದನ್ನೂ ವಿವರಿಸಿದ್ದಾರೆ.

ಯಾರಾದರೂ ನನ್ನ ಬಳಿ ಬಂದು.. 'ನಿಮ್ಮ ಈ ಆರೋಗ್ಯದ (ದಪ್ಪಗಿರುವ ದೇಹದ) ರಹಸ್ಯವೇನು?' ಎಂದು ಕೇಳಿದರೆ, ನಾನು 'ನಾನು ತುಂಬಾ ತಿನ್ನುತ್ತೇನೆ, ನನಗೆ ತಿನ್ನುವುದೆಂದರೆ ತುಂಬಾ ಮಜಾ ಕೊಡುತ್ತದೆ' ಎಂದು ಹೇಳುತ್ತಿದ್ದೆ. ಅದನ್ನು ಕೇಳಿ ಆ ವ್ಯಕ್ತಿಗೆ ಮುಂದೇನು ಮಾತನಾಡಬೇಕೆಂದು ತಿಳಿಯದೆ ಸುಮ್ಮನಾಗುತ್ತಿದ್ದರು ಎಂದಿದ್ದಾರೆ.

ಮೆಕ್‌ಡೊನಾಲ್ಡ್ಸ್ ಬರ್ಗರ್ ಆರ್ಡರ್ ಬಗ್ಗೆ ಮಾತನ್ನಾಡಿ.. ಮೊದಲನೆಯದಾಗಿ, ನಾನು 'ಬಿಗ್ ಮ್ಯಾಕ್' ಬರ್ಗರ್‌ಗಿಂತ ಚಿಕ್ಕದರ ಬಗ್ಗೆ ಯೋಚನೆಯೇ ಮಾಡುತ್ತಿರಲಿಲ್ಲ. ನಾನು ಒಂದೇ ಬಾರಿಗೆ ಆರಾಮವಾಗಿ ಮೂರರಿಂದ ನಾಲ್ಕು ಬಿಗ್ ಮ್ಯಾಕ್ ಬರ್ಗರ್‌ಗಳನ್ನು... ಅವುಗಳ ಜೊತೆಗೆ ಫ್ರೈಸ್ ಮತ್ತು ಚಾಕೊಲೇಟ್ ಶೇಕ್ ಅನ್ನು ತಿಂದು ಮುಗಿಸುತ್ತಿದ್ದೆ ಎಂದಿದ್ದಾರೆ.

ಚಾಕೊಲೇಟ್ ಶೇಕ್ ಕುಡಿಯುವ ಬಗ್ಗೆ ಪ್ರತಿಕ್ರಿಯಿಸಿ.. ಯಾಕೆಂದರೆ ಅಷ್ಟೆಲ್ಲಾ ತಿಂದಿದ್ದನ್ನು ಗಂಟಲೊಳಗೆ ಇಳಿಸಲು ಏನಾದರೂ ಒಂದು ಕುಡಿಯಲೇಬೇಕಲ್ಲವೇ! ಆ ಲಾವಾದಂತಹ ಶೇಕ್‌ನಿಂದ ಅದನ್ನು ಒಳಗೆ ತಳ್ಳಬೇಕಿತ್ತು ಅಷ್ಟೇ ಎಂದು ನಕ್ಕಿದ್ದಾರೆ. ಯೂರೋಪ್‌ನ ಹಲವು ಕಡೆ 'ಡಬಲ್ ವಾಪರ್' ಮತ್ತು 'ಟ್ರಿಪಲ್ ವಾಪರ್' ಎನ್ನುವ ಬೃಹತ್ ಬರ್ಗರ್‌ಗಳು ಸಿಗುತ್ತವೆ. ನಾನು ಅವುಗಳಲ್ಲಿ ಎರಡು ಅಥವಾ ಕೆಲವೊಮ್ಮೆ ಮೂರು ಬರ್ಗರ್‌ಗಳನ್ನು ಅಲ್ಲೇ ಕುಳಿತು ತಿನ್ನುತ್ತಿದ್ದೆ. ನಾಲ್ಕನೆಯದನ್ನು ಜೊತೆಗೆ ಪಾರ್ಸಲ್ ಕಟ್ಟಿಸಿಕೊಂಡು ಹೋಗುತ್ತಿದ್ದೆ ಎಂದಿದ್ದಾರೆ.

ಜನರು ನಿಮ್ಮ ಆರೋಗ್ಯದ ಗುಟ್ಟು ಏನು ಎಂದು ಕೇಳಿದಾಗ ನಾನು ಅತಿಯಾಗಿ ತಿನ್ನುತ್ತೇನೆ. ಹೆಚ್ಚು ತಿನ್ನೋದ್ರಿಂದ ನನಗೆ ಮಜಾ ಕೊಡುತ್ತೆ ಎನ್ನುತ್ತಿದ್ದೆ. ಆಗ ಜನರು ಮುಂದೆ ಏನು ಹೇಳಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಿದ್ದರು ಎಂದಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೀಪಾವಳಿಯಂದು ಪಟಾಕಿ ಸಿಡಿಸುವಾಗ ಈ ತಪ್ಪುಗಳನ್ನು ಮಾಡಿದ್ರೆ ಕಣ್ಣಿನ ದೃಷ್ಟಿಗೆ ಅಪಾಯ ಗ್ಯಾರಂಟಿ!
ಫಿಶ್ ಫ್ರೈ ಗರಿಗರಿಯಾಗಿ ಬರಲು ಸ್ವಲ್ಪ ಇಡ್ಲಿ ಹಿಟ್ಟು ಸೇರಿಸಿ ನೋಡಿ: ಹೋಟೆಲ್ ಸ್ಟೈಲ್ ರುಚಿ ಗ್ಯಾರಂಟಿ!