
‘ಮೀ ಟೂ’ ಕ್ಯಾಂಪೇನ್‌ಗೆ ಬೆಂಬಲ ಸೂಚಿಸಿದ ನಟಿಯೀಕೆ. ವೋಗ್ ಫ್ಯಾಶನ್ ಮ್ಯಾಗಜಿನ್‌ನ ಮುಖಪುಟವನ್ನು ಈ ಬಾರಿ ಅಲಂಕರಿಸಿದವರು. ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಾಕೆ. ಹೈದರಾಬಾದ್‌ನ ರಾಜಮನೆತನದಲ್ಲಿ ಹುಟ್ಟಿದ ಈಕೆಗೆ ಮೊದಲು ಫಿಟ್‌ನೆಸ್ ಕಲಿಸಿದ್ದು ಈಕೆಯ ಅಜ್ಜಿಯಂತೆ!
ರಾಜಕುಮಾರಿ ಹೊಟ್ಟೆಪಾಡು
ಬೆಳಗ್ಗೆ ಹಣ್ಣಿನ ಜ್ಯೂಸ್ ಕುಡಿದು ಸ್ವಲ್ಪ ಹೊತ್ತಿನ ಬಳಿಕ ಇಡ್ಲಿ, ದೋಸೆ ಸೇರಿದಂತೆ ದಕ್ಷಿಣ ಭಾರತೀಯ ತಿಂಡಿಗಳಲ್ಲಿ ಯಾವುದಾದರೊಂದನ್ನು ತಿನ್ನುತ್ತಾರೆ. ನಂತರ ಒಂದು ಗ್ಲಾಸ್ ಹಾಲು ಕುಡೀತಾರೆ. ತಾನ್ಯಾವತ್ತೂ ಡಯೆಟ್ ಮಾಡಿಲ್ಲ ಅನ್ನೋ ಚೆಲುವೆಗೆ ತಾನು ತಿನ್ನೋದೆಲ್ಲ ಹೆಲ್ದೀ ಫುಡ್ ಅನ್ನೂ ವಿಶ್ವಾಸ ಇದೆ. ಮಧ್ಯಾಹ್ನದ ಊಟವೂ ಸಾಮಾನ್ಯರಂತೇ. ರಾತ್ರಿ ಮಾತ್ರ ಕಡಿಮೆ ತಿನ್ನೋದನ್ನು ಚಿತ್ರರಂಗಕ್ಕೆ ಬಂದಮೇಲೆ ರೂಢಿಸಿಕೊಂಡಿದ್ದಾರೆ.
ಅಜ್ಜಿಯೇ ಮೊದಲ ಗುರು!
ಬೆಂಗಳೂರಿನ ವ್ಯಾಲಿ ಸ್ಕೂಲ್‌ನಲ್ಲಿ ಓದಿದ ಈ ಹುಡುಗಿಗೆ ಅಜ್ಜಿಯೇ ಮೊದಲ ಫಿಟ್‌ನೆಸ್ ಗುರು. ಬಾಲ್ಯದಲ್ಲಿ ಮಣ್ಣಾಟ ಆಡೋದ್ರಿಂದ ಹಿಡಿದು ಭರತನಾಟ್ಯಂ ಕಲಿಸಿದಾಕೆ, ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ರೂಪಿಸಿದಾಕೆ ಅದಿತಿಯ ಅಮ್ಮಮ್ಮ. ಅಷ್ಟೇ ಅಲ್ಲ, ಮೊಮ್ಮಗಳಿಗೆ ಅಷ್ಟಾಂಗ ಯೋಗವನ್ನೂ ಅವ್ರೇ ಕಲಿಸಿದ್ರು. ಇವತ್ತು ಅದಿತಿ ಜಿಮ್‌ಗೆ ಹೋಗ್ತಾರಾದ್ರೂ ಬಾಲ್ಯದಲ್ಲಿ ಅಜ್ಜಿ ಕಲಿಸಿದ ಫಿಟ್‌ನೆಸ್ ಟ್ರಿಕ್‌ಗಳನ್ನು ಮರೆತಿಲ್ಲ. ಅಷ್ಟಾಂಗಯೋಗದ ಜೊತೆಗೆ ಪಿಲಾಟೆಸ್ ಮಾಡೋದು ಮತ್ತೊಂದು ಮಜಾ ವಿಷ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.