ಆರೋಗ್ಯಯುತ ತ್ವಚೆ ಪಡೆಯಲು ಚೆನ್ನಾಗಿ ನಿದ್ರಿಸುವುದು ಮುಖ್ಯ. ಆದರೆ ನೀವು ನಿದ್ರಿಸುವುದು ಕಡಿಮೆಯಾದರೆ ಸ್ಕಿನ್ ಮೇಲೆ ಪರಿಣಾಮ ಬೀರುತೆ. ಜತೆಗೆ ಮಲಗುವ ಸಮಯದಲ್ಲಿ ನೀವು ಮಾಡುವ ಮಿಸ್ಟೇಕ್ ಸ್ಕಿನ್ ಡ್ಯಾಮೇಜ್ ಆಗುವಂತೆ ಮಾಡುತ್ತದೆ.
ನಿದ್ರೆ ಬರುತ್ತೆ ಎಂದು ಹೇಗೇಗೋ ನಿದ್ರೆ ಮಾಡಿದ್ರೆ ಎಫೆಕ್ಟ್ ಆಗೋದು ನಿಮ್ಮ ತ್ವಚೆಗೆ. ಮೇಕಪ್ ಸರಿಯಾಗಿ ತೆಗೆಯದಿರುವುದು, ಪೊಲ್ಯೂಷನ್, ಸರಿಯಾಗಿ ನಿದ್ರೆ ಮಾಡದಿರೋದು ಎಲ್ಲವೂ ತ್ವಚೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ರಾತ್ರಿ ಮಲಗುವ ಮುನ್ನ ಏನು ಮಾಡಬಾರದು? ಅದರಿಂದ ಏನಾಗುತ್ತೆ?
ಮಲಗೋ ಮುನ್ನ ಮೇಕಪ್ ತೆಗೀರಿ...
undefined
- ನಿದ್ರೆ ಮಾಡೋ ಮುನ್ನ ಮುಖದ ಮೇಲಿರುವ ಮೇಕಪ್ ತೆಗೀಬೇಕು. ಮೇಕಪ್‌ನೊಂದಿಗೆ ಮಲಗಿದರೆ ಸ್ಕಿನ್ ಪೋರ್ಸ್ ಬಂದ್ ಆಗುತ್ತದೆ. ತ್ವಚೆಗೆ ಅಗತ್ಯ ಆಮ್ಲಜನಕ ಸಿಗದೇ ಡ್ಯಾಮೇಜ್ ಆಗಬಹುದು.
ಸೌಂದಯ ವರ್ಧಕ ಬಸವನ ಹುಳು...ಇದು ಸತ್ಯ ರೀ!
- ಒಂದೇ ಸೈಡ್‌ಗೆ ಮಲಗಬೇಡಿ. ಒಂದೇ ಸೈಡಿಗೆ ಮಲಗಿದಾಗ ದೇಹದ ಒಂದು ಭಾಗದ ಮೇಲೆ ಹೆಚ್ಚು ಪ್ರೆಶರ್ ಬೀಳುತ್ತದೆ. ಅಲ್ಲದೆ ಮುಖದ ಮೇಲೂ ಹೆಚ್ಚು ಒತ್ತಡ ಬಿದ್ದು ಮುಖದಲ್ಲಿ ಬೇಗ ಸುಕ್ಕು ಕಾಣಿಸುತ್ತದೆ.
- ಚೆನ್ನಾಗಿ ನಿದ್ರಿಸಬೇಕೆಂದರೆ ಮಲಗೋ ಮುನ್ನ ಸ್ನಾನ ಮಾಡಬೇಕು. ಇದರಿಂದ ಮನಸು ಮತ್ತು ದೇಹ ಶಾಂತವಾಗುತ್ತದೆ. ಜೊತೆಗೆ ಇದರಿಂದ ಸ್ಕಿನ್ ಕೂಡ ಕ್ಲೀನ್ ಆಗುತ್ತದೆ ಹಾಗೂ ಸ್ಕಿನ್ ಮಾಯಿಶ್ಚರ್ ಉಳಿಯುತ್ತದೆ.ಇನ್ಫೆಕ್ಷನ್ ಉಂಟು ಮಾಡುವ ಬ್ಯಾಕ್ಟಿರಿಯಾಗಳೂ ದೂರವಾಗುತ್ತವೆ. ಆದುದರಿಂದ ಸ್ಕಿಪ್ ಮಾಡದೇ ಸ್ನಾನ ಮಾಡಿ.
- ಮಾಯಿಶ್ಚರೈಸರ್ ಹಾಕೋದು ಯಾವತ್ತೂ ಮರೆಯಬೇಡಿ. ಕೇವಲ ಡ್ರೈ ಸ್ಕಿನ್ ಗೆ ಮಾತ್ರ ಮಾಯಿಶ್ಚರೈಸರ್ ಬೇಕು ಎನ್ನುವ ತಪ್ಪು ತಿಳುವಳಿಕೆಯನ್ನು ದೂರ ಮಾಡಿ. ನಿಮ್ಮ ಸ್ಕಿನ್ ಟೈಪ್ ಯಾವುದೇ ಇರಬಹುದು. ಅದಕ್ಕೆ ಮಾಯಿಶ್ಚರೈಸರ್ ಹಚ್ಚೋದು ಮಾತ್ರ ಮರೆಯಬೇಡಿ.
ಮುಟ್ಟಿದರೆ ಮಣಿಯುವ, ಮುತ್ತಿಟ್ಟರೆ ಮುನಿಯದ ಮೃದು ತ್ವಚೆಯ 10 ರಹಸ್ಯಗಳು!
- ಪ್ರತಿದಿನ ದಿಂಬಿನ ಮೇಲೆ ಮಲಗುತ್ತೀರಿ. ಆದರೆ ಅದನ್ನ ನಿಯಮಿತವಾಗಿ ಬದಲಾಯಿಸದೇ ಇದ್ದರೆ ಅದರಲ್ಲಿ ಬ್ಯಾಕ್ಟೀರಿಯ ಶೇಖರವಾಗುತ್ತದೆ. ಇದರಿಂದ ಸ್ಕಿನ್ ಡ್ಯಾಮೇಜ್ ಆಗೋದು ಖಂಡಿತಾ.