1.32 ಕೋಟಿ ರೂಪಾಯಿ ಡೈಮಂಡ್ ವಾಚ್ ಧರಿಸಿ ಅಂಬಾನಿಗೆ ಸೆಡ್ಡು ಹೊಡೆದ ನಟಿ ಅನನ್ಯಾ

Published : Oct 25, 2026, 12:11 PM IST
Ananya Panday Flaunts rs 132 lakhs Diamond Watch

ಸಾರಾಂಶ

ಅಂಬಾನಿ ಕುಟುಂಬ ಸದಸ್ಯರು ಧರಿಸುವ ವಾಚ್, ಡ್ರೆಸ್, ಆಭರಣ ಎಲ್ಲವೂ ಅತ್ಯಂತ ದುಬಾರಿ. ಇದೀಗ ನಟಿ ಅನನ್ಯಾ ಬರೋಬ್ಬರಿ 1.32 ಕೋಟಿ ರೂಪಾಯಿ ಡೈಮಂಡ್ ವಾಚ್ ಧರಿಸಿ ಅಂಬಾನಿಿ ಕುಟುಂಬಕ್ಕೆ ಸೆಡ್ಡು ಹೊಡೆದಿದ್ದಾರೆ.

ಮುಂಬೈ (ಅ.25) ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲೊಬ್ಬರು. ಅಂಬಾನಿ ಕುಟುಂಬ ಸದಸ್ಯರ ಪ್ರತಿ ಡ್ರೆಸ್, ವಾಚ್, ಕಾರು ಎಲ್ಲವೂ ಐಷಾರಾಮಿತನ ಹೊಂದಿರುತ್ತದೆ. ಜೊತೆಗೆ ಅತೀ ದುಬಾರಿ ಬೆಲೆ. ಅನಂತ್ ಅಂಬಾನಿ ಕಟ್ಟುವ ಕೋಟಿ ಕೋಟಿ ರೂಪಾಯಿ ಬೆಲೆಬಾಳುತ್ತದೆ. ಇದೀಗ ಬಾಲಿವುಡ್ ನಟಿ ಅನನ್ಯಾ ಪಾಂಡೆ ವಾಚ್ ಎಲ್ಲರ ಗಮನಸೆಳೆದಿದೆ. ಅನನ್ಯಾ ಪಾಂಡೆ ಬರೋಬ್ಬರಿ 1.32 ಕೋಟಿ ರೂಪಾಯಿ ಮೌಲ್ಯದ ಡೈಮಂಡ್ ವಾಚ್ ಧರಿಸಿ ಮಿಂಚಿದ್ದಾರೆ.

ಪಿಯಜೆಟ್ ಲೈಮ್‌ಲೈಟ್ ಗಾಲಾ ವಾಚ್

ಅನನ್ಯಾ ಪಾಂಡೆ ಧರಿಸಿದ ವಾಚ್ ಬೆಲೆ ಭಾರತದಲ್ಲಿ 1.32 ಕೋಟಿ ರೂಪಾಯಿ. ಇದು ಪಿಯಜೆಟ್ ಬ್ರ್ಯಾಂಡ್‌ನ ಲೈಮ್‌ಲೈಟ್ ಗಾಲಾ ಪ್ರಿಶಿಯಸ್ ಎಡಿಶನ್ (Ref. G0A47183) ವಾಚ್. ಈ ವಾಚ್ ಹಲವು ವಿಶೇಷತೆಗಳಿಂದ ಕೂಡಿದೆ. ಪ್ರಮುಖವಾಗಿ ಡೈಮಂಡ್‌ನಿಂದ ಅಲಂಕೃತಗೊಂಡಿದೆ. ಜೆಮ್‌ಸ್ಟೋನ್, ಕ್ರಾಫ್ಟ್ ಸೇರಿದಂತೆ ಹಲವು ಕರಕುಶಲತೆಗಳು ಈ ವಾಚ್‌ನಲ್ಲಿದೆ. ಈ ವಾಚ್‌ನಲ್ಲಿ 32mm ಕೇಸ್ ಜೊತೆ 18ಕೆ ಗೋಲ್ಡ್ ಬಳಸಲಾಗಿದೆ.

20 ಬ್ರಿಲಿಯಂಟ್ ಕಟ್ ಡೈಮಂಡ್ ಬಳಸಲಾಗಿದೆ. ಇದರ ಜೊತೆಗೆ 4.01 ಕ್ಯಾರೆಟ್‌ನ 22 ಕಟ್ ಜೆಮ್‌ಸ್ಟೋನ್ ಬಳಸಲಾಗಿದೆ. ಚಿನ್ನ, ವಜ್ರಗಳಿಂದ ಈ ವಾಚ್ ಅತೀ ದುಬಾರಿಯಾಗಿದೆ. ಇದೇ ಕಾರಣದಿಂದ ಅನನ್ಯಾ ಪಾಂಡೆ ಪಿಯಜೆಟ್ ಸ್ಪೆಷಲ್ ಎಲ್ಲರ ಗಮನಸೆಳೆದಿದೆ. ಈ ವಾಚ್ ಕಸ್ಟಮೈಸ್ಡಡ್ ವಾಚ್ ಆಗಿದೆ. ಖರೀದಿಗೆ ಬುಕಿಂಗ್ ಮಾಡುವಾಗ ತಮಗೆ ಬೇಕಾದ ರೀತಿ ಕಸ್ಟಮೈಸ್ ಮಾಡಿಕೊಳ್ಳಬಹುದು. ಖರೀದಿಸುವ ವ್ಯಕ್ತಿಯ ಆಶಕ್ತಿ, ಶೈಲಿ, ಸ್ಟೈಲ್‌ಗೆ ಹೊಂದಿಕೊಳ್ಳುವಂತೆ ಕಸ್ಟಮೈಸ್ ಮಾಡಲಾಗುತ್ತದೆ.

ಗೌರಪ್ ಗುಪ್ತಾ ವಿನ್ಯಾಸದ ಗೌನ್

ಅನನ್ಯಾ ಪಾಂಡೆ ಕಾರ್ಯಕ್ರಮ ಒಂದರಲ್ಲಿ ಈ ದುಬಾರಿ ವಾಚ್ ಧರಿಸಿದ್ದಾರೆ. ಜೊತೆಗೆ ಫ್ಯಾಶನ್ ಡಿಸೈನರ್ ಗೌರವ್ ಗುಪ್ತಾ ವಿನ್ಯಾಸಗೊಳಿಸಿದ ವಿಶೇಷ ಗೌನ್ ಧರಿಸಿದ್ದಾರೆ. ಈ ಕುರಿತ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನನ್ಯಾ ಪಾಂಡೆಯ ಹೊಸ ಸ್ಟೈಲೀಶ್ ಗೌನ್ ಹಾಗೂ ಆಕರ್ಷಕ ವಾಚ್ ಇದೀಗ ಎಲ್ಲರ ಗಮನಸೆಳೆದಿದೆ.

ಬಾಲಿವುಡ್ ಸೆಲೆಬ್ರೆಟಿಗಳು ಕೋಟಿ ರೂಪಾಯಿ ವಾಚ್ ಧರಿಸಿ ಕಾಣಿಸಿಕೊಳ್ಳುವುದು ಇದೇ ಮೊದಲೇನಲ್ಲ. ಶಾರುಖ್ ಖಾನ್, ರಣವೀರ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಟ ನಟಿಯರು ದುಬಾರಿ ವಾಚ್ ಧರಿಸಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಬಳಿ ಹಲವು ದುಬಾರಿ ವಾಚ್‌ಗಳಿವೆ. ಇದೀಗ ಅನನ್ಯಾ ಪಾಂಡೆ ವಾಚ್ ಸದ್ದು ಮಾಡುತ್ತಿದೆ.

2019ರಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಅನನ್ಯಾ ಪಾಂಡೆ, ಬೆಸ್ಟ್ ಫೀಮೇಲ್ ಡಿಬಟ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸ್ಟುಡೆಂಟ್ ಆಫ್ ದಿ ಇಯರ್ 2, ಡ್ರೀಮ್ ಗರ್ಲ್ 2, ಕೇಸರಿ ಚಾಪ್ಟರ್ 2 ಸೇರಿದಂತೆ ಹಲವು ಪ್ರಮುಖ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಂದೆ ಹೆಸರಿನ ಗೊಂದಲದಲ್ಲಿ ಜಿರಳೆ ಲೀಡರ್​ ಸೌರವ್​ ದಾಸ್​: SIR ವಿರೋಧದ ಕಾರಣ ಹೆಕ್ಕಿ ತೆಗೆದರು- ಅಪ್ಪ ಯಾರು
ಜನಪ್ರಿಯ ಶೆಫ್, ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ದಾಮು ಅಲಿಯಾಸ್ ದಾಮೋದರನ್ ನಿಧನ, ಗಣ್ಯರಿಂದ ಸಂತಾಪ