ದಾಂಪತ್ಯವನ್ನೇ ಕುಲಗೆಡಿಸೋ ಐದು ವರ್ತನೆಗಳಿವು..

By Web Desk  |  First Published Jul 17, 2019, 2:16 PM IST

ದಾಂಪತ್ಯ ಚೆನ್ನಾಗಿದ್ದರೆ ಮನಸ್ಸು ಸದಾ ಖುಷಿಯಾಗಿರುತ್ತದೆ. ಆದರೆ, ಸಂತೋಷ ಫ್ರೀಯಾಗಿ ಸಿಗುವುದಿಲ್ಲ. ಅದನ್ನು ಗಳಿಸಲು ಹಾರ್ಡ್ ವರ್ಕ್ ಅಗತ್ಯ. ಸುಖೀ ದಾಂಪತ್ಯಕ್ಕಾಗಿ ಕೆಲವೊಂದು ಹೊಂದಾಣಿಕೆ, ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. 


ಸಂಬಂಧಗಳಲ್ಲಿ ಆಗಾಗ ಏರುಪೇರು ಸಾಮಾನ್ಯ. ಅದೂ ಗಂಡ ಹೆಂಡತಿಯ ಮಧ್ಯೆ ಭಾವನೆಗಳ ಕಾಮನಬಿಲ್ಲೇ ಸೃಷ್ಟಿಯಾಗುತ್ತದೆ. ಈ ಕ್ಷಣ ರೊಮ್ಯಾಂಟಿಕ್ ಆಗಿದ್ದ ಜೋಡಿ, ಮುಂದಿನ ಕ್ಷಣದಲ್ಲಿ ಕಿತ್ತಾಡುತ್ತಿರಬಹುದು. ಇಂದು ಸಂತೋಷದಲ್ಲಿ ತೇಲಾಡಿದವರು, ನಾಳೆ ವಿರಸದಲ್ಲೇ ಈಜಾಡಬಹುದು. ಕೆಲವೊಮ್ಮೆ ಭೋರ್ಗರೆದು ಮಳೆ ಸುರಿದರೆ ಮತ್ತೆ ಕೆಲವೊಮ್ಮೆ ಮೋಡ ಕಟ್ಟಬಹುದು. ಹಾಗಂತ ಸದಾ ಕಾಲ ಮೋಡ ಕಟ್ಟಿದ್ದರೆ ಏನು ಚೆನ್ನ? ಯಾವುದೇ ನೆಗೆಟಿವ್ ಎಮೋಶನ್ಸ್ ಕ್ಷಣ ಕಾಲ ಇದ್ದರಷ್ಟೇ ಚೆನ್ನ. ಅದನ್ನು ಅಲ್ಲೇ ಬಿಟ್ಟು ಮುಂದೆ ಹೋಗಬೇಕೆಂದರೆ ಸಂಗಾತಿಗಳ ನಡುವೆ ಹೊಂದಾಣಿಕೆ ಸ್ವಭಾವ, ನಂಬಿಕೆ, ಪ್ರೀತಿ, ಅರ್ಥ ಮಾಡಿಕೊಳ್ಳುವುದು, ಇನ್ನೊಬ್ಬರ ಮುಂದೆ ಒಬ್ಬರನ್ನೊಬ್ಬರು ಬಿಟ್ಟುಕೊಡದಿರುವುದು ಮುಂತಾದ ಗುಣಗಳು ಅಗತ್ಯ. ಈ ಎಲ್ಲದರ ಹೊರತಾಗಿಯೂ ಕೆಲವೊಂದು ಸಂಗತಿಗಳು ಇಬ್ಬರ ನಡುವಿನ ಚೆಂದದ ಒಲವನ್ನು ನಿಧಾನವಾಗಿ ಕೊಲ್ಲಬಹುದು. ಅವುಗಳನ್ನು ಅರಿತು, ನೀವೂ ಹೀಗೇ ಮಾಡುತ್ತಿದ್ದರೆ ಈಗಲೇ ಈ ಅಭ್ಯಾಸ ಬದಲಾಯಿಸಿಕೊಳ್ಳಿ. 

- ವಿಷಯಗಳನ್ನು ಗುಟ್ಟು ಮಾಡುವುದು
ಅದು ಹಣದ ವಿಷಯವಾಗಿರಬಹುದು, ಅಥವಾ ಹಳೆಯ ಗೆಳೆತನ, ಕುಟುಂಬದ ಪರಿಸ್ಥಿತಿ, ಸಾಲಸೋಲ ಸೇರಿದಂತೆ ಯಾವುದೇ ವಿಷಯವಾಗಿರಬಹುದು, ಉದ್ದೇಶಪೂರ್ವಕವಾಗಿ ಸಂಗಾತಿಯಿಂದ ಯಾವುದೇ ವಿಷಯ ಬಚ್ಚಿಡುತ್ತಿದ್ದೀರಾದರೆ ಅದು ಜ್ವಾಲಾಮುಖಿಯಂತೆ ಯಾವ ಕ್ಷಣದಲ್ಲಿ ಬೇಕಾದರೂ ಸಿಡಿಯಬಹುದು. ವಿಷಯ ಗಮನಕ್ಕೆ ಬಂದಾಗ ಸಂಗಾತಿ ನಿಮ್ಮ ಮೇಲೆ ನಂಬಿಕೆ ಕಳೆದುಕೊಳ್ಳಬಹುದು ಅಥವಾ ಬೇಜಾರಾಗಬಹುದು. ಕೋಪಗೊಂಡು ಜಗಳವನ್ನೂ ಆಡಬಹುದು. ಒಟ್ಟಿನಲ್ಲಿ ಮುಳ್ಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಓಡಾಡುವ ಪರಿಸ್ಥಿತಿ ಅದು. ಹೀಗಾಗಿ, ಸಂಗಾತಿಯಿಂದ ಯಾವುದೇ ವಿಷಯ ಗುಟ್ಟು ಮಾಡಬೇಡಿ. ಯಾವುದೇ ವಿಷಯವನ್ನು ಸರಿಯಾದ ರೀತಿಯಲ್ಲಿ ಹೇಳಿದರೆ, ಸಂಗಾತಿ ಖಂಡಿತಾ ನಿಮ್ಮನ್ನು ಅರ್ಥ ಮಾಡಿಕೊಳ್ಳಬಲ್ಲರು.

ಜಂಟಿ ತಿರುಗಾಡೋರ ಲೈಂಗಿಕ ಬದುಕೂ ಬಿಂದಾಸ್

Latest Videos

undefined

- ಆಗಾಗ ಮಾತು ಬಿಡುವುದು
ಜಗಳವಾಡುವುದು ಇಷ್ಟವಿಲ್ಲವೆಂದು ಆಗಾಗ ಮೌನದ ಮೊರೆ ಹೋಗಿ ಮಾತಿಲ್ಲದೆಯೇ ಸಂಗಾತಿಯನ್ನು ಸಾಕಷ್ಟು ನೋಯಿಸುವ ಅಭ್ಯಾಸ ನಿಮಗಿದ್ದಲ್ಲಿ ತಕ್ಷಣವೇ ಅದಕ್ಕೆ ಗುಡ್‌ಬೈ ಹೇಳಿ. ಈ ಸೈಲೆಂಟ್ ಟ್ರೀಟ್‌ಮೆಂಟ್‌ನ ಅಡ್ಡ ಪರಿಣಾಮಗಳು ಬಹಳ. ಇದಕ್ಕಿಂತ ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಂಡು ಕೊರಗದೆ, ಬಾಯಿ ಬಿಟ್ಟು ಹೇಳಿ. ಒಂದು ವೇಳೆ ಜಗಳವಾದರೂ ಬೇಗ ಅಂತ್ಯ ಕಾಣುತ್ತದೆ. ಆದರೆ ಕೋಲ್ಡ್‌ವಾರ್ ಎಂದಿಗೂ ಮುಗಿಯದ ಕತೆ. ಇದರಿಂದ ನಿಧಾನವಾಗಿ ನೀವು ಮಾತು ಬಿಟ್ಟರೂ ಕ್ಯಾರೆ ಎನ್ನದ ಪರಿಸ್ಥಿತಿ ಉಂಟಾಗಬಹುದು. ಜೊತೆಗೆ, ಯಾವ ಸಮಸ್ಯೆಗಳೂ ಪರಿಹಾರ ಕಾಣದ ಸ್ಥಿತಿ ತಲುಪಬಹುದು. 

ಅಜಯ್-ಕಾಜೋಲ್ ಸುಖ ಸಂಸಾರದ ಗುಟ್ಟು

- ಅತಿಯಾದ ನಿರೀಕ್ಷೆಗಳು
ಅಂದಿನಿಂದ ಎಲ್ಲರೂ ಸುಖವಾಗಿದ್ರಂತೆ ಎಂದೇ ಎಲ್ಲ ಕತೆಗಳೂ ಮುಗಿಯುವುದು. ಇನ್ನು ಚಲನಚಿತ್ರಗಳ ಕತೆಯೂ ಹಾಗೆಯೇ, ಅಲ್ಲಿ ಪ್ರೀತಿಪ್ರೇಮ ಎಲ್ಲವೂ ಅತಿರೇಖವೇ, ಪತ್ನಿಯನ್ನು ತಲೆಯ ಮೇಲೆ ಹೊತ್ತು ಮೆರೆಸುವಂಥ ಪತಿ ಅಥವಾ ಪತಿಯೇ ಪರದೈವ ಎನ್ನುವಂಥ ಪತ್ನಿಯ ಮೂವಿಗಳನ್ನು ನೋಡಿ, ನಿಮ್ಮ ಸಂಗಾತಿಯೂ ನಿಮ್ಮನ್ನು ಹಾಗೆಯೇ ಮುದ್ದಿಸಬೇಕು, ಮೆರೆಸಬೇಕು ಎಂಬೆಲ್ಲ ಅತಿಯಾದ ನಿರೀಕ್ಷೆಗಳು ಬಹಳ ಬಾರಿ ಕೈಕೊಡುತ್ತವೆ. ಭಾವನೆಗಳಿಂದ ಹತ್ತಿರಾಗಲು ಸಮಯ ಹಾಗೂ ಹಾರ್ಡ್ ವರ್ಕ್ ಅಗತ್ಯ. ಇವೆರಡನ್ನೂ ಕೊಟ್ಟ ಬಳಿಕ ನಿಮ್ಮ ದಾಂಪತ್ಯ ಒಂದು ಮಟ್ಟಿಗೆ ಫ್ಯಾಂಟಸಿ ಮೂವಿಯಂತಾಗಬಹುದು. ಆದರೆ, ಪ್ರಯತ್ನವಿಲ್ಲದೆ ವೃಥಾ ನಿರೀಕ್ಷೆಗಳನ್ನಿಟ್ಟುಕೊಂಡರೆ ಅವು ವ್ಯರ್ಥ ಹೋಗುವುದೇ ಜಾಸ್ತಿ.

- ಹಳೆಯ ಸೇಡು ತೀರಿಸುವುದು
ಇಂಗ್ಲಿಷ್‌ನಲ್ಲಿ ಇದಕ್ಕೊಂದು ಹೆಸರಿದೆ- ಕಿಚನ್ ಥಿಂಕಿಂಗ್ ಎಂದು. ಯಾವುದೋ ವಿಷಯಕ್ಕಾಗಿ ಇಬ್ಬರೂ ವಾದ ಮಾಡುವಾಗ ಇದ್ದಕ್ಕಿದ್ದಂತೆ ಅದಕ್ಕೆ ಸಂಬಂಧಿಸದ, ಹಳೆಯ ವಿಷಯಗಳನ್ನು ಎತ್ತಿ ಆಡುವುದು. ಇದು ಬಹಳ ಅಪಾಯಕಾರಿ. ಇಬ್ಬರ ಒಳಗೂ ಹಳೆಯ ಬೇಜಾರಾದ ಸಾಕಷ್ಟು ವಿಷಯಗಳಿರಬಹುದು. ಅವನ್ನು ಇಬ್ಬರೂ ಕೆಸರೆರೆಚಾಡಿಕೊಳ್ಳಲು ಆರಂಭಿಸಿದರೆ ಸಿಟ್ಟು ಸೆಡವು ತಾರಕಕ್ಕೆ ಹೋಗಬಹುದು. ಈ ಸೇಡು ತೀರಿಸುವ ಆಟದಲ್ಲಿ ದಾಂಪತ್ಯದ ನಡುವೆ ಬಿರುಕು ಮೂಡಬಹುದು. 

ಗುಂಡಮ್ಮ ಸತಿಯಾದರೆ ಪತಿ ಸಂತೋಷಕ್ಕಿರದು ಮಿತಿ

- ಸಂಗಾತಿ ಬಗ್ಗೆ ಕೆಟ್ಟದಾಗಿ ಮಾತಾಡುವುದು  
ನಿಮ್ಮ ಪಾರ್ಟ್ನರ್‌ನ ವಿಷಯದಲ್ಲಿ ಯಾವುದೇ ಬೇಜಾರಿದ್ದರೆ ಅದನ್ನು ನೇರವಾಗಿ ಮಾತನಾಡಿ ಹೇಳುವುದಕ್ಕಿಂತ ಉತ್ತಮ ದಾರಿ ಇನ್ನೊಂದಿಲ್ಲ. ಅದರ ಬದಲು, ಸಾಮಾನ್ಯವಾಗಿ ಜನರು ಇತರರ ಎದಿರಿಗೆ ಆ ವಿಷಯವನ್ನು ಹೇಳಿ ಅಮಾನಿಸುವುದು, ಸಂಗಾತಿಯ ಕುರಿತು ತಮಾಷೆ ಮಾಡಿ ನಗುವುದು, ಇಲ್ಲವೇ ಸಿಂಪತಿ ಗಿಟ್ಟಿಸಲು ಸಂಗಾತಿಯನ್ನು ದೂರುವುದು ಮಾಡುತ್ತಾರೆ. ಇದು ಇಬ್ಬರ ನಡುವೆ ಕಂದರ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ. 
 

click me!