ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್: ಹೀಗಿತ್ತು ರ‍್ಯಾಂಪ್‌ ಮೇಲೆ ಮಕ್ಕಳ ಝಲಕ್!

By Web DeskFirst Published Jul 16, 2019, 4:39 PM IST
Highlights

ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ ಏಳನೇ ಆವೃತ್ತಿಗೆ ಬೆಂಗಳೂರಿನಲ್ಲಿ ಭಾನುವಾರ ಚಾಲನೆ ನೀಡಲಾಯಿತು. ದೇಶಾದ್ಯಂತ ನಡೆಯುವ ಈ ಆವೃತ್ತಿಯ ಮೊದಲ ರನ್‌ವೆ ಕಾರ್ಯಕ್ರಮ ಭಾನುವಾರ ಬೆಂಗಳೂರಿನಲ್ಲಿ ನಡೆಯಿತು.

ಬೆಂಗಳೂರು(ಜು.16): ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ ಏಳನೇ ಆವೃತ್ತಿಗೆ ಬೆಂಗಳೂರಿನಲ್ಲಿ ಭಾನುವಾರ ಚಾಲನೆ ನೀಡಲಾಯಿತು. ದೇಶಾದ್ಯಂತ ನಡೆಯುವ ಈ ಆವೃತ್ತಿಯ ಮೊದಲ ರನ್‌ವೆ ಕಾರ್ಯಕ್ರಮ ಭಾನುವಾರ ಬೆಂಗಳೂರಿನಲ್ಲಿ ನಡೆಯಿತು. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ 350 ಹೆಚ್ಚು ಮಕ್ಕಳು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನಸೂರೆಗೊಂಡರು.

ಭಾನುವಾರ ಬೆಳಿಗ್ಗೆಯಿಂದ ನಡೆದ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಟಾಲಿವುಡ್ ನಟಿ ಕಮ್ಮ ಜೇಠ್ಮಲಾನಿ ಹಾಗೂ ಅಗ್ನಿಸಾಕ್ಷಿ ಧಾರಾವಾಯಿ ಖ್ಯೆತಿಯ ವೈಷ್ಣವಿ ಪಾಲ್ಗೊಂಡು ಮಕ್ಕಳೊಂದಿಗೆ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದರು.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಪ್ರಸಿದ್ದ ಡಿಸೈನರ್ ಗಳಾದ ನಿಶ್ಚಲಾ ರೆಡ್ಡಿ, ಡಿ ಬೊಟಿಕ್, ವಸ್ತ್ರಕೃತಿ, ಗುಲ್ ಮೊಹರ್ ಕ್ರಿಯೇಷನ್ಸ್, ಖ್ಯಾತಿ ಡಿಸೈನರ್ಸ್ ಸ್ಟುಡಿಯೋ, ರೇನ್ ಬೊ ಬರ್ಡ್ ಕೋಚರ್ ಕಲೆಕ್ಷನ್ಸ್, ಸೋಹಂ, ಕ್ರಿಯೇಷನ್ಸ್, ಮಿನಿ ಕ್ಲಬ್ ಹಾಗೂ ಆಹಾ ವಸ್ತ್ರ ವಿನ್ಯಾಸಕರು ತಯಾರಿಸಿದ ಬಟ್ಟೆಗಳನ್ನು ಹಾಕಿಕೊಂಡು ಮಕ್ಕಳು ಹೆಜ್ಜೆ ಹಾಕಿದರು.

ವಿನೂತನ ಮಾದರಿಯ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್‌ನಲ್ಲಿ ಮಕ್ಕಳ ಉಡುಪು ತಯಾರಿಕಾ ಬ್ರಾಂಡ್ ಕಂಪನಿಗಳು ಹಾಗೂ ಡಿಸೈನರ್'ಗಳು ತಯಾರಿಸಿದ ತಮ್ಮ ಬ್ರಾಂಡ್ ಮತ್ತು ಡಿಸೈನ್‌ಗಳನ್ನು 3 ರಿಂದ 13 ವರ್ಷದೊಳಗಿನ ಮಕ್ಕಳು ರ‍್ಯಾಂಪ್ ಮೇಲೆ ಪ್ರದರ್ಶನ ಮಾಡಿದರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಮಕ್ಳಳು ಹಾಡು, ನೃತ್ಯ, ವಾದ್ಯ ನುಡಿಸುವುದು ಸೇರಿದಂತೆ ಅನೇಕ ಕಲೆಗಳನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದರು.

ಹತ್ತು ದಿನಗಳ ನಡೆಯಲಿರುವ ಫ್ಯಾಷನ್ ವೀಕ್ ಮುಂದಿನ ದಿನಗಳಲ್ಲಿ ಚೆನೈ, ಹೈದರಾಬಾದ್, ಕೋಲ್ಕತ್ತಾ, ದಿಲ್ಲಿ, ಚಂಡಿಗಢ, ಅಹಮದಾಬಾದ್, ಪುಣೆ, ಜೈಪೂರ್‌ಗಳಲ್ಲಿ ಹತ್ತು ದಿನಗಳವರೆಗೆ ನಡೆಯಲಿದೆ. ಅಂತಿಮವಾಗಿ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್ ವರ್ಷಾಂತ್ಯದಲ್ಲಿ ದುಬೈನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಭಾರತೀಯ ಜೀವ ವಿಮಾ ಕಂಪನಿ (ಎಲ್‌ಐಸಿ) ಯ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರೊಂದಿಗೆ ಯುರೇಕಾ ಫೋರ್ಬ್ಸ್, ಟೆಕ್ ಮಹಿಂದ್ರಾ, ಸೋಲ್‌ಫುಲ್, ಫೈರ್ ಫಾಕ್ಸ್, ಲ್ಯಾಕ್ಮೆ ಅಕಾಡೆಮಿ ಕಾರ್ಯಕ್ರಮದ ಪ್ರಾಯೋಜಕತ್ವ ಪಡೆದಿವೆ.

ಇಂಡಿಯ ಕಿಡ್ಸ್ ಫ್ಯಾಷನ್ ವೀಕ್ ಕುರಿತು ಕ್ರಾಪ್ಟ್ ವರ್ಲ್ಡ್ ಇವೆಂಟ್ ಆಯೋಜಕಿ ಮಾತನಾಡಿ, ಮಕ್ಕಳ ಉಡುಪುಗಳ ಬ್ರ್ಯಾಂಡ್ ಕಂಪನಿಗಳು ಮತ್ತು ಡಿಸೈನರ್ಸ್ ತಮ್ಮ ನೈಪುಣ್ಯತೆಯನ್ನು ಈ ವೇದಿಕೆ ಮೂಲಕ ಪ್ರದರ್ಶನ ಮಾಡಲು ಒಳ್ಳೆಯ ಅವಕಾಶ ಎಂದು ಹೇಳಿದರು.

click me!