ಆಫೀಸ್ ಸಿಬ್ಬಂದಿಗಳಿಗೆ ಸೆಕ್ಸ್'ಗಾಗಿ ಒಂದು ಗಂಟೆಯ ಬ್ರೇಕ್ ನೀಡಲು ಚಿಂತನೆ

Published : Feb 26, 2017, 09:45 PM ISTUpdated : Apr 11, 2018, 01:02 PM IST
ಆಫೀಸ್ ಸಿಬ್ಬಂದಿಗಳಿಗೆ ಸೆಕ್ಸ್'ಗಾಗಿ ಒಂದು ಗಂಟೆಯ ಬ್ರೇಕ್ ನೀಡಲು ಚಿಂತನೆ

ಸಾರಾಂಶ

ಕಚೇರಿಯಲ್ಲಿ ಕೆಲಸದ ನಡುವೆ ಊಟ, ಕಾಫಿ, ಮಕ್ಕಳಿಗೆ ಹಾಲುಣಿಸಲು ಬ್ರೇಕ್ ನೀಡುವುದು ಸಾಮಾನ್ಯ. ಆದರೆ ಇದೀಗ ಸ್ವೀಡನ್ ಕಚೇರಿಯ ಸಿಬ್ಬಂದಿಗಳಿಗೆ ಸೆಕ್ಸ್ ಮಾಡಲು ಕೆಲಸದ ನಡುವೆ ಒಂದು ಗಂಟೆಯ ಬ್ರೇಕ್ ನೀಡುವ ವಿಚಾರವನ್ನು ಪ್ರಸ್ತಾಪಿಸಿದೆಯಂತೆ.

ಸ್ವೀಡನ್(ಫೆ.27): ಕಚೇರಿಯಲ್ಲಿ ಕೆಲಸದ ನಡುವೆ ಊಟ, ಕಾಫಿ, ಮಕ್ಕಳಿಗೆ ಹಾಲುಣಿಸಲು ಬ್ರೇಕ್ ನೀಡುವುದು ಸಾಮಾನ್ಯ. ಆದರೆ ಇದೀಗ ಸ್ವೀಡನ್ ಕಚೇರಿಯ ಸಿಬ್ಬಂದಿಗಳಿಗೆ ಸೆಕ್ಸ್ ಮಾಡಲು ಕೆಲಸದ ನಡುವೆ ಒಂದು ಗಂಟೆಯ ಬ್ರೇಕ್ ನೀಡುವ ವಿಚಾರವನ್ನು ಪ್ರಸ್ತಾಪಿಸಿದೆಯಂತೆ.

ಇಲ್ಲಿನ ಓರ್ವ ರಾಜಕಾರಣಿ ಸಿಬ್ಬಂದಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಕೆಲಸದ ನಡುವೆ ಒಂದು ಗಂಟೆಯ 'ಸೆಕ್ಸ್ ಬ್ರೇಕ್' ನೀಡುವ ಕುರಿತಾಗಿ ಪ್ರಸ್ತಾಪಿಸಿದ್ದಾರೆ. ಸ್ವೀಡನ್'ನ ಸೋಷಲ್ ಡೆಮಾಕ್ರಟಿಕ್ ಪಾರ್ಟಿಯ 42 ವರ್ಷದ ಪೆರ್ ಎರಿಕ್ ಮುಸ್ಕೋಸ್'ರವರು ಇಲ್ಲಿನ ಕೌನ್ಸಿಲ್ ಮೀಟಿಂಗ್'ನಲ್ಲಿ ಇಂತಹುದ್ದೊಂದು ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಬ್ರೇಕ್ ವೇಳೆ ತೆರಳಿದವರ ವೇತನವನ್ನು ಕಡಿತಗೊಳಿಸುವುದಿಲ್ಲ ಹಾಗೂ ಈ ಆದೇಶ ಜಾರಿಯಾದರೆ ದೇಶದಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚುತ್ತದೆ ಎಂಬ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ 'ವಿರಾಮವಿಲ್ಲದ ಬದುಕಿನಲ್ಲಿ ಪ್ರೇಮಿಗಳು ಹಾಗೂ ವಿವಾಹಿತ ಜೋಡಿಗಳಿಗೆ ಒಟ್ಟಾಗಿ ಸಮಯ ಕಳೆಯುವ ಅವಕಾಶ ಸಿಗುತ್ತಿಲ್ಲ.  ಇಂತಹುದ್ದೊಂದು ಆದೇಶ ಜಾರಿಯಾದರೆ ದಂಪತಿಗಳ ನಡುವಿನ ಜಗಳ ಕಡಿಮೆಯಾಗಿ ಸಂಬಂಧಗಳಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಕಚೇರಿಗಳಲ್ಲಿ ವ್ಯಾಯಾಮ ಮಾಡಲು ವಿರಾಮ ನೀಡಲಾಗುತ್ತದೆ, ಅಧ್ಯಯನದ ಮೂಲಕ 'ಸೆಕ್ಸ್' ಕೂಡಾ ಒಂದು ರೀತಿಯ ವ್ಯಾಯಾಮ ಎಂದು ತಿಳಿದು ಬಂದಿದೆ. ಹೀಗಿರುವಾಗ 'ಸೆಕ್ಸ್'ಗಾಗಿ ವಿರಾಮ ನೀಡಲು ಹಿಂದೇಟು ಹಾಕಬಾರದು' ಎಂದು ಎರಿಕ್ ಮುಸ್ಕೋಸ್ ತಿಳಿಸಿದ್ದಾರೆ.

ಸ್ವೀಡನ್'ನಲ್ಲಿ ಸಿಬ್ಬಂದಿಗಳಿಗೆ ಬಹಳಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ದಿನದಲ್ಲಿ ಎರಡು ಮೂರು ಬಾರು ಕಾಫಿ/ಟೀ ಬ್ರೇಕ್ ನೀಡಲಾಗುತ್ತದೆ. ಇವೆಲ್ಲದರೊಂದಿಗೆ ತಂದೆಯಾದಾಗ 480 ದಿನಗಳ ಹೆಚ್ಚಿನ ರಜೆಯನ್ನೂ(Parental Leave) ನೀಡಲಾಗುತ್ತದೆ.

ಕೃಪೆ: ND Tv

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಡಿಗೋ ಅವಾಂತರದ ಬಳಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಫೋಟೋ ಭಾರಿ ವೈರಲ್
ದೇಹದ ಈ ಭಾಗದಲ್ಲಿ ನಿರಂತರ ನೋವು ಅನುಭವಿಸುತ್ತಿದ್ದೀರಾ?, ಕಿಡ್ನಿ ಡ್ಯಾಮೇಜ್ ಅಥವಾ ಫೇಲ್ಯೂರ್ ಆಗಿರ್ಬೋದು