ಮಳ್ಳಿ ಮಳ್ಳಿ ಮಿಂಚುಳ್ಳಿ ಈ ಈರುಳ್ಳಿ!

By Web Desk  |  First Published Sep 12, 2019, 1:42 PM IST

ಈರುಳ್ಳಿ ಸಾವಿರಾರು ವರ್ಷಗಳಿಂದಲೂ ಆಹಾರದಲ್ಲಿ ಬಳಕೆಯಾಗುತ್ತಲೇ ಬಂದಿದೆ. ಪುರಾತನ ಈಜಿಪ್ಟಿಗರು ಇದನ್ನು ಪೂಜಿಸುತ್ತಿದ್ದರಷ್ಟೇ ಅಲ್ಲ, ಅಂತ್ಯಸಂಸ್ಕಾರದಲ್ಲೂ ಬಳಸುತ್ತಿದ್ದರು! ಹಲವಾರು ಆರೋಗ್ಯ ಲಾಭಗಳನ್ನೂ ಹೊಂದಿರುವ ಈರುಳ್ಳಿ, ಅಡುಗೆಗಷ್ಟೇ ಅಲ್ಲದೆ ಇತರೆ ಬಳಕೆಗಳಿಗೂ ಬರುತ್ತದೆ. 


ಯಾವುದೇ ಆಹಾರದ ಫ್ಲೇವರ್, ರುಚಿ, ಟೆಕ್ಸ್ಚರ್ ಎಲ್ಲದರಲ್ಲೂ ತನ್ನತನ ತೋರಿ ಸೈ ಎನಿಸಿಕೊಳ್ಳುವ ಮಿಂಚುಳ್ಳಿ ಈ ಈರುಳ್ಳಿ. ವಿಟಮಿನ್ಸ್, ಆಂಟಿ ಆಕ್ಸಿಡೆಂಟ್ಸ್, ಮಿನೆರಲ್ಸ್‌ಗಳಿಂದ ಸಮೃದ್ಧವಾಗಿರುವ ಈರುಳ್ಳಿ ಬೊಜ್ಜು, ಹೃದಯದ ಸಮಸ್ಯೆಗಳು, ಕ್ಯಾನ್ಸರ್‌‌ನಂಥ ದೊಡ್ಡ ದೊಡ್ಡ ಕಾಯಿಲೆಗಳಿಂದ ಹಿಡಿದು ಕೆಮ್ಮು ಕಫದಂದ ಸಣ್ಣ ಪುಟ್ಟ ಸಮಸ್ಯೆಗಳಿಗೂ ಮದ್ದಾಗುತ್ತಿದೆ.

ಆದರೆ, ಈರುಳ್ಳಿಯ ಬಹುಮುಖಿ ವ್ಯಕ್ತಿತ್ವ ಅಷ್ಟಕ್ಕೇ ಸೀಮಿತವಲ್ಲ. ಗಾಯ ಗುಣಪಡಿಸುವುದರಿಂದ ಹಿಡಿದು ತುಕ್ಕಾದ ಚಾಕುವನ್ನು ಹೊಸತರಂತೆ ಮಾಡುವವರೆಗೂ ಅವಳು ನಿಸ್ಸೀಮೆ. ಅಷ್ಟೆಲ್ಲ ಮಾಡಿಯೂ ಏನೂ ಗೊತ್ತಿಲ್ಲದಂತೆ ಫ್ರಿಡ್ಜ್‌ನ ಕೆಳಗೋ, ಅಡುಗೆಕೋಣೆಯ ಮೂಲೆಯಲ್ಲೋ ತೆಪ್ಪಗೆ ಕುಳಿತುಬಿಡುವುದರಿಂದಲೇ ಆಕೆಗೆ ಮಳ್ಳಿ ಎಂದಿದ್ದು. ಅಂದ ಹಾಗೆ ಈರುಳ್ಳಿಯನ್ನು ಹೇಗೆಲ್ಲ ಬಳಸಬಹುದು ಎಂದು ತಿಳಿದರೆ ನೀವು ಖಂಡಿತಾ ಆಶ್ಚರ್ಯ ಪಡುತ್ತೀರಿ. 

Tap to resize

Latest Videos

ಈರುಳ್ಳಿ ರಸದಲ್ಲಿ ಅಡಗಿದೆ ಸ್ಕಿನ್ ಮತ್ತು ಕೂದಲಿನ ಆರೋಗ್ಯದ ಗುಟ್ಟು !

1. ತುಕ್ಕಾದ ಚಾಕು ಸ್ವಚ್ಛತೆ

ಮನೆಯಲ್ಲಿ ತುಕ್ಕಾದ ಚಾಕುವೊಂದು ಬಿಸಾಡಲೂ ಮನಸು ಬಾರದೆ, ಬಳಸಲೂ ಆಗದೆ ಕಸವಾಗಿ ಕುಳಿತಿದೆಯೇ? ದೊಡ್ಡದೊಂದು ಹಸಿ ಈರುಳ್ಳಿಯೊಳಗೆ ಹಾಕಿ ಚಾಕನ್ನು ತಿಕ್ಕಿ. ಇದರಿಂದ ತುಕ್ಕು ತಕ್ಷಣದಲ್ಲಿ ಹೋಗುವುದು. ಬಳಿಕ ಅದನ್ನು ಯಾವುದಾದರೂ ಕಲ್ಲಿಗೆ ಉಜ್ಜಿದರೆ ಶಾರ್ಪ್ ಆದ ಹೊಸ ಚಾಕು ರೆಡಿ. 

2. ಜೇನು ಕಚ್ಚಿದರೆ

ಯಾವಾಗಲಾದರೂ ಜೇನು ಹುಳ ಕಚ್ಚಿದರೆ ತಕ್ಷಣ ಆ ಜಾಗಕ್ಕೆ ಈರುಳ್ಳಿಯಿಂದ ಚೆನ್ನಾಗಿ ತಿಕ್ಕಿ. ಇದು ನೋವನ್ನೂ, ಊತವನ್ನೂ ಗುಣಪಡಿಸುತ್ತದೆ.

ಸ್ಲಿಮ್ ಆಗೋದಾದರೆ ಈರುಳ್ಳಿಯಲ್ಲಿದೆ ಮದ್ದು?

3. ಬಣ್ಣದ ಮೊಟ್ಟೆಗಳು

ಈರುಳ್ಳಿ ಸಿಪ್ಪೆ ಉತ್ತಮ ಡೈ ಆಗಿ ಕೆಲಸ ಮಾಡುತ್ತದೆ. ಮೊಟ್ಟೆಗಳಿಗೆ ಈರುಳ್ಳಿ ಸಿಪ್ಪೆಯಿಂದ ಸುತ್ತಿಟ್ಟು ಮೇಲಿನಿಂದ ಟವೆಲ್ ಕಟ್ಟಿ. ನಂತರ ಸಾಮಾನ್ಯದಂತೆ ಬೇಯಿಸಿ. ಬೆಂದ ಬಳಿಕ ಬಟ್ಟೆ ಹಾಗೂ ಈರುಳ್ಳಿ ಸಿಪ್ಪೆ ತೆಗೆದರೆ ಮೊಟ್ಟೆಯು ಸುಂದರವಾದ ಪಿಂಕ್ ಬಣ್ಣದಿಂದ ಗಮನ ಸೆಳೆಯುತ್ತದೆ. ಇದು ಆರ್ಟಿಫಿಶಿಯಲ್ ಬಣ್ಣವೂ ಅಲ್ಲವಾದ್ದರಿಂದ ಆರಾಮಾಗಿ ಮಕ್ಕಳ ಕಣ್ಣಿಗೆ ಸೆಳೆಯುವಂತೆ ಬಳಸಿ ತಿನಿಸಬಹುದು. 

4. ಪೇಯಿಂಟ್ ವಾಸನೆ

ಹೊಸತಾಗಿ ಮಾಡಿದ ಪೇಯಿಂಟ್ ವಾಸನೆ ಮನೆ ತುಂಬಾ ತುಂಬಿ ರಾತ್ರಿಯಿಡೀ ನಿದ್ದೆ ಮಾಡಲಾಗುತ್ತಿಲ್ಲವೇ? ಅದಕ್ಕಾಗಿ ಸಿಕ್ಕಾಪಟ್ಟೆ ಹಣ ಕೊಟ್ಟು ರೂಂ ಫ್ರೆಶ್ನರ್ ತರಬೇಡಿ. ಬದಲಿಗೆ ಒಂದೇ ದೊಡ್ಡ ಈರುಳ್ಳಿಯನ್ನು ಚಿಕ್ಕಚಿಕ್ಕದಾಗಿ ಕತ್ತರಿಸಿ ನೀರಿರುವ ಬಟ್ಟಲುಗಳಲ್ಲಿ ಕೋಣೆಯಲ್ಲಿ ಅಲ್ಲಲ್ಲಿ ರಾತ್ರಿ ಪೂರ್ತಿ ಇಡಿ. ಬೆಳಗ್ಗೆ ಏಳುವಷ್ಟರಲ್ಲಿ ಪೇಯಿಂಟ್ ವಾಸನೆ ಹೇಳಹೆಸರಿಲ್ಲದಂತೆ ಮಾಯವಾಗಿರುತ್ತದೆ. 

ಕ್ಯಾನ್ಸರ್‌ಗೂ ಮದ್ದು ಬೆಳ್ಳುಳ್ಳಿ, ಈರುಳ್ಳಿ

5. ಗ್ರಿಲ್ ಸ್ವಚ್ಛತೆಗೆ

ಈರುಳ್ಳಿಯನ್ನು ಅರ್ಧವಾಗಿ ಕತ್ತರಿಸಿಕೊಂಡು ಫೋರ್ಕ್‌ನಲ್ಲಿ ಹಿಡಿದುಕೊಳ್ಳಿ. ನಂತರ ಸ್ಕ್ರಬ್‌ನಿಂದ ಗ್ರಿಲ್ ಮೇಲೆ ಚೆನ್ನಾಗಿ ಉಜ್ಜಿದರೆ ಗ್ರಿಲ್ ಸ್ವಚ್ಛವಾಗುತ್ತದೆ. 

6. ಕಲೆ, ಗುಳ್ಳೆಗಳನ್ನು ತೆಗೆಯಲು

ಆನಿಯನ್‌ನಲ್ಲಿರುವ ಎಂಜೈಮ್‌ಗಳು ಮುಖದ ಕಲೆ ತೆಗೆಯುವ ಮ್ಯಾಜಿಕ್ ಕೂಡಾ ಕಲಿತಿವೆ. ಚೆನ್ನಾಗಿ ಜಜ್ಜಿದ ಈರುಳ್ಳಿಯನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಕಲೆ ಹಾಗೂ ಗುಳ್ಳೆಗಳಿರುವಲ್ಲಿ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ತೊಳೆಯಿರಿ. ಒಂದೆರಡು ವಾರ ನಿರಂತರವಾಗಿ ಮಾಡಿ ಬದಲಾವಣೆಯನ್ನು ನೀವೇ ಸ್ವತಃ ಕಂಡುಕೊಳ್ಳಿ. 

7. ಗಾಯಕ್ಕೆ ಮದ್ದು

ಈರುಳ್ಳಿಯ ಆ್ಯಂಟಿಬ್ಯಾಕ್ಟೀರಿಯಲ್ ಗುಣ ಗಾಯ ಇನ್ಫೆಕ್ಷನ್ ಆಗದಂತೆ ತಡೆಯುತ್ತದೆ. ಗಾಯವಾದಾಗ ಅದರ ಮೇಲಿನಿಂದ ಈರುಳ್ಳಿ ತುಂಡೊಂದನ್ನು ಉಜ್ಜಿರಿ. ಇದು ನೋವನ್ನೂ ಕಡಿಮೆ ಮಾಡುತ್ತದೆ. 

ರೆಸಿಪಿ: ಈರುಳ್ಳಿ ಪಕೋಡ

8. ಮೆಟಲ್ ಪಾಲಿಶ್

ಈರುಳ್ಳಿಯನ್ನು ಜಜ್ಜಿ ನೀರಿನೊಂದಿಗೆ ಮಿಕ್ಸ್ ಮಾಡಿಕೊಳ್ಳಿ. ಬಟ್ಟೆಯೊಂದರಲ್ಲಿ ಇದನ್ನು ತೆಗೆದುಕೊಂಡು ಯಾವುದೇ ಮೆಟಲ್ ಮೇಲೆ ಚೆನ್ನಾಗಿ ಉಜ್ಜಿ. ಅವು ಸ್ವಚ್ಛವಾಗಿಯೂ ಹೆಚ್ಚಿನ ಹೊಳಪಿನಿಂದಲೂ ಮಿನುಗುತ್ತವೆ. 

9.ಸುಟ್ಟ ಅನ್ನ

ಅನ್ನ ಮಾಡುವಾಗ ಹೊತ್ತಿ ಹೋಗಿ ಮನೆಯೆಲ್ಲ ಸುಟ್ಟ ವಾಸನೆ ಹರಡಿದೆಯೇ? ತಕ್ಷಣ ಅರ್ಧ ಈರುಳ್ಳಿ ಕತ್ತರಿಸಿ ಸ್ಟೌ ಪಕ್ಕ ಇಡಿ. ಇದು ಆ ಸುಟ್ಟ ವಾಸನೆಯನ್ನೆಲ್ಲ ಬೇಗನೆ ಹೀರಿಕೊಳ್ಳುತ್ತದೆ. 

ಸೆಕ್ಸ್ ಸಾಮರ್ಥ್ಯ ಹೆಚ್ಚಿಸಲು ಈರುಳ್ಳಿ ಮದ್ದು

click me!