
1. ಆಯಿಲ್ ಬೇಸ್ಡ್ ಕ್ಲೆನ್ಸರ್
ನಿಮ್ಮ ಸ್ಕಿನ್ ಟೈಪ್ ಯಾವುದೇ ಇರಲಿ, ತ್ವಚೆಯನ್ನು ಹಾಲು ಅಥವಾ ಬೇಬಿ ಆಯಿಲ್‌ನಿಂದ ಸ್ವಚ್ಛಗೊಳಿಸಬೇಕು. ಇದು ಚರ್ಮದ ಮೇಲೆ ಒಂದು ಬೇಸ್ ಆಗುತ್ತದೆ. ನಂತರದ ಹಂತದಲ್ಲಿ ಫೇಸ್ ವಾಶ್‌ನಿಂದ ಮುಖ ತೊಳೆದರೆ, ಕೆಮಿಕಲ್ಸ್‌ನಿಂದ ಉಂಟಾಗುವ ದುಷ್ಪರಿಣಾಮ ತಗ್ಗುತ್ತದೆ. ಚರ್ಮವೂ ಆಳದಿಂದ ಸ್ವಚ್ಛವಾಗುತ್ತದೆ.
2. ವಾಟರ್ ಬೇಸ್ಡ್ ಕ್ಲೆನ್ಸರ್
ನಿಮ್ಮದು ಎಣ್ಣೆ ಚರ್ಮವಾಗಿದ್ದರೆ ಡೀಪ್ ಕ್ಲೆನ್ಸಿಂಗ್ ಫೇಸ್ ವಾಶ್ ಬಳಸಿ. ಒಣತ್ವಚೆಯಾದರೆ ಮೈಲ್ಡ್ ಫೇಸ್ ವಾಶ್ ಬಳಸಿ. ಇದು ನಿಮ್ಮ ಮುಖದಲ್ಲಿ ಕುಳಿತ ಕೊಳೆ ಹಾಗೂ ಮೇಕಪ್ಪನ್ನು ಸಂಪೂರ್ಣ ತೆಗೆಯುತ್ತದೆ.
ಸ್ಟಾರ್ ನಟಿಯರ ಸೌಂದರ್ಯದ ಗುಟ್ಟು ಹಕ್ಕಿ ಪಿಕ್ಕೆ...
3. ಎಕ್ಸ್‌ಫೋಲಿಯೇಟರ್
ಸ್ಕ್ರಬ್ ಮಾಡುವುದರಿಂದ ಕಟ್ಟಿಕೊಂಡ ರಂಧ್ರಗಳು ಸ್ವಚ್ಛವಾಗುತ್ತವಲ್ಲದೆ, ಡೆಡ್‌ಸ್ಕಿನ್ ಕೂಡಾ ಹೋಗುತ್ತದೆ. ಈ ಡಲ್ ಆದ ಸತ್ತ ಚರ್ಮ ಕೋಶಗಳು ಹೋಗುತ್ತಿದ್ದಂತೆ ಒಳಗೆ ಕುಳಿತ ಹೊಸ ಚರ್ಮಕೋಶಗಳು ಹೊಳೆಯುತ್ತವೆ. ಟಫ್ ಸ್ಕಿನ್ ಇರುವವರು ಇದನ್ನು ದಿನಾ ಮಾಡಬೇಕು. ಸ್ಮೂತ್ ಸ್ಕಿನ್ ಇರುವವರು ವಾರಕ್ಕೊಮ್ಮೆ ಮಾಡಿದರೂ ಸಾಕು.
4. ಟೋನಿಂಗ್
ಕ್ಲೆನ್ಸಿಂಗ್ ಬಳಿಕ ಯಾವಾಗಲೂ ಮುಖದ ರಂಧ್ರಗಳನ್ನು ಮುಚ್ಚಲು ಟೋನರ್ ಬಳಸಬೇಕು. ರಂಧ್ರಗಳು ತೆರೆದಿದ್ದಾಗಲೇ ಕಲೆ, ಗುಳ್ಳೆಗಳು, ಮೊಡವೆ, ಅನ್‌ಈವನ್ ಸ್ಕಿನ್ ಟೋನ್ ಹಾಗೂ ಇತರೆ ತ್ವಚೆಯ ಸಮಸ್ಯೆಗಳು ಬರುವುದು.
ತ್ವಚೆಯ ಸೌಂದರ್ಯಕ್ಕೇ ಕುತ್ತು ತರೋ ಆಹಾರಗಳಿವು...
5. ಅಂಡರ್ ಐ ಕ್ರೀಮ್
ನೀವು ಬಳಸುವ ರೆಗುಲರ್ ಕ್ರೀಮ್‌ಗಳನ್ನು ಕಣ್ಣಿನ ಕೆಳಗೆ ಬಳಸಕೂಡದು. ಏಕೆಂದರೆ ಅಲ್ಲಿ ಚರ್ಮ ಬಹಳ ಸೆನ್ಸಿಟಿವ್ ಆಗಿರುತ್ತದೆ. ಹೀಗಾಗಿ ಕಣ್ಣ ಬುಡಕ್ಕೆ ಎಕ್ಸ್ಟ್ರಾ ಕಾಳಜಿ ಅಗತ್ಯ. ಹೀಗಾಗಿ ಅಂಡರ್ ಐ ಕ್ರೀಮ್ ಬಳಸಿ. ಅದರಲ್ಲೂ ನಿದ್ದೆಯ ಸಮಸ್ಯೆಯಿಂದ ಬಳಲುವವರು ಈ ಕ್ರೀಮ್ ಬಳಸಲೇಬೇಕು.
6. ಸೀರಮ್
ಸೀರಮ್ ತ್ವಚೆಯೊಳಗೆ ಹೋಗಿ ಅಲ್ಲೊಂದು ಲೇಯರ್ ಆಗಿ ಉಳಿಯುತ್ತದೆ. ಇದರಿಂದ ಮಾಯಿಶ್ಚರೈಸರ್ ಅಥವಾ ಸನ್‌ಸ್ಕ್ರೀನ್ ಚೆನ್ನಾಗಿ ಕೆಲಸ ಮಾಡುತ್ತವೆ. ಇದು ನಿಮ್ಮ ಮುಖವನ್ನು ಹೊಳಪಾಗಿಸುವುದಲ್ಲದೆ, ಕೊರಿಯನ್ ಸ್ಕಿನ್‌ಕೇರ್ ವಿಧಾನದಲ್ಲಿ ಬಹುಮುಖ್ಯ ಪಾತ್ರ ಹೊಂದಿದೆ. ಹೀಗಾಗಿ, ಸೀರಮ್ ಬಳಕೆ ನಿಯಮಿತವಾಗಿರಲಿ.
7. SPF ಹೊಂದಿರುವ ಮಾಯಿಶ್ಚರೈಸರ್/ಸನ್‌ಸ್ಕ್ರೀನ್
ನೀವು ಮನೆಯಲ್ಲೇ ಇದ್ದರೂ ಸೂರ್ಯನ ಅಪಾಯಕಾರಿ ಕಿರಣಗಳಿಂದ ತ್ವಚೆಯನ್ನು ರಕ್ಷಿಸಲು ಎಸ್‌ಪಿಎಫ್ ಹೊಂದಿರುವ ಮಾಯಿಶ್ಚರೈಸರ್ ಬಳಸುವುದು ಅಗತ್ಯ. ಹೊರ ಹೋಗುವಾಗ ಸನ್‌ಸ್ಕ್ರೀನ್ ಬಳಸಿ.
ಮುದ್ದು ಮುದ್ದಾದ ಮುಖಕ್ಕೆ ಬೇಕು ಓಟ್ಸ್ !
8. ನೈಟ್ ಕ್ರೀಮ್ ಹಾಗೂ ಫೇಶಿಯಲ್ ಆಯಿಲ್
ಮಲಗುವ ಮುನ್ನವೂ ಮೇಲೆ ಹೇಳಿದ ಮೊದಲ ಐದು ಸ್ಟೆಪ್‌ಗಳನ್ನು ಪಾಲಿಸಬೇಕು. ಜೊತೆಗೆ, ಫೇಶಿಯಲ್ ಆಯಿಲ್ ಜೊತೆಗೆ ನೈಟ್ ಕ್ರೀಮ್ ಹಚ್ಚಬೇಕು. ಇದು ದಿನದಲ್ಲಿ ತ್ವಚೆಯ ಮೇಲೆ ಆಗಿರಬಹುದಾದ ಯಾವುದೇ ಹಾನಿಯನ್ನು ಶಮನ ಮಾಡುತ್ತದೆ.
ಈ ಎಲ್ಲ ಸ್ಟೆಪ್‌ಗಳನ್ನು ಪ್ರತಿದಿನ ಫಾಲೋ ಮಾಡಿ ಬದಲಾವಣೆಯನ್ನು ನೀವೇ ಕಂಡುಕೊಳ್ಳಿ. ಜೊತೆಗೆ ವಾರಕ್ಕೆರಡು ಬಾರಿ ಫೇಸ್ ಪ್ಯಾಕ್ ಹಾಗೂ ಸ್ಕ್ರಬ್ ಬಳಸಿ. ಒಮ್ಮೆ ಸ್ಟೀಮ್ ಮಾಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.